ಭಾರತೀಯ ಸೇನೆ ಸದ್ದಿಲ್ಲದೇ ಅತ್ಯಾಧುನಿಕಗೊಳ್ಳುತ್ತಿದೆ,

ವದೆಹಲಿ: ಭಾರತೀಯ ಸೇನೆ ಸದ್ದಿಲ್ಲದೇ ಅತ್ಯಾಧುನಿಕಗೊಳ್ಳುತ್ತಿದೆ, ಬಲಿಷ್ಠಗೊಳ್ಳುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಸೇನೆಯಲ್ಲಿನ ಘಾತಕಶಕ್ತಿ ಹೆಚ್ಚಿದೆ, ದೇಶೀಯ ನಿರ್ಮಿತ ವಿಚಕ್ಷಣೆ ಮತ್ತು ದಾಳಿ ಡ್ರೋನ್‌ಗಳು, ವೈಮಾನಿಕ ಶಸ್ತ್ರಾಸ್ತ್ರಗಳು, ರಾತ್ರಿಯುದ್ಧ, ಗುರಿಯನ್ನು ನಿಖರವಾಗಿ ಛೇದಿಸಬಲ್ಲ ಸಾಧನಗಳನ್ನು ಸೇನೆಗೆ ಸೇರಿಸಿಕೊಳ್ಳಲಾಗಿದೆ.

ಸತತ 33 ತಿಂಗಳಿಂದ ಲಡಾಖ್‌ ಗಡಿಯಲ್ಲಿ, ಅರುಣಾಚಲಪ್ರದೇಶದಲ್ಲಿ ಚೀನಾ ತಗಾದೆ ನಡೆಸುತ್ತಿರುವ ಬೆನ್ನಲ್ಲೇ ಭಾರತವೂ ಬಲಿಷ್ಠಗೊಳ್ಳುತ್ತಿದೆ.

ಒಂದು ಕಡೆ ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿ ಆಧುನೀಕರಣಗೊಳಿಸಲಾಗುತ್ತಿದೆ. ಮತ್ತೂಂದು ಕಡೆ 12 ಲಕ್ಷವಿರುವ ಬೃಹತ್‌, ಬಲಿಷ್ಠ ಸೇನಾಪಡೆಯನ್ನು ಪುನರ್ರಚನೆ ಮಾಡಲಾಗುತ್ತಿದೆ. ಬಹಳ ಸಕ್ರಿಯವಲ್ಲದ, ಅನಗತ್ಯ ಯೋಧರ ಪ್ರಮಾಣವನ್ನು ಕಡಿಮೆಮಾಡಲು ಚಿಂತಿಸಲಾಗಿದೆ. ವೇತನ ಮತ್ತು ಪಿಂಚಣಿ ಪ್ರಮಾಣ ವಿಪರೀತ ಏರುತ್ತಿರುವುದರಿಂದ ಅದನ್ನು ಕಡಿಮೆ ಮಾಡಲು ಯತ್ನ ಸಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಭಾರೀ ಪ್ರಮಾಣದ ಒಪ್ಪಂದಗಳಿಗೆ ಸಹಿ:

ಸೇನೆ ಭಾರೀ ಪ್ರಮಾಣದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಶಸ್ತ್ರಾಸ್ತ್ರ ಪಡೆದುಕೊಳ್ಳಲು 91,238 ಕೋ.ರೂ. ಮೌಲ್ಯದ 61 ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಲ್ಲಿ ದೇಶೀಯ ಸರ್ಕಾರಿ ಕಂಪನಿಗಳೊಂದಿಗೆ 76,544 ಕೋ.ರೂ. ಮೌಲ್ಯದ 44 ಒಪ್ಪಂದಗಳು ಸೇರಿವೆ. ಮಾಮೂಲಿ ಖರೀದಿಗಳ ಜೊತೆಗೆ ತುರ್ತು ಹಿನ್ನೆಲೆಯಲ್ಲಿ 68 ಖರೀದಿ ಒಪ್ಪಂದಗಳಾಗಿವೆ. ಇನ್ನೂ 84 ತುರ್ತು ಖರೀದಿ ಒಪ್ಪಂದಗಳು ಜಾರಿಯಲ್ಲಿವೆ ಎಂದು ಸೇನಾ ಮೂಲಗಳು ತಿಳಿಸಿವೆ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಮನರಂಜನೆ ಹಾಗೂ ಉತ್ಸುಕಥೆ ತುಂಬಲು ತಯಾರಾಗಿದೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್

Tue Feb 14 , 2023
CCL 2023:ಕ್ರೀಡೆ ಮತ್ತು ಮನರಂಜನೆಯ ಭಾಗವಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಕ್ರೀಡಾಕೂಟವು ಮತ್ತೆ ಕಾರ್ಯರೂಪಕ್ಕೆ ಬಂದಿದೆ.ಈ ಆವೃತಿಯಲ್ಲಿ ಭಾರತದ ವಿವಿಧ ಪ್ರದೇಶದ ಒಟ್ಟು ಎಂಟು ತಂಡಗಳು ಸ್ಪರ್ಧಿಸಲಿವೆ. ಈ ಸೀಸನ್ನಲ್ಲಿ 120 ಕ್ಕೂ ಹೆಚ್ಚು ಚಲನಚಿತ್ರ ಸೆಲೆಬ್ರಿಟಿಗಳು ಇರುತ್ತಾರೆ. ಬೆಂಗಳೂರು,ಹೈದರಾಬಾದ್ ಮತ್ತು ಚೆನ್ನೈನಂತಹ ಕ್ರೀಡಾಂಗಣಗಳು ಹಿಂದಿನ ಸೀಸನ್‌ಗಳಲ್ಲಿ ಆಯ್ಕೆಯ ಮೂಂಚೂಣಿಯಲ್ಲಿದ್ದವು. ಪ್ರಸ್ತುತ ಪ್ರವೃತ್ತಿಯು ಇತರ ಸ್ಥಳಗಳನ್ನು ಆರಿಸಲಾಗಿದೆ. ಮುಂಬೈ ಹೀರೋಸ್‌ಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಬ್ರಾಂಡ್ ಅಂಬಾಸಿಡರ್ ಮತ್ತು […]

Advertisement

Wordpress Social Share Plugin powered by Ultimatelysocial