ಕಾರಿನ ನಂಬರ್ ಪ್ಲೇಟ್ ಒಂದು ಬರೋಬ್ಬರಿ 27 ಕೋಟಿ ರೂಪಾಯಿಗೆ ಮಾರಾಟ

 

 

ಹಾಂಗ್‌ಕಾಂಗ್‌ನಲ್ಲಿ ಭಾನುವಾರ ಹರಾಜು ನಡೆದಿದೆ, ಈ ಹರಾಜಿನಲ್ಲಿ ಕಾರಿನ ನಂಬರ್ ಪ್ಲೇಟ್ ಒಂದು ಬರೋಬ್ಬರಿ 27 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಅಂದರೆ 25.5 ಮಿಲಿಯನ್ ಹಾಂಗ್‌ಕಾಂಗ್‌ ಡಾಲರ್‌ಗೆ ಮಾರಾಟವಾಗಿದೆ. ವಿಚಿತ್ರವಾದ ಮತ್ತು ಗೊಂದಲಕಾರಿ ವಾಹನದ ನಂಬರ್‌ ಪ್ಲೇಟ್ ವಿಚಾರದಲ್ಲಿ ಅತೀ ಹೆಚ್ಚು ಕೊಡುಗೆಯನ್ನು ಹಾಂಗ್‌ಕಾಂಗ್‌ನ ಈ ನಗರ ನೀಡಿದೆ.

 

ಬ್ಲೂಮ್‌ಬರ್ಗ್ ಪ್ರಕಾರ, ಹಾಂಗ್ ಕಾಂಗ್ ಸಾರಿಗೆ ಇಲಾಖೆಯು ಹೊಸ ವರ್ಷದ ಪ್ರಯುಕ್ತ ಈ ಹರಾಜನ್ನು ನಡೆಸಿದೆ. ಈ ಸಂದರ್ಭದಲ್ಲಿ “R” ನಂಬರ್‌ ಪ್ಲೇಟ್‌ಗೆ ಹರಾಜು ಭರದಿಂದ ಸಾಗಿದ್ದು 27 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಇನ್ನು ಸಾರಿಗೆ ಕಾರ್ಯದರ್ಶಿ ಲ್ಯಾಮ್ ಸೈ-ಹಂಗ್ ನೀಡಿದ ಮಾಹಿತಿ ಪ್ರಕಾರ ಈ ಹಿಂದೆ 2021ರಲ್ಲಿ 26 ಮಿಲಿಯನ್ ಹಾಂಗ್‌ಕಾಂಗ್‌ ಡಾಲರ್‌ಗೆ ಕಾರಿನ ನಂಬರ್‌ ಪ್ಲೇಟ್‌ ಮಾರಾಟವಾಗಿದೆ. ಇದಕ್ಕಿಂತ ಕೊಂಚ ಹೆಚ್ಚಳ ದರದಲ್ಲಿ “R” ನಂಬರ್‌ ಪ್ಲೇಟ್‌ ಮಾರಾಟವಾಗಿದೆ.

2006ರಲ್ಲಿ ವೈಯಕ್ತಿಕ ಕಾರಿನ ನಂಬರ್‌ ಪ್ಲೇಟ್ ವ್ಯವಸ್ಥೆಯು ಆರಂಭವಾಗಿದೆ. 160 ಹರಾಜಿನಲ್ಲಿ ಪಟ್ಟಾಗಿ 600 ಮಿಲಿಯನ್ ಹಾಂಗ್‌ಕಾಂಗ್‌ ಡಾಲರ್‌ ಸಂಗ್ರಹ ಮಾಡಲಾಗಿದೆ ಎಂದು ಲ್ಯಾಮ್ ಸೈ-ಹಂಗ್ ತಿಳಿಸಿದ್ದಾರೆ. 40,000 ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಆಗಿದೆ. ದುಬಾರಿ ನಂಬರ್‌ ಪ್ಲೇಟ್‌, ಭಾರತದಲ್ಲಿನ ನಂಬರ್ ಪ್ಲೇಟ್ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ವೇತನ ಹೆಚ್ಚಳ, ಸೇವಾ ಭದ್ರತೆಗೆ ಸಿಎಂ ಬೊಮ್ಮಾಯಿ ಭರವಸೆ:

Wed Feb 15 , 2023
    ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ವೇತನ ಹೆಚ್ಚಳಕ್ಕೆ ಹಾಗೂ 60 ವರ್ಷದವರೆಗೂ ಸೇವಾ ಭದ್ರತೆ ಬಗ್ಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಗೌರವಾಧ್ಯಕ್ಷ ಆಯನೂರು ಮಂಜುನಾಥ ಧನ್ಯವಾದ ಸಲ್ಲಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಆರೋಗ್ಯ ಇಲಾಖೆ ಮತ್ತು ರಾಷ್ಟೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು […]

Advertisement

Wordpress Social Share Plugin powered by Ultimatelysocial