ಗುವಾಹಟಿ ವೈದ್ಯಕೀಯ ಕಾಲೇಜಿನಲ್ಲಿ ಪ್ಲಾಸ್ಮಾ ದಾನ ಶಿಬಿರ

ರಾಜ್ಯ ಆರೋಗ್ಯ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಸಹಯೋಗದೊಂದಿಗೆ ಅಸ್ಸಾಂ ಪೊಲೀಸರು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಶಿಬಿರವನ್ನು ಆಯೋಜಿಸಿದ್ದರು. ಕೊರೊನಾದಿಂದ ಚೇತರಿಸಿಕೊಂಡ 43 ಮಂದಿ ಪೊಲೀಸ್ ಸಿಬ್ಬಂದಿ ಶಿಬಿರದಲ್ಲಿ ಪ್ಲಾಸ್ಮಾ ದಾನ ಮಾಡಿದರು. ಅಸ್ಸಾಂನ ಒಟ್ಟು 67 ಪೊಲೀಸ್​ ಸಿಬ್ಬಂದಿ ಸ್ವಯಂಪ್ರೇರಿತರಾಗಿ ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾವನ್ನು ದಾನ ಮಾಡಲು ಮುಂದೆ ಬಂದಿದ್ದರು. ಆದರೆ ಅವರಲ್ಲಿ 43 ಸಿಬ್ಬಂದಿಯು ಪ್ಲಾಸ್ಮಾ ದಾನಕ್ಕೆ ಅರ್ಹರಾಗಿರುತ್ತಾರೆ. ಪ್ಲಾಸ್ಮಾ ದಾನ ಮಾಡಿದ ಪೊಲೀಸರನ್ನು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಆರೋಗ್ಯ ಇಲಾಖೆ ಪಿಜುಶ್ ಹಜಾರಿಕಾ, ಗುವಾಹಟಿ ಪೊಲೀಸ್ ಆಯುಕ್ತರು ಮತ್ತು ಇತರ ಗಣ್ಯರು ಸನ್ಮಾನಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಮರಿ ಆನೆಗೆ ಜನ್ಮ ನೀಡಿದ ೧೨ ವರ್ಷದ ರೂಪಾ

Sun Aug 2 , 2020
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಗೆ ಇಂದು ಖುಷಿಯ ದಿನ. ಉದ್ಯಾನವನದ ೧೨ ರ‍್ಷದ ರೂಪಾ ಎಂಬ ಹೆಣ್ಣು ಆನೆ ಗಂಡು ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆನೆ ಎರಡೂ ಆರೋಗ್ಯವಾಗಿವೆ ಎಂದು ಉದ್ಯಾನವನದ ಕರ‍್ಯಕಾರಿ ನರ‍್ದೇಶಕರು ತಿಳಿಸಿದ್ದಾರೆ. ರೂಪಾಗೆ ಇದು ಎರಡನೇ ಮರಿಯಾಗಿದ್ದು ಈ ಹಿಂದೆ ೨೦೧೬ರಲ್ಲಿ ಹೆಣ್ಣು ಮರಿಯಾನೆಗೆ ಜನ್ಮ ನೀಡಿತ್ತು. ಈ ಮೂಲಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ ೨೪ಕ್ಕೆ ಏರಿದೆ. Please follow and […]

Advertisement

Wordpress Social Share Plugin powered by Ultimatelysocial