ಎಚ್ಚರ..! ಈ ಪದಾರ್ಥಗಳ ಅತಿಯಾದ ಸೇವನೆಯಿಂದ ಹಾಳಾಗುತ್ತೆ ನಿಮ್ಮ ಹಲ್ಲು

ಎಚ್ಚರ..! ಈ ಪದಾರ್ಥಗಳ ಅತಿಯಾದ ಸೇವನೆಯಿಂದ ಹಾಳಾಗುತ್ತೆ ನಿಮ್ಮ ಹಲ್ಲು
ನಮ್ಮ ದಿನನಿತ್ಯದ ಜಂಜಾಟದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡಲು ಮರೆಯುತ್ತೇವೆ. ನಮ್ಮ ಹಲ್ಲುಗಳಿಗೆ ನಾವು ಕೊಡುವುದಕ್ಕಿಂತ ಇನ್ನಷ್ಟು ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿದೆ. ಇದರಲ್ಲಿ ಬಹಳ ಮುಖ್ಯವಾದದ್ದು ತಿನ್ನುವ ಅಭ್ಯಾಸ.ಹಲ್ಲುಗಳ ಆರೋಗ್ಯದ ದೃಷ್ಟಿಯಿಂದ ಕೆಳಕಂಡ ಪದಾರ್ಥಗಳನ್ನು ತಿನ್ನುವಾಗ ಇನ್ನೊಮ್ಮೆ ಯೋಚಿಸಿ ನೋಡಬೇಕಾದ ಅಗತ್ಯವಿದೆ:

ಅಧಿಕ ಸಕ್ಕರೆ ಅಂಶದ ತಂಪು ಪಾನೀಯಗಳು

ಅತಿಯಾದ ಸಕ್ಕರೆ ಅಂಶವುಳ್ಳ ಪೇಯಗಳ ಸೇವನೆಯಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳಾದ ತೂಕ ಹೆಚ್ಚುವಿಕೆ, ರಕ್ತದಲ್ಲಿ ಗ್ಲೂಕೋಸ್ ಮಟ್ಟವು ಅನಾರೋಗ್ಯ ಮಟ್ಟ ತಲುಪುವಂಥ ಸಮಸ್ಯೆಗಳು ಸೃಷ್ಟಿಯಾಗುತ್ತವೆ.

ಈ ಪೇಯಗಳಿಂದ ಹಲ್ಲುಗಳಿಗೆ ಕ್ಷಾರಿಕ ಹಾನಿಯಾಗುವ ಸಂಭವವಿರುವ ಕಾರಣ ಸಾಧ್ಯವಾದಷ್ಟು ಇವುಗಳನ್ನು ತ್ಯಜಿಸುವುದು ಸೂಕ್ತ.

ಅಲೂಗೆಡ್ಡೆ ಚಿಪ್ಸ್

ಪಿಷ್ಟದಂಶ ಹೆಚ್ಚಿರುವ ಪದಾರ್ಥಗಳ ಚೂರುಗಳು ಹಲ್ಲುಗಳ ಸಂಧಿಗಳಿಗೆ ಸೇರಿಕೊಂಡ ಮೇಲೆ ಸರಿಯಾಗಿ ಸ್ವಚ್ಛಗೊಳಿಸದೇ ಇದ್ದಲ್ಲಿ ದಂತಕುಳಿಗಳು ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಆಲೋಗೆಡ್ಡೆ ಚಿಪ್ಸ್, ಫ್ರೈಸ್ ಹಾಗೂ ಪಿಷ್ಟದಂಶ ಹೆಚ್ಚಿರುವ ಆಹಾರಗಳ ಸೇವನೆಯನ್ನು ಸಾಧ್ಯವಾದಷ್ಟು ವರ್ಜಿಸುವುದು ಸೂಕ್ತ.

ಒಣ ಹಣ್ಣುಗಳು

ಆರೋಗ್ಯಕ್ಕೆ ಪ್ರಯೋಜನಕಾರಿಯೇ ಆಗಿರುವ ಒಣಹಣ್ಣುಗಳು ನಿಮ್ಮ ಹಲ್ಲುಗಳಿಗೆ ಸರಿಯಲ್ಲದೇ ಇರಬಹುದು. ಕೇಂದ್ರಿತವಾದ ಸಕ್ಕರೆಯಂಶ ಹಾಗು ಅಂಟಿನಂಶ ಇರುವ ಕಾರಣ ಒಣಹಣ್ಣುಗಳ ನಿರಂತರ ಸೇವನೆಯಿಂದ ಹಲ್ಲುಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು.

ವೈನ್

ನೀವು ನಿರಂತರವಾಗಿ ವೈನ್ ಕುಡಿಯುತ್ತಿದ್ದರೆ, ಈ ಅಭ್ಯಾಸದಿಂದ ನಿಮ್ಮ ಹಲ್ಲುಗಳಿಗೆ ನಕಾರಾತ್ಮಕ ಪರಿಣಾಮ ಉಂಟಾಗಬಹುದು. ವೈನ್, ಕಾಫಿ, ಟೀ ಇತ್ಯಾದಿಗಳು ಹಲ್ಲುಗಳು ಹಳದಿಗಟ್ಟುವಿಕೆಗೆ ಕಾರಣವಾಗಬಲ್ಲವು. ನಿರಂತರವಾಗಿ ವೈನ್ ಸೇವನೆಯಿಂದ ಹಲ್ಲುಗಳು ಕೊಳೆತು, ಎನಾಮೆಲ್ ನವೆಯುವ ಸಾಧ್ಯತೆ ಇರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದ ಪತಿರಾಯ..

Wed Dec 22 , 2021
ಕಳೆದ ಮೇ ತಿಂಗಳ 11 ರಂದು ಮಲೆನಾಡ ತಪ್ಪಲು ಶಿವಮೊಗ್ಗದಲ್ಲಿ ಮಂಜುಳಾ ಎಂಬ ವಿವಾಹಿತೆಯೊಬ್ಬಳು ನೇಣಿಗೆ ಶರಣಾಗಿದ್ದಳು. ಈ ಘಟನೆಯಿಂದ ಇಡೀ ಮಲೆನಾಡು ಶಿವಮೊಗ್ಗ ತಲ್ಲಣಗೊಂಡಿತ್ತು. ಈಕೆ ಅಕ್ರಮ ಸಂಬAಧ ಹೊಂದಿದಳು ಎನ್ನಲಾಗಿದ್ದ ಅಕೆಯ ಪ್ರಿಯಕರನೂ ಸೇರಿದಂತೆ 12 ದಿನಗಳ ಅಂತರದಲ್ಲಿ ಇಬ್ಬರೂ ಸಾವನ್ನಪ್ಪಿದರು. ಈ ಸರಣಿ ಸಾವು ಮಲೆನಾಡಿನಲ್ಲಿ ಹಲವಾರು ನಿಗೂಡತೆಗಳನ್ನು ಹುಟ್ಟುಹಾಕಿದೆ. ಸದ್ಯ ನನ್ನ ಪತ್ನಿಯ ಸಾವನ್ನು ನಂಬಲಾಗುತ್ತಿಲ್ಲ. ನನ್ನ ಪತ್ನಿ ಮಂಜುಳಾ ಆತ್ಮಹತ್ಯೆಗೆ ಶರಣಾಗುವಂತಹವಳಲ್ಲ ಎಂದು […]

Advertisement

Wordpress Social Share Plugin powered by Ultimatelysocial