ಭಾರತದಲ್ಲಿ ಮತ್ತಷ್ಟು ಅಗ್ಗವಾಗಲಿದೆ ಎಲೆಕ್ಟ್ರಿಕ್ ವಾಹನಗಳ ಬೆಲೆ: ಇಲ್ಲಿದೆ ಕಾರಣ

 

ಭಾರತವು ಶೂನ್ಯ ಹೊರಸೂಸುವಿಕೆಯತ್ತ ಹೆಜ್ಜೆ ಇಡುತ್ತಿದ್ದು, ವಿವಿಧ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ತಯಾರಿಸುತ್ತಿವೆ. ಆದರೆ, ಪೆಟ್ರೋಲ್ ಡಿಸೇಲ್ ವಾಹನಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ವಾಹನಗಳ ಬೆಲೆ ದುಬಾರಿಯಿದ್ದು, ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಇದೀಗ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನೆಮ್ಮದಿ ಸುದ್ದಿಯೊಂದನ್ನು ನೀಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ‘ಐಡಿಯಾಸ್ ಆಫ್ ಇಂಡಿಯಾ’ ಶೃಂಗಸಭೆಯಲ್ಲಿ ಭವಿಷ್ಯದ ಇಂಧನ ಬಳಕೆ ಕುರಿತಂತೆ ಸ್ವತಃ ಕೇಂದ್ರ ಸಾರಿಗೆ ಸಚಿವರೇ ಮಾತನಾಡಿದ್ದಾರೆ. ಹೈಡೋಜನ್ ಭಾರತದ ಭವಿಷ್ಯವಾಗಲಿದೆ. ಮುಂಬರುವ ವರ್ಷಗಳಲ್ಲಿ ವಾಹನಗಳು ಹಸಿರು ಇಂಧನದಿಂದ (green fuel) ಚಲಿಸಲಿವೆ. ಅಲ್ಲದೆ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ನಿಧಾನವಾಗಿ ಜನರು ವಾಲುತ್ತಿದ್ದು, ಲಿಥಿಯಂ-ಐಯಾನ್ ಬ್ಯಾಟರಿಗಳು ಪೆಟ್ರೋಲ್ ಹಾಗೂ ಡೀಸೆಲ್‌ನಿಂದ ಪರ್ಯಾಯವಾಗಲಿದೆ ಎಂದು ಹೇಳಿದ್ದಾರೆ.

ಭಾರತವು ವಾರ್ಷಿಕ 16 ಲಕ್ಷ ಕೋಟಿ ಮೌಲ್ಯದ ಪಳೆಯುಳಿಕೆ ಇಂಧನವನ್ನು (fossil fuel) ಆಮದು ಮಾಡಿಕೊಳ್ಳುತ್ತದೆ. ಶೀಘ್ರದಲ್ಲಿಯೇ ನಮ್ಮ ರೈತರೇ ಹಸಿರು ಇಂಧನ (green fuel), ಹಸಿರು ಜಲಜನಕ (green hydrogen) ಉತ್ಪಾದಿಸುವ ವಿಶ್ವಾಸವಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಅಲ್ಲದೆ, ಜಾಗತಿಕ ಮಾರುಕಟ್ಟೆಗೆ ದೊಡ್ಡ ಲಿಥಿಯಂ ನಿವ್ವಳ ರಫ್ತುದಾರ ದೇಶವಾಗುವತ್ತ ಭಾರತದ ಸಾಗುತ್ತಿದ್ದು, ಲಿಥಿಯಂ-ಐಯಾನ್ ಬ್ಯಾಟರಿಗಳ ದರ ಇಳಿಕೆಯಾಗಲಿದೆ. 2025ರೊಳಗೆ ದೊಡ್ಡ ಮಟ್ಟದಲ್ಲಿ ಹೈಡ್ರೋಜನ್‌ನ್ನು ರಫ್ತು ಮಾಡಲು ಕೆಲಸಗಳು ನಡೆಯುತ್ತಿವೆ ಎಂದಿದ್ದಾರೆ.

ಅಕ್ಟೋಬರ್ 2022ರಲ್ಲಿ ‘ಗ್ರೀನ್ಕೊ’ (ದೇಶದ ನವೀಕರಿಸಬಹುದಾದ ಇಂಧನ ಕಂಪನಿ) ಹಾಗೂ ಸಿಂಗಾಪುರ್ ಕೆಪ್ಪೆಲ್ ಇನ್ಫ್ರಾಸ್ಟ್ರಕ್ಚರ್ ಹಸಿರು ಜಲಜನಕ (green hydrogen) ರಫ್ತು ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿವೆ. ಇದರ ಅನ್ವಯ, ಕೆಪ್ಪೆಲ್ ಸಂಸ್ಥೆಯ 600 Mw ಸಾಮರ್ಥ್ಯದ ಪ್ಲಾಂಟ್ ಗೆ 2,50,000 ಟನ್‌ ಹಸಿರು ಹೈಡ್ರೋಜನ್‌ನ್ನು ಸರಬರಾಜು ಮಾಡಲಾಗುತ್ತಿದೆ. ಇವೆಲ್ಲ ಬೆಳವಣಿಗೆಗಳು ಭಾರತವು ಹಸಿರು ಇಂಧನ ಉತ್ಪಾದನೆಯತ್ತ ಮುನ್ನುಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಅಲ್ಲದೆ, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಪ್ರತಿದಿನ ಸರಿಸುಮಾರು 60 ಕಿಲೋಮೀಟರ್ ರಸ್ತೆಯನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಂಡಿದೆ. ತುರ್ತು ಸೌಲಭ್ಯಕ್ಕಾಗಿ ಹೆಲಿಪ್ಯಾಡ್‌ ಹಾಗೂ ಡ್ರೋನ್ ಪ್ಯಾಡ್‌ಗಳನ್ನು ನಿರ್ಮಾಣ ಮಾಡುತ್ತಿದೆ. ಕಳೆದ ತಿಂಗಳು ಭಾರತೀಯ ಭೂಗರ್ಭಶಾಸ್ತ್ರ ಇಲಾಖೆಯು ಜಮ್ಮು-ಕಾಶ್ಮೀರಾದ ರಿಯಾಸಿ ಜಿಲ್ಲೆಯ ಸಲಾಲ್ – ಹೈಮಾನಾ ಎಂಬಲ್ಲಿ 59 ಲಕ್ಷ ಟನ್‌ ಲಿಥಿಯಂ ನಿಕ್ಷೇಪವಿರುವುದನ್ನು ಶೋಧಿಸಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.

ಸಲಾಲ್ – ಹೈಮಾನಾದಲ್ಲಿ ಗಣಿಗಾರಿಕೆಯನ್ನು ನಡೆಸುವುದರಿಂದ ಲಿಥಿಯಂಗಾಗಿ ಭಾರತ ವಿದೇಶಗಳಿಗೆ ಅವಲಂಬನೆಯಾಗುವುದು ಕಡಿಮೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಗರಿಷ್ಠ ಬೆಲೆಯಲ್ಲಿ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಕಾರುಗಳ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದರಿಂದ ಎಲೆಕ್ಟ್ರಿಕ್ ವಾಹನ ಉತ್ಪಾದನೆಯು ಮತ್ತಷ್ಟು ವೇಗವಾಗಲಿದೆ. ಇದರಿಂದ ಭಾರತವು ಸುಲಭವಾಗಿ ಶೂನ್ಯ ಹೊರಸೂಸುವಿಕೆಯ ಗುರಿಯನ್ನು ತಲುಪಬಹುದು ಎಂದು ಹೇಳಬಹುದು.

ಕಡಿಮೆ ಸಾಮರ್ಥ್ಯದ ಲೀಡ್ ಆಸಿಡ್ ಬ್ಯಾಟರಿಗೆ ಹೋಲಿಸಿದರೆ, ಲಿಥಿಯಂ ಬ್ಯಾಟರಿಗಳು ಅತ್ಯುತ್ತಮವಾಗಿವೆ. ಇದರಿಂದ ತಯಾರಿಸಿದ ಬ್ಯಾಟರಿಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಜೊತೆಗೆ ನಿರ್ವಹಣಾ ವೆಚ್ಚವು ಅತ್ಯಂತ ಕಡಿಮೆ ಇದ್ದು, ಹೆಚ್ಚು ಸುರಕ್ಷಿತವಾಗಿವಾಗಿರುತ್ತವೆ. ಎಲೆಕ್ಟ್ರಿಕ್ ವಾಹನಗಳು ಅತ್ಯುತ್ತಮ ರೇಂಜ್ ನೀಡಲು ನೆರವಾಗುತ್ತದೆ. ದೇಶಾದ್ಯಂತ ರಸ್ತೆಗಳಲ್ಲಿ 2070ರ ವೇಳೆಗೆ ಶೂನ್ಯ ಹೊರಸೂಸುವಿಕೆ ವಾಹನಗಳಲು ಇರಬೇಕೆಂದು ಕೇಂದ್ರ ಸರ್ಕಾರ ಬಯಸಿದ್ದು, ಅದಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದಂತೆ, ಭಾರತವು ಪರ್ಯಾಯ ಇಂಧನದ ಉತ್ಪಾದನೆಯಲ್ಲಿ ತೊಡಗಿದ್ದು, ಇದು ಮುಂಬರುವ ದಿನಗಳಲ್ಲಿ ಇತರೆ ದೇಶಗಳಿಂದ ಪೆಟ್ರೋಲ್, ಡಿಸೇಲ್ ಆಮದನ್ನು ಕಡಿಮೆ ಮಾಡುತ್ತದೆ. ಜೊತೆಗೆ ಜಾಗತಿಕ ಮಾರುಕಟ್ಟೆಗೆ ದೊಡ್ಡ ಲಿಥಿಯಂ ನಿವ್ವಳ ರಫ್ತುದಾರ ದೇಶವಾಗುವತ್ತ ಭಾರತದ ಸಾಗುತ್ತಿರುವುದಿರಂದ ದೇಶ-ವಿದೇಶದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು ಹಾಗೂ ದ್ವಿಚಕ್ರ ವಾಹನಗಳ ಬೆಲೆ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಮಾರುಕಟ್ಟೆ ಪ್ರವೇಶಿಸಿದ ಬಜಾಬ್​ ಪಲ್ಸರ್ 220F; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯ

Tue Feb 28 , 2023
ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಬಜಾಬ್​ ಪಲ್ಸರ್ 220F ಪರಿಚಯಿಸಿದೆ. ಇದರ ಎಕ್ಸ್​ ಷೋರೂಂ ಬೆಲೆ 1,39,686 ರೂಪಾಯಿಗಳು. ಇದು ಮೂಲ ಬಜಾಜ್ ಪಲ್ಸರ್​ನ ಗುಣಗಳನ್ನೇ ಹೊಂದಿದೆ. ಯಾಂತ್ರಿಕವಾಗಿ ಯಾವುದೇ ಬದಲಾವಣೆಯಿಲ್ಲ. ಆದರೆ ಎಂಜಿನ್​ನಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು ಇದು BSVI ಹಂತ 2 ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಮಾರ್ಪಡಿಸಲಾಗಿದೆ. ಇದರ ಜೊತೆಗೆ ಡ್ಯುಯಲ್ ಎಲ್‌ಇಡಿ ಟೈಲ್ ಲೈಟ್‌ಗಳು, ಸ್ಪ್ಲಿಟ್ ಗ್ರಾಬ್ ರೈಲ್, ಕಪ್ಪು ಮಿಶ್ರಲೋಹದ ಚಕ್ರಗಳು, ಹ್ಯಾಲೊಜೆನ್ ಟರ್ನ್ […]

Advertisement

Wordpress Social Share Plugin powered by Ultimatelysocial