ಖಾಸಗಿ ಆಸ್ಪತ್ರೆ ವಿರುದ್ದ ಸುಧಾರಾಣಿ ಗರಂ

ಸ್ಯಾಂಡಲ್ ವುಡ್ ನಟಿ ಗೂ ಕಾಡಿದ ಖಾಸಗಿ ಆಸ್ಪತ್ರೆ ವೈದ್ಯರ ಬೇಜವಾಬ್ದಾರಿ ನಡೆ. ಅಪೋಲೊ ಆಸ್ಪತ್ರೆ ವಿರುದ್ಧ ನಟಿ ಸುಧಾರಾಣಿ ಗರಂ ಆಗಿದ್ದಾರೆ.  ತಡ ರಾತ್ರಿ ೧೦ ಗಂಟೆ ಯಿಂದ ೧೧ ಗಂಟೆ ವರೆಗೂ ಅಂದರೆ ಒಂದು ಗಂಟೆಗಳ ಕಾಲ ಗೇಟ್ ಯಿಂದ ಹೊರನಿಲ್ಲಿಸಿ ನಟಿ ಸುಧಾರಾಣಿಗೆ ಅಪೋಲೊ ಆಸ್ಪತ್ರೆ ಸಿಬ್ಬಂದಿ ಆಟವಾಡಿಸಿದ್ದಾರೆ. ನಿನ್ನೆ ತಡರಾತ್ರಿ ಸುಧಾರಾಣಿ ಅಣ್ಣನ ಪುತ್ರಿ ಕಿಡ್ನಿ ಸ್ಟೋನ್ ಸಮಸ್ಯೆ ಯಿಂದಾಗಿ ತಲೆ ಸುತ್ತಿ ಬಿದ್ದಿದ್ದಾರೆ. ಹೀಗಾಗಿ ನಟಿ ಸುಧಾರಾಣಿ ತನ್ನ ಸಹೋದರನ ಪುತ್ರಿಯನ್ನು ಕರೆದುಕೊಂಡು ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಆ್ಯಂಬುಲೆನ್ಸ್ ನಲ್ಲಿ ಬಂದಿದ್ದಾರೆ.‌ ಈ ವೇಳೆ ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್ ಇಲ್ಲ ಅಂತ ಬೇಜವಾಬ್ದಾರಿ ಯಿಂದ ವರ್ತಿಸಿದ್ದಾರೆ.. ಇದರಿಂದ ಬೇಸತ್ತು ಕೊನೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಆಸ್ಪತ್ರೆ ಒಳಗೆ ದಾಖಲಾತಿ ನೀಡಲಾಗಿದೆ.‌. ಈ ಬಗ್ಗೆ ಮಾತನಾಡಿದ ಸುಧಾರಾಣಿ ಅಪೊಲೊ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.. ವೈದ್ಯರು ದೇವರ ಸಮಾನ ಅಂತೀವಿ.. ಆದ್ರೆ ಇಲ್ಲಿ‌‌ನ ಪರಿಸ್ಥಿತಿ ಯೇ ಬೇರೆ ಇದೆ. ನಮ್ಮನ್ನು ರಾತ್ರಿ ೧೦ ಗಂಟೆ ಯಿಂದ ಹೊರ ನಿಲ್ಲಿಸಿದ್ರು.. ಕಮಿಷನರ್ ಗೆ ಫೋನ್ ಮಾಡಿದ ಬಳಿಕ ಒಳಗೆ ಸೇತರಿಸಿಕೊಂಡಿದ್ದಾರೆ ಅಂತ ಹೇಳಿದ್ರು.

Please follow and like us:

Leave a Reply

Your email address will not be published. Required fields are marked *

Next Post

ಹೋಟೆಲ್ ನಲ್ಲಿ ವೇಶ್ಯಾವಾಟಿಕೆ

Tue Jul 28 , 2020
ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. ಲಾಡ್ಜ್ ನಡೆಸಲು ಅನುಮತಿಯನ್ನು ಪಡೆದು ಅನಧಿಕೃತವಾಗಿ ವಾಶ್ಯಾವಾಟಿಕೆ ನಡೆಸುತ್ತಿದ್ದ ಗೌರವ್, ಹೀನಾ, ಹಾಗೂ ಅಣ್ಣಪ್ಪ ಎಂಬವರು ಬಂಧನಕ್ಕೊಳಗಗಿದ್ದಾರೆ. ಬಂಧಿತರು ಕೆಲಸದ ಆಮಿಷ ಒಡ್ಡಿ ಹೊರ ರಾಜ್ಯದ ಯುವತಿಯರನ್ನು ಕರೆಸಿ ಧಂಧೆಯನ್ನು ನಡೆಸುತ್ತಿದ್ದರು. ಆನ್ ಲೈನಲ್ಲಿ ಮೊಬೈಲ್ ನಂಬರ್ ಹಾಕಿ, ಟೆಲಿಕಾಲರ್ ಮೂಲಕ ಗಿರಾಕಿಗಳನ್ನು ಕರೆಸಿಕೊಳ್ಳುತ್ತಿದ್ದ ಬಂಧಿತರು ಯಾರಿಗೂ ಗೊತ್ತಾಗದಂತೆ ಒಂದೊಂದು ನಬಂಬರ್ ಯೂಸ್ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ಬಂಧಿಸಿರುವ […]

Advertisement

Wordpress Social Share Plugin powered by Ultimatelysocial