ತಲೆ ಕೂದಲು ಬೆಳ್ಳಗಾದವರಿಗೆ ಇಲ್ಲಿದೆ ಸುಲಭ ‘ಪರಿಹಾರ’

ಹಿಂದೆ ವಯಸ್ಸಾಗುತ್ತಲೇ ಕೂದಲು ಬೆಳ್ಳಗಾಗುತ್ತಿತ್ತು. ಆದರೆ ಈಗ ಹಾಗಲ್ಲ, ಹದಿಹರೆಯದವರ ಅಷ್ಟೇ ಯಾಕೆ ಮಕ್ಕಳ ಕೂದಲು ಕೂಡಾ ಬೆಳ್ಳಗಾಗುತ್ತಿದೆ. ಇದಕ್ಕೆ ಮನೆಮದ್ದುಗಳನ್ನು ಪ್ರಯತ್ನಿಸೋಣ.ಕಾದ ತೆಂಗಿನ ಎಣ್ಣೆಗೆ ಮೂರ್ನಾಲ್ಕು ನೆಲ್ಲಿಕಾಯಿ ತುಂಡನ್ನು ಹಾಕಿ ಚೆನ್ನಾಗಿ ಕುದಿಸಿ ಆರಿಸಿದ ಮೇಲೆ ತಲೆಗೆ ಹಚ್ಚಿಕೊಂಡು ನಂತರ ರಾತ್ರಿ ಪೂರ್ತಿ ಹಾಗೆ ಬಿಟ್ಟು, ಮುಂಜಾನೆ ಸ್ನಾನ ಮಾಡುವುದರಿಂದ ವಿಟಮಿನ್ ಸಿ ಹೆಚ್ಚುತ್ತದೆ.ಇನ್ನು ನೆಲ್ಲಿಕಾಯಿ ಜೊತೆ ಮೆಂತೆ ಪುಡಿಯನ್ನು ಬೆರೆಸಿ ಹಚ್ಚಿಕೊಂಡರೆ ಬಿಳಿ ಕೂದಲ ಸಮಸ್ಯೆ ಮಾಯವಾಗುತ್ತದೆ.ತೆಂಗಿನ ಎಣ್ಣೆಗೆ ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾದ ಮೇಲೆ ಅದನ್ನು ಕೂದಲಿಗೆ ಮಸಾಜ್ ಮಾಡಿ 30 ರಿಂದ 45 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು. ಇದರಿಂದ ಕಾಂತಿಯುತವಾದ ಕಪ್ಪು ಕೂದಲು ನಿಮ್ಮದಾಗುತ್ತದೆ.ಈರುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಿದರೆ ಕೂದಲು ಬೇಗ ಬೆಳ್ಳಗೆ ಆಗುವುದಿಲ್ಲ. ನೆಲ್ಲಿಕಾಯಿ ಹಾಗೂ ನಿಂಬೆ ಹಣ್ಣನ್ನು ಕೂದಲಿಗೆ ನಿಯಮಿತವಾಗಿ ಹಚ್ಚುತ್ತಿದ್ದರೆ ಕೂದಲು ಬಿಳಿಯಾಗದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರನ್ನು ಕಾಡುವ ಮೂತ್ರಕೋಶದ ಸೋಂಕು ! ಸಂಪೂರ್ಣ ಮಾಹಿತಿ

Wed Feb 2 , 2022
ಮೂತ್ರದ ಸೋಂಕು ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ. 100 ರಲ್ಲಿ 80 ಮಂದಿ ಮೂತ್ರದ ಸೋಂಕಿಗೆ ಒಳಗಾಗ್ತಿದ್ದಾರೆ. ಮೂತ್ರವನ್ನು ಬಹಳ ಹೊತ್ತು ಕಟ್ಟಿಕೊಂಡಿದ್ದರೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ಮೂತ್ರಕೋಶದ ಸೋಂಕಿಗೆ ಕಾರಣವಾಗುತ್ತದೆ. ಇದರಿಂದ ಗರ್ಭಧಾರಣೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ.ಮೂತ್ರ ಕೋಶದ ಸೋಂಕಿಗೆ ವಯಸ್ಸಿನ ಮಿತಿಯಿಲ್ಲ. ಎಲ್ಲ ವಯಸ್ಸಿನಲ್ಲಿಯೂ ಇದು ಕಾಡುತ್ತದೆ. ಮೂತ್ರವನ್ನು ಹೆಚ್ಚು ಕಾಲ ಕಟ್ಟಿದ್ರೆ ಸೋಂಕಿಗೆ ಕಾರಣವಾಗುತ್ತದೆ. ಮೂತ್ರ ವಿಸರ್ಜನೆ ಮಾಡುವಾಗ ಉರಿ, ತುರಿಕೆ ಸೇರಿದಂತೆ ಕೆಲ […]

Advertisement

Wordpress Social Share Plugin powered by Ultimatelysocial