ಪ್ರೇಮಿಗಳ ದಿನಾಚರಣೆ : ಶ್ವಾನಗಳಿಗೆ ಬಟ್ಟೆ ತೊಡಿಸಿ, ಹಾರ ಹಾಕಿ ಮದುವೆ ಮಾಡಿಸಿದ ಹಿಂದು ಸಂಘಟನೆ

 

ಚೆನ್ನೈ: ವ್ಯಾಲೆಂಟೈನ್ಸ್​ ಡೇ ಪ್ರೇಮಿಗಳ ದಿನಾಚರಣೆ-ವಿರೋಧಿಸಿ ತಮಿಳುನಾಡಿನ ಶಿವಗಂಗಾ ಎಂಬಲ್ಲಿ ಅತ್ಯಂತ ವಿಚಿತ್ರವಾಗಿ ಪ್ರತಿಭಟನೆ ಮಾಡಲಾಗಿದೆ.

ಹಿಂದು ಸಂಘಟನೆಯೊಂದು ಇಲ್ಲಿ ನಾಯಿಗಳಿಗೆ ಅಣುಕು ಮದುವೆ ಮಾಡಿಸುವ ಮೂಲಕ ಪ್ರೇಮಿಗಳ ದಿನವನ್ನು ಅಣುಕಿಸಿದೆ. ವ್ಯಾಲೆಂಟೈನ್ಸ್ ಡೇ ಭಾರತದ ಸಂಸ್ಕೃತಿಯಲ್ಲ ಎಂದು ಪ್ರತಿಪಾದಿಸಿದೆ.

ಪ್ರೇಮಿಗಳ ದಿನಾಚರಣೆಯನ್ನು ಭಾರತದಲ್ಲಿ ಹಲವು ಬಲಪಂಥೀಯ ಸಂಘಟನೆಗಳು ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿವೆ. ಪ್ರತಿವರ್ಷವೂ ಈ ದಿನ ಅವರು ಪ್ರತಿಭಟನೆ ನಡೆಸಿ, ಪ್ರೇಮಿಗಳ ದಿನಾಚರಣೆಯನ್ನು ಭಾರತದಲ್ಲಿ ನಿಷೇಧಿಸಬೇಕು ಎಂಬ ಆಗ್ರಹ ಮಾಡುತ್ತಾರೆ. ಪ್ರಸಕ್ತ ಬಾರಿ ತಮಿಳುನಾಡಿನಲ್ಲಿ ಹಿಂದು ಮುನ್ನಾನಿ ಸಂಘಟನೆಯ ಸದಸ್ಯರು ನಾಯಿಗಳಿಗೆ ಮದುವೆ ಮಾಡಿಸುವ ಮೂಲಕ ಪ್ರೇಮಿಗಳ ದಿನವನ್ನು ವಿರೋಧಿಸಿದ್ದಾರೆ.
ಎರಡು ಶ್ವಾನಗಳನ್ನು ಹಿಡಿದು ತಂದ ಹಿಂದು ಸಂಘಟನೆ ಕಾರ್ಯಕರ್ತರು ಆ ಪ್ರಾಣಿಗಳಿಗೆ ಬಟ್ಟೆ ಹಾಕಿದ್ದಾರೆ. ಮಾಲೆಯನ್ನೂ ತೊಡಿಸಿ, ಹಣೆಗೆ ಕುಂಕುಮ ಇಡಿಸಿದ್ದಾರೆ. ಆ ನಾಯಿಗಳಿಗೆ ಸಾಂಕೇತಿಕವಾಗಿ ಮದುವೆ ಮಾಡಿಸಿದ್ದಾರೆ.

ಪ್ರೇಮಿಗಳು ಈ ವ್ಯಾಲೆಂಟೈನ್ಸ್ ಡೇ ದಿನದ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಾರೆ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಅನುಚಿತವಾಗಿ ನಡವಳಿಕೆ ತೋರಿಸುತ್ತಾರೆ. ಅದನ್ನು ವಿರೋಧಿಸುವ ಸಲುವಾಗಿಯೇ ನಾವು ಶ್ವಾನಗಳಿಗೆ ವಿವಾಹ ಮಾಡಿಸಿದ್ದೇವೆ ಎಂದು ಸಂಘಟನೆ ಹೇಳಿಕೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅವಶೇಷಗಳಡಿ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ಭಾರತೀಯ ಶ್ವಾನಗಳು !

Tue Feb 14 , 2023
ಫೆ.14. ಅವಶೇಷಗಳ‌ ಅಡಿ ಸಿಲುಕಿ ಒದ್ದಾಡುತ್ತಿದ್ದ ಬಾಲಕಿಯೋರ್ವಳನ್ನು ಭಾರತೀಯ ಶ್ವಾನಗಳು ರಕ್ಷಿಸಿದ ಘಟನೆ ಭೂಕಂಪ ಪೀಡಿತ ಟರ್ಕಿಯಿಂದ ವರದಿಯಾಗಿದೆ. ಭೂಕಂಪದಿಂದ ಹಾನಿಗೊಳಗಾದ ಪ್ರದೇಶವು ಕಟ್ಟಡದ ಅವಶೇಷಗಳಿಂದ ತುಂಬಿಕೊಂಡಿದೆ. ಯಂತ್ರೋಪಕರಣಗಳು ವೈಫಲ್ಯ ಕಂಡ ಜಾಗದಲ್ಲಿ ರೊಮಿಯೋ ಮತ್ತು ಜೂಲಿ ಎಂಬ ಶ್ವಾನ ಜೋಡಿ ಮೂಸುತ್ತಾ ಅವಶೇಷಗಳಡಿಯಲ್ಲಿ ಬಾಲಕಿ ಇರುವುದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಟರ್ಕಿಯಲ್ಲಿ ಫೆಬ್ರುವರಿ 6ರಂದು ಪ್ರಬಲ ಭೂಕಂಪ ಸಂಭವಿಸಿತ್ತು. ಈಗ ಭೂಕಂಪ ಸಂಭವಿಸಿ ಒಂದು ವಾರ ಕಳೆದರೂ ಹಾನಿಗೊಳಗಾದ […]

Advertisement

Wordpress Social Share Plugin powered by Ultimatelysocial