“ಎಲ್‌ಐಸಿ ಜೀವನ್ ಶಾಂತಿ” ಎಂಬ ವಿನೂತನವಾದ ಯೋಜನೆ ಪ್ರಾರಂಭ !

ಲ್‌ಐಸಿ ಜೀವನ್ ಶಾಂತಿ: ಭಾರತೀಯ ಜೀವ ವಿಮಾ ನಿಗಮವು ಅನುಕೂಲಸ್ಥರಿಗಾಗಿಯೇ “ಎಲ್‌ಐಸಿ ಜೀವನ್ ಶಾಂತಿ” ಎಂಬ ವಿನೂತನವಾದ ಯೋಜನೆಯನ್ನು ಪ್ರಾರಂಭಿಸಿದೆ. ನಿವೃತ್ತಿಯ ವೇಳೆ ಪಿಂಚಣಿ ಸೌಕರ್ಯವನ್ನು ಬಯಸುವವರಿಗಾಗಿಯೇ ಈ ಯೋಜನೆಯನ್ನು ವಿನ್ಯಾಸಗೊಳಿಸಲಿದೆ.

ನಿವೃತ್ತಿಯ ನಂತರವೂ ಆರ್ಥಿಕ ಸ್ವಾವಲಂಬನೆ ಬಯಸುವವರಿಗೆ “ಎಲ್‌ಐಸಿ ಜೀವನ್ ಶಾಂತಿ” ಯೋಜನೆ ಸಹಾಯ ಮಾಡಲಿದ್ದು, ಇದರಿಂದಾಗಿ ಮುಂದೆ ಪಾಲಿಸಿದಾರರು ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಬಹುದಾಗಿದೆ.

ಯಾಕೆಂದರೆ “ಜೀವನ್ ಶಾಂತಿ ಯೋಜನೆ”ಯಡಿಯಲ್ಲಿ ನೀವು ಮಾಸಿಕವಾಗಿ ಒಂದು ಲಕ್ಷ ರೂ.ಗಳಿಂತಲೂ ಹೆಚ್ಚು ಪಿಂಚಣಿ ಪಡೆಯಬಹುದಾಗಿದೆ. ಇದಲ್ಲದೆ ನಿಗಮವು ಇತ್ತೀಚೆಗೆ ತಮ್ಮ ವಾರ್ಷಿಕ ದರಗಳನ್ನು ನವೀಕರಿಸಿದ್ದು, ಹೀಗಾಗಿ ಪಾಲಿಸಿದಾರರು ತಮ್ಮ ಪ್ರೀಮಿಯಂಗಳಿಗೆ ಹೆಚ್ಚಿನ ಪಿಂಚಣಿ ಪಡೆಯಬಹುದಾಗಿದೆ.

ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ನಿಯಮಿತ ಆದಾಯವನ್ನು ಬಯಸುವವರಿಗಾಗಿಯೇ ಈ ಪಾಲಿಸಿಯನ್ನು ವಿನ್ಯಾಸಗೊಳಿಸಲಾಗಿದೆ. ಅವಧಿಗೂ ಮುನ್ನ ನಿವೃತ್ತಿಯನ್ನು ಪಡೆದುಕೊಳ್ಳಲು ಬಯಸುವವರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಇನ್ನು ಏಕ ಪ್ರೀಮಿಯಂ ಪಾವತಿ ಮೂಲಕದ ಇದರಲ್ಲಿ ಹೂಡಿಕೆ ಮಾಡಿ ತಮ್ಮ ಪಿಂಚಣಿ ಗುರಿಯನ್ನು ಸಾಧಿಸಬಹುದಾಗಿದೆ.

ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ಗರಿಷ್ಟ ಮಿತಿ ಇರುವುದಿಲ್ಲ. ನಿಮಗೆ ತಿಂಗಳಿಗೆ ಬೇಕಾಗಿರುವ ಆಧಾಯದ ಆಧಾರ ಮೇಲೆ ನೀವು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ನಿಮಗೆ ಮಾಸಿಕವಾಗಿ ಒಂದು ಲಕ್ಷ ರೂ. ಪೆನ್ಷನ್ ಬೇಕು ಎಂದಾದರೆ, ನೀವು ಒಂದು ಕೋಟಿ ರೂ.ಗಳಂತೆ 12 ವರ್ಷ ಹೂಡಿಕೆ ಮಾಡಬೇಕಾಗುತ್ತದೆ. 12 ವರ್ಷದ ಬಳಿಕ ನಿಮಗೆ ಮಾಸಿಕವಾಗಿ 1.06 ಲಕ್ಷ ರೂ. ಆದಾಯ ದೊರಕುತ್ತದೆ.

ಒಂದು ವೇಳೆ ನೀವು ಕೇವಲ ಹತ್ತು ವರ್ಷ ಮಾತ್ರ ಹೂಡಿಕೆ ಮಾಡಲು ಬಯಸಿದರೆ, ನಿಮಗೆ ತಿಂಗಳಿಗೆ 94,840 ರೂ. ಪಿಂಚಣೆ ದೊರಕುತ್ತದೆ. ನೀವು ಕೇವಲ 50,000 ರೂ. ಮಾತ್ರ ಪೆನ್ಷನ್ ಸಾಕು ಎಂದು ಭಾವಿಸಿದರೆ, ನೀವು ಕೇವಲ 50 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ. 12 ವರ್ಷಗಳ ಕಾಲ ಹೂಡಿಕೆ ಮಾಡಿದರೆ ನಿಮಗೆ 53,460 ರೂ. ಮಾಸಿಕವಾಗಿ ದೊರಕುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಕಳೆದ ವರ್ಷ ಕರ್ನಾಟಕದಾದ್ಯಂತ ತೀವ್ರ ವಿವಾದ ಸೃಷ್ಟಿಸಿದ್ದ ಹಿಜಾಬ್ ಪ್ರಕರಣ.

Thu Feb 23 , 2023
ನವದೆಹಲಿ,ಫೆ. : ಕಳೆದ ವರ್ಷ ಕರ್ನಾಟಕದಾದ್ಯಂತ ತೀವ್ರ ವಿವಾದ ಸೃಷ್ಟಿಸಿದ್ದ ಹಿಜಾಬ್ ಪ್ರಕರಣ. ಇದೀಗ ಮತ್ತೇ ಮುನ್ನಲೆಗೆ ಬಂದಿದ್ದು, ಕರ್ನಾಟಕದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ಶೀಘ್ರ ತೀರ್ಪು ನೀಡುವಂತೆ ವಿದ್ಯಾರ್ಥಿನಿಯರ ಗುಂಪೆÇಂದು ಸುಪ್ರೀಂಗೆ ಮನವಿ ಮಾಡಿದೆ. ಈ ಬಗ್ಗೆ ಪ್ರತ್ಯೇಕ ಪೀಠ ರಚಿಸಿ ವಿಚಾರಣೆ ನಡೆಸಲಾಗುವುದು ಎಂದ ಮುಖ್ಯ ನ್ಯಾ. ಚಂದ್ರಚೂಡ್, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಸಿ ಸುಪ್ರೀಂ […]

Advertisement

Wordpress Social Share Plugin powered by Ultimatelysocial