‘ಅವನು ಮತ್ತು ಶ್ರಾವಣಿ’ ಧಾರಾವಾಹಿಯ ನಾಯಕನೇ ಈಗ ‘ಸೌತ್ ಇಂಡಿಯನ್ ಹೀರೊ’.

 

ಕಿರುತೆರೆಯಿಂದ ಹಿರಿತೆರೆಗೆ ಬಂದು ಯಶಸ್ಸು ಕಂಡವರು ಬಹಳಷ್ಟು ಮಂದಿ ಇದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌  ಕೂಡ ತಮ್ಮ ನಟನಾ ಜರ್ನಿ ಆರಂಭಿಸಿದ್ದು ಕಿರುತೆರೆಯಿಂದಲೇ. ಈ ವಾರ ಬಿಡುಗಡೆಯಾಗುತ್ತಿರುವ ‘ಸೌತ್‌ ಇಂಡಿಯನ್‌ ಹೀರೊ’ ಸಿನಿಮಾದ ನಾಯಕ ನಟ ಸಾರ್ಥಕ್‌  ಕೂಡ ಕಿರುತೆರೆಯಿಂದ ಹಿರಿತೆರೆಗೆ ಬಂದವರು.’ಅವನು ಮತ್ತು ಶ್ರಾವಣಿ’  ಸೀರಿಯಲ್‌ನ ನಾಯಕ ನಟರಾಗಿದ್ದ ಸಾರ್ಥಕ್‌ ಬೆಂಗಳೂರಿನವರು. ಇನ್ಫೋಸಿಸ್‌ನಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡಿರುವ ಅವರು ಬಣ್ಣದ ಸೆಳೆತಕ್ಕೆ ಒಳಗಾಗಿ ಸಿನಿಮಾ ರಂಗಕ್ಕೆ ಬಂದಿದ್ದಾರೆ.’ನಾನು ಶಾಲೆ, ಕಾಲೇಜನ್ನು ಬೆಂಗಳೂರಿನಲ್ಲಿಯೇ ಮುಗಿಸಿದ್ದೇನೆ. ಚಿಕ್ಕ ವಯಸ್ಸಿನಿಂದಲೂ ನಾಟಕಗಳಲ್ಲಿ ನಟಿಸುತ್ತಿದ್ದೆ. ನನ್ನ ಮೂಲ ಹೆಸರು ಸೂರ್ಯ ದರ್ಶನ್‌. ಈಗ ತೆರೆಗಾಗಿ ಸಾರ್ಥಕ್‌ ಎಂದು ಹೆಸರು ಬದಲಾಯಿಸಿಕೊಂಡಿದ್ದೇನೆ. ನನಗೆ ನಟನೆಯೆಡೆಗೆ ಸಿಕ್ಕಾಪಟ್ಟೆ ಒಲವಿತ್ತು. ಆದರೆ ಆ ಕ್ಷೇತ್ರಕ್ಕೆ ಹೋಗುವ ಯಾವುದೇ ಮಾರ್ಗ ಗೊತ್ತಿರಲಿಲ್ಲ. ಇನ್ಫೋಸಿಸ್‌ ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುತ್ತೇನೆ ಎಂದು ಮನೆಯಲ್ಲಿ ಹೇಳಿ ಸೀರಿಯಲ್‌, ಸಿನಿಮಾಗಳ ಆಡಿಷನ್‌ಗೆ ಹೋಗುತ್ತಿದ್ದೆ. ಇದರ ಜತೆಗೆಯೇ ಓದುತ್ತಿದ್ದೆ. ಈ ಸಮಯದಲ್ಲಿ ನನಗೆ ‘ಅವನು ಮತ್ತು ಶ್ರಾವಣಿ’ ಸೀರಿಯಲ್‌ನ ಅವಕಾಶ ಸಿಕ್ಕಿತು. ಅದರಲ್ಲಿ ನನ್ನ ಪಾತ್ರ ಹಲವರಿಗೆ ಇಷ್ಟವಾಗಿತ್ತು. ಕಿರುತೆರೆಯಲ್ಲಿ ಬಿಝಿ ಇದ್ದರೂ, ನನ್ನ ಸೆಳೆತ ಇದ್ದದ್ದು ಹಿರಿತೆರೆಯತ್ತ’ ಎಂದು ಹೇಳಿದ್ದಾರೆ ಅವರು ಸೀರಿಯಲ್‌ ಮಾಡುತ್ತಲೇ ಸಿನಿಮಾ ಅವಕಾಶಗಳಿಗೆ ಕಾಯುತ್ತಿದ್ದೆ. ಈ ಹುಡುಕಾಟದ ಸಮಯದಲ್ಲಿ ಸಿಕ್ಕವರೇ ನರೇಶ್‌. ಅವರೊಂದಿಗೆ ಒಂದಷ್ಟು ಕಥೆಗಳ ಚರ್ಚೆ ನಡೆಯುತ್ತಿತ್ತು. ಅವರೊಮ್ಮೆ ‘ಸೌತ್‌ ಇಂಡಿಯನ್‌ ಹೀರೊ’ ಸಿನಿಮಾದ ಕಥೆ ಹೇಳಿದರು. ಅದು ನನಗೆ ಇಷ್ಟವಾಗಿ, ಸಿನಿಮಾವಾಗಿ ಈಗ ಬಿಡುಗಡೆಗೆ ಸಿದ್ಧವಾಗಿದೆ’ ಎಂಬುದು ಸಾರ್ಥಕ್ ಅವರ ಮಾತು.’ಕನ್ನಡ ಸೀರಿಯಲ್‌ನಲ್ಲಿ ಕೆಲಸ ಮಾಡುತ್ತಾ, ಒಂದೆರಡು ತಮಿಳು ಸೀರಿಯಲ್‌ನಲ್ಲಿಯೂ ನಟಿಸಿದ್ದೇನೆ. ಅವು ಸಹ ಸೂಪರ್‌ ಹಿಟ್‌ ಆಗಿವೆ. ತಮಿಳು ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾಗ ನನಗೆ ಸಿನಿಮಾಗಳಲ್ಲಿ ಸೆಕೆಂಡ್‌ ಲೀಡ್‌, ಪೋಷಕ ಪಾತ್ರ ಇತ್ಯಾದಿಗಳ ಆಫರ್‌ ಬಂತು. ಕೋವಿಡ್‌ ಸಮಯದಲ್ಲಿ ಸೌತ್‌ ಇಂಡಿಯನ್‌ ಸಿನಿಮಾ ಪ್ರೊಡಕ್ಷನ್‌ಗೆ ಒಂಚೂರು ತೊಂದರೆಯೂ ಆಗಿತ್ತು. ಆದರೂ ನಾನು ಹೀರೊ ಆಗಿಯೇ ನಟಿಸಬೇಕು ಎಂದು ಕಾದು ‘ಸೌತ್‌ ಇಂಡಿಯನ್‌ ಹೀರೊ’ ಸಿನಿಮಾದಲ್ಲಿ ನಟಿಸಿದ್ದೇನೆ’ ಎನ್ನುವುದು ನಟ ಸಾರ್ಥಕ್‌ ಮಾತು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಹನಾಗೆ ಅತ್ತೆಯ ಬುದ್ದಿ ತೋರಿಸಲು ಶುರು ಮಾಡಿದ ಕೌಸಲ್ಯ..!

Fri Feb 24 , 2023
ಇಷ್ಟು ವರ್ಷ ಕಷ್ಟ, ಸುಖ, ದುಃಖಗಳನ್ನೆಲ್ಲಾ ಹಂಚಿಕೊಂಡು ಪುಟ್ಟಕ್ಕನ ಜೊತೆಗೆ ಮೂರು ಹೆಣ್ಣು ಮಕ್ಕಳು ಬೆಳೆದಿವೆ. ಪುಟ್ಟಕ್ಕನ ಮೆಸ್ಸಿನಲ್ಲಿ ಅವ್ವನಿಗೆ ಹೆಗಲಾಗಿ ನಿಂತವಳು ಸಹನಾ. ಇಬ್ಬರು ತಂಗಿಯರು ಕಾಲೇಜು ಅಂತ ಓದಲು ಹೋದಾಗ, ಬುತ್ತಿ ಕಟ್ಟಿಕೊಟ್ಟವಳು ಸಹನಾ.ಯಾರ ಜೊತೆಗೂ ಜೋರಾಗಿ‌ ಮಾತನಾಡಿದವಳೇ ಅಲ್ಲ. ಆದ್ರೆ ಮುರುಳಿಯ ಪ್ರೀತಿಯ ಬಲೆಗೆ ಬಿದ್ದಳು.ಮುರುಳಿ ಮದುವೆಯಾಗುವುದಕ್ಕೂ ಬಹಳ ಕಷ್ಟಪಡಬೇಕಾಯಿತು. ಮನೆಯವರ ಸಮ್ಮುಖದಲ್ಲಿ, ಗುರು ಹಿರಿಯ ಆಶೀರ್ವಾದದೊಂದಿಗೆ ಹೇಗೋ ಹೊಸ ಜೀವನಕ್ಕೂ ಕಾಲಿಟ್ಟು ಆಗಿದೆ. ಆದರೆ […]

Advertisement

Wordpress Social Share Plugin powered by Ultimatelysocial