ಗೆಳೆಯ ದಚ್ಚು ಬಗ್ಗೆ ಮನ ಬಿಚ್ಚಿ ಮಾತನಾಡಿದ ಅಭಿನಯ ಚಕ್ರವರ್ತಿ ಕಿಚ್ಚ..!

ಅಭಿಮಾನಿಗಳ ಪ್ರೀತಿಯ ಕಿಚ್ಚ ಸುದೀಪ್ ಅವರು ಬರ್ತ್​ ಡೇ ಖುಷಿಯಲ್ಲಿರೋ ವೇಳೆಯೇ ತನ್ನ ಕುಚುಕು ಗೆಳೆಯ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಕುರಿತು ಮಾತನಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಇಬ್ಬರು ದಿಗ್ಗಜ ನಟರ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿ ಬೇರೆಯದ್ದೇ ಗಾಳಿ ಬೀಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಸಂಸದೆ ಸುಮಲತಾ ಅವರ ಬರ್ತ್​ ಡೇಯಲ್ಲಿ ಇಬ್ಬರು ಸ್ಟಾರ್​ಗಳು ಕೆಲ ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಷ್ಟೆಲ್ಲ ಬೆಳವಣಿಗೆಯ ಮಧ್ಯೆ ಸುದೀಪ್​ ಅವರು ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ.

ಹುಟ್ಟುಹಬ್ಬದ ಜೊತೆಗೆ ನಟ ಸುದೀಪ್ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನಟ ದರ್ಶನ್ ಹೆಸರನ್ನು ಹೇಳದೇ ಮಾಧ್ಯಮ ಮತ್ತು ನೀವು ಸರಿ ಹೋಗಿರುವ ವಿಷಯ ಕೇಳಿ ನನಗೆ ಖುಷಿಯಾಯಿತು. ಕೆಲವು ನಡೆಯುತ್ತವೆ. ಕೆಲವೊಂದು ಗೊತ್ತಿಲ್ಲದೇ ನಡೆದು ಹೋಗುತ್ತವೆ. ದರ್ಶನ್ ಈಸ್​ ಎ ಬಿಗ್​ ನೇಮ್, ಬಿಗ್ ಆ್ಯಕ್ಟರ್, ಬಿಗ್ ಸ್ಟಾರ್. ಎಲ್ಲವೂ ಸರಿ ಇರಬೇಕು. ಸಿನಿಮಾ ಸೋಲು ಗೆಲುವಿನ ಮೇಲೆ ಮಾತ್ರ ನಿಂತಿರಬೇಕು. ಇಂತಹವುಗಳು ನಡೆಯಬಾರದು ಎಂದು ಸುದೀಪ್ ಹೇಳಿದರು.

ನೀವೆಲ್ಲ ಅಂದುಕೊಂಡ ಹಾಗೆ ನಾವೇನು ಕಿತ್ತಾಡಿಕೊಂಡು, ಮಾಡಿಕೊಂಡು ಹಾಗೇನಾದ್ರೂ ಹಾಗಿದ್ದರೇ ಉದ್ದುದ್ದ ಪತ್ರಗಳನ್ನು ಬರೆಯುತ್ತಿರಲಿಲ್ಲ. ಕೆಲವೊಂದು ಘಟನೆಗಳು ನಡೆದಾಗ ನಾನು ಪತ್ರಗಳನ್ನು ಬರೆಯುತ್ತಿರಲಿಲ್ಲ ಎಂದರು.

ನೀವೆಲ್ಲ ಯಾವುದೋ ಕಾರ್ಯಕ್ರಮದಲ್ಲಿ ಕುಳಿತುಕೊಂಡ ತಕ್ಷಣ ಎಲ್ಲ ಸರಿ ಹೋಗುತ್ತೆ ಅಂತಾ ಅನ್ಕೋಂತಿರಲ್ಲ. ಇಟ್ಸ್​ ನಾಟ್​ ಲೈಕ್​ ದಟ್​. ಅವರಲ್ಲಿ ಕೆಲವು ಪ್ರಶ್ನೆಗಳು ಇರುತ್ತವೆ. ನನ್ನಲ್ಲೂ ಕೆಲ ಪ್ರಶ್ನೆಗಳಿರುತ್ತವೆ. ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗಲೇ ಕೆಲವು ಸರಿ ಹೋಗೋದು. ಅದಕ್ಕೆ ನೀವೆಲ್ಲರೂ ಕಾಲಾವಕಾಶ ಕೊಡಬೇಕು ಎಂದು ಸುದೀಪ್ ಹೇಳಿದರು.

ಸುಮಲತಾ ಅವರ ಬರ್ತ್​ಡೇ ಕಾರ್ಯಕ್ರಮದಲ್ಲಿ ತುಂಬಾ ಕಂಫರ್ಟ್​ ಜೋನ್ ಇತ್ತು. ಹಾಗಂತ ಯಾರೂ ಮುಖ ತಿರುಗಿಸಿಕೊಂಡಿಲ್ಲ. ಎಲ್ಲ ಚೆನ್ನಾಗಿದ್ದೇವೆ. ಎಷ್ಟೋ ವರ್ಷದ ನಂತರ ಮನೆ ಬಿಟ್ಟು ಪಾರ್ಟಿಗೆ ಹೋಗಿರೋದು. ನನಗೆ ಮುಂಚನೇ ಗೊತ್ತಿಲ್ವಾ ಅಲ್ಲಿ ದರ್ಶನ್ ಇರುತ್ತಾರಂತ ಎಂದು ಸುದೀಪ್ ಸ್ಮೈಲ್ ಮಾಡುತ್ತಾ ಹೇಳಿದರು. ಬೇರೆ ಬೇರೆ ಇದ್ದರೂ ಒಬ್ಬರಿಗೊಬ್ಬರು ರೆಸ್ಪೆಕ್ಟ್​ ಕೊಡುತ್ತಿದ್ದೇವೆ ಎಂದಿದ್ದಾರೆ.

ನನಗೂ ಸಂತೋಷವಾಯಿತು. 6-7 ವರ್ಷಗಳ ನಂತರ ಇಬ್ಬರು ಒಬ್ಬರಿಗೊಬ್ಬರನ್ನು ನೋಡಿದ್ವಿ. ಸೋಷಿಯಲ್ ಮೀಡಿಯಾದಲ್ಲಿ ಯಾರೇ ಪೋಸ್ಟ್ ಹಾಕಿದ್ರೂ ನಾನು ನೋಡೋಕೆ ಹೋಗಲ್ಲ. ಇನ್ನೊಬ್ಬರ ಆಧಾರದ ಮೇಲೆ ನಾನು ಜೀವನ ನಡೆಸೋದಿಲ್ಲ. ನನ್ನ ಬಳಿ ಒಬ್ಬ ವ್ಯಕ್ತಿ ಬಂದು ಬಿಟ್ಟು ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಅದನ್ನು ನಾನು ನಂಬುತ್ತೇನೆ. ಅದಕ್ಕೂ ಒಂದು ಪ್ರಶ್ನೆ ಹಾಕ್ತಿನಿ ಯಾರೂ ಕೂಡ ಬಲವಂತವಾಗಿ ಹೇಳಿಸುತ್ತಿಲ್ವಾ, ಅಥವಾ ಭಯದಲ್ಲಿ ಏನಾದ್ರೂ ಹೇಳುತ್ತಿದ್ದನಾ ಅಂತ ಮೊದಲೇ ಕೇಳಿರುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

CM ಅನುಮೋದನೆ ಇಲ್ಲದೆ ಯಾವುದೇ ವರ್ಗಾವಣೆ ಮಾಡುವಂತಿಲ್ಲ- ರಾಜ್ಯ ಸರ್ಕಾರ ಮಹತ್ವದ ಆದೇಶ..!

Sat Sep 2 , 2023
ನನ್ನ ಅನುಮತಿ ಇಲ್ಲದೆ ಇನ್ಮುಂದೆ ಯಾವುದೇ ವರ್ಗಾವಣೆ ಮಾಡುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪರ ಆದೇಶ ಹೊರಡಿಸಿರೋ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಯಾವುದೇ ಇಲಾಖೆಯೂ ಮುಖ್ಯಮಂತ್ರಿಗಳ ಅನುಮೋದನೆ ಇಲ್ಲದೆ ವರ್ಗಾವಣೆ ಮಾಡಬಾರದು. ಅದು ಅವಧಿಪೂರ್ವ ವರ್ಗಾವಣೆ ಆಗಿರಲಿ, ಸಾಮಾನ್ಯ ವರ್ಗಾವಣೆ ಆಗಿರಲಿ, ಯಾವುದೇ ಮಾಡುವಂತಿಲ್ಲ. ಸರ್ಕಾರಿ ನೌಕರರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ, ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾಯಿಸೋ ಮುನ್ನ […]

Advertisement

Wordpress Social Share Plugin powered by Ultimatelysocial