ತಾಂತ್ರಿಕ ದೋಷ : ಏರ್ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ

ವದೆಹಲಿ ,ಫೆ.22 – ನ್ಯೂಯಾರ್ಕ್‍ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಮಾರ್ಗಮಧ್ಯೆ ಇಂಜಿನ್ ಒಂದರಲ್ಲಿ ತೈಲ ಸೋರಿಕೆಯಾದ ಕಾರಣ ಸ್ವೀಡನ್‍ನ ಸ್ಟಾಕ್‍ಹೋಮ್ ವಿಮಾನನಿಲ್ದಾಣದಲ್ಲಿ ಇಳಿಸಲಾಗಿದೆ.

ನಿಗದಿಯಂತೆ ನವದೆಹಲಿಯಿಂದ ಮೇಲೆ ಹಾರಿದ ಏರ್ ಇಂಡಿಯಾ ಬೋಯಿಂಗ್ 777-300 ಇಆರ್ ವಿಮಾನ ಪೈಲಟ್ ಇಂಜಿನ್ ಒಂದರಲ್ಲಿ ತೈಲ ಸೋರಿಕೆ ಯಾಗಿದೆ ತಿಳಿಸಿದ್ದು ಕೂಡಲೆ ಹಿಂತಿರುಗುವಂತೆ ಸೂಚಿಸಲಾಯಿತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ತೈಲ ಸೋರಿಕೆಯ ಆಗಿ ಎಂಜಿನ್ ಸ್ಥಗಿತಗೊಳಿಸ ನಂತರ ವಿಮಾನವನ್ನು ಪೈಲಟ್‍ ಸುರಕ್ಷಿತವಾಗಿ ಸ್ಟಾಕ್‍ಹೋಮ್‍ನಲ್ಲಿ ಇಳಿಸಿದರು ವಿಮಾನ ನಿಲ್ದಾಣದಲ್ಲಿ ತಪಾಸಣೆಯ ಸಮಯದಲ್ಲಿ, ಎಂಜಿನ್ ಎರಡರ ಡ್ರೈನ್ ಮಾಸ್ಟ್‍ನಿಂದ ತೈಲ ಹೊರಬರುತ್ತಿರುವುದು ಕಂಡುಬಂದಿದೆ,

ನವದೆಹಲಿಯಿಂದ ಹೊರಟಿದ್ದ ವಿಮಾನವನ್ನು ತಾಂತ್ರಿಕ ಸಮಸ್ಯೆಯಿಂದಾಗಿ ಸ್ವೀಡನ್‍ನ ಸ್ಟಾಕ್‍ಹೋಮ್‍ಗೆ ತಿರುಗಿಸಲಾಗಿದೆ .ಪ್ರಯಾಣಿಕರು ಸುರಕ್ಷಿತವಾಗಿದ್ದು ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ನಂತರ ತಿಳಿಸಿದ್ದಾರೆ.

ಕಳೆದ ಸೋಮವಾರ, ನ್ಯೂಯಾರ್ಕ್‍ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಲಂಡನ್‍ಗೆ ತಿರುಗಿಸಲಾಗಿತ್ತು .

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

2024ರಲ್ಲಿ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಲಿದೆ: ಮಲ್ಲಿಕಾರ್ಜುನ ಖರ್ಗೆ

Wed Feb 22 , 2023
ನವದೆಹಲಿ : 2024ರಲ್ಲಿ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ವಿಪಕ್ಷ ಸಮ್ಮಿಶ್ರ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 2024ರಲ್ಲಿ ಕೇಂದ್ರದಲ್ಲಿ ಮೈತ್ರಿ ಸರ್ಕಾರ ಬರಲಿದೆ, ಕಾಂಗ್ರೆಸ್ ನೇತೃತ್ವ ವಹಿಸಲಿದೆ, ನಾವು ಇತರ ಪಕ್ಷಗಳೊಂದಿಗೆ ಮಾತನಾಡುತ್ತಿದ್ದೇವೆ. ಇಲ್ಲದಿದ್ದರೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನವು ಹೋಗುತ್ತದೆ ಎಂದು ಅವರು ನಾಗಾಲ್ಯಾಂಡ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಹಲವಾರು ಬಾರಿ, ‘ದೇಶವನ್ನು ಎದುರಿಸಬಲ್ಲ ಏಕೈಕ ವ್ಯಕ್ತಿ ನಾನು, […]

Advertisement

Wordpress Social Share Plugin powered by Ultimatelysocial