ಬೆಮೆಲ್ ಜತೆಗೆ ಕೈ ಜೋಡಿಸಿದ ರಕ್ಷಣ ಇಲಾಖೆ

ಮೇಕ್ ಇನ್ ಇಂಡಿಯಾ ಯೋಜನೆಗೆ ಸಹಕಾರ ನೀಡುವಲ್ಲಿ ಮತ್ತೂಂದು ಹೆಜ್ಜೆಯನ್ನಿಟ್ಟಿರುವ ರಕ್ಷಣ ಇಲಾಖೆ, ಬೆಂಗಳೂರಿನ ಭಾರತ್ ಅರ್ತ್ ಮೂವರ್ಸ್ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇತ್ತೀಚೆಗೆ ಗಾಲ್ವಾನ್ ಕಣಿವೆಯಲ್ಲಿ ಚೀನದೊಂದಿಗೆ ಮುಖಾಮುಖಿಯಾದಾಗ ಅಲ್ಲಿನ ದುರ್ಗಮ ಹಾದಿಯಲ್ಲಿ ಮುಂದುವರಿಯಲು ಟ್ಯಾಂಕರ್‌ಗಳಿಗೆ ಅಡಚಣೆಯಾಗಿದ್ದರಿಂದ ನೇಗಿಲು ಮಾದರಿಯ ಸಲಕರಣೆಯನ್ನು ಜೋಡಿಸಲು ನಿರ್ಧರಿಸಿದ್ದು, ಅದರಂತೆ ಸೇನೆಯ ಇಂಡಿಯನ್ ಆರ್ಮ್ಡ್ ಕಾರ್ಪ್ಸ್ ಬಳಸುವ ಟಿ-೯೦ ಎಸ್/ಎಸ್‌ಕೆ ಮಾದರಿಯ ಟ್ಯಾಂಕರ್ ಗಳಿಗೆ ೧,೫೧೨ ಕಬ್ಬಿಣದ ನೇಗಿಲುಗಳ ಮಾದರಿಯ ಸಾಮಗ್ರಿಗಳನ್ನು ತಯಾರಿಸಿಕೊಡುವಂತೆ ಬೆಮೆಲ್‌ಗೆ ಸೂಚಿಸಿದೆ. ೫೫೭ ಕೋ.ರೂ. ಮೊತ್ತದ ಒಪ್ಪಂದಕ್ಕೆ ರಕ್ಷಣ ಇಲಾಖೆ ಸಹಿ ಹಾಕಿದೆ. ೨೦೨೭ರ ವೇಳೆಗೆ ಈ ಉಪಕರಣಗಳನ್ನು ಬೆಮೆಲ್ ಸಂಸ್ಥೆಯು ತಯಾರಿಸಿಕೊಡಲಿದ್ದು, ಅವು ಕಡಿದಾದ ಪರ್ವತ ಶ್ರೇಣಿಗಳಲ್ಲಿ ಉರುಳಿ ಬೀಳುವ ಅಪಾಯವಿಲ್ಲದೆ ಟ್ಯಾಂಕರ್‌ಗಳು ಸಾಗಲು ಸಹಕಾರಿಯಾಗಲಿವೆ.

Please follow and like us:

Leave a Reply

Your email address will not be published. Required fields are marked *

Next Post

 ಕಾಂಗ್ರೆಸ್ ವಿರುದ್ಧ ಕಟೀಲ್ ಕಿಡಿ

Thu Jul 23 , 2020
ಭಗವಂತನ ಇಚ್ಛೆ ಸಿಎಂ  ಬಿಎಸ್ ಯಡಿಯೂರಪ್ಪ  ಮೇಲೆ ಇರೋದ್ರಿಂದ ಕೊರೊನಾ ನಿಯಂತ್ರಣ ಆಗ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಕೋಲಾರದ ಶ್ರೀನಿವಾಸಪುರದಲ್ಲಿ ಮಾತನಾಡಿದ ಅವರು,ಸಿದ್ದರಾಮಣ್ಣ ಮುಖ್ಯಮಂತ್ರಿ ಆಗಿದ್ರೆ ಭಗವಂತನ ಕೈಯಲ್ಲೂ ಉಳಿಸೋಕೆ ಆಗ್ತಿರಲಿಲ್ಲ.ಬೇರೆ ಬೇರೆ ಕಡೆಗೆ ಹೋಗಿ ಇತಿಹಾಸ ಬರೆದವರು ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ.ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ತಿಹಾರ್ ಜೈಲಿನಲ್ಲಿ ಏಕೆ ಕುಳಿತುಕೊಳ್ಳುತ್ತಿದ್ರು. ಕೊರೊನಾ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ.ಕೊರೊನಾ ಸಂಧರ್ಭದಲ್ಲಿ ಕಾಂಗ್ರೆಸ್ ಸಹಕಾರ […]

Advertisement

Wordpress Social Share Plugin powered by Ultimatelysocial