ಸಹನಾಗೆ ಅತ್ತೆಯ ಬುದ್ದಿ ತೋರಿಸಲು ಶುರು ಮಾಡಿದ ಕೌಸಲ್ಯ..!

ಷ್ಟು ವರ್ಷ ಕಷ್ಟ, ಸುಖ, ದುಃಖಗಳನ್ನೆಲ್ಲಾ ಹಂಚಿಕೊಂಡು ಪುಟ್ಟಕ್ಕನ ಜೊತೆಗೆ ಮೂರು ಹೆಣ್ಣು ಮಕ್ಕಳು ಬೆಳೆದಿವೆ. ಪುಟ್ಟಕ್ಕನ ಮೆಸ್ಸಿನಲ್ಲಿ ಅವ್ವನಿಗೆ ಹೆಗಲಾಗಿ ನಿಂತವಳು ಸಹನಾ. ಇಬ್ಬರು ತಂಗಿಯರು ಕಾಲೇಜು ಅಂತ ಓದಲು ಹೋದಾಗ, ಬುತ್ತಿ ಕಟ್ಟಿಕೊಟ್ಟವಳು ಸಹನಾ.ಯಾರ ಜೊತೆಗೂ ಜೋರಾಗಿ‌ ಮಾತನಾಡಿದವಳೇ ಅಲ್ಲ. ಆದ್ರೆ ಮುರುಳಿಯ ಪ್ರೀತಿಯ ಬಲೆಗೆ ಬಿದ್ದಳು.ಮುರುಳಿ ಮದುವೆಯಾಗುವುದಕ್ಕೂ ಬಹಳ ಕಷ್ಟಪಡಬೇಕಾಯಿತು. ಮನೆಯವರ ಸಮ್ಮುಖದಲ್ಲಿ, ಗುರು ಹಿರಿಯ ಆಶೀರ್ವಾದದೊಂದಿಗೆ ಹೇಗೋ ಹೊಸ ಜೀವನಕ್ಕೂ ಕಾಲಿಟ್ಟು ಆಗಿದೆ. ಆದರೆ ಅಮ್ಮನ್ನಂತಹ ಅತ್ತೆ ಸಿಗಲಿಲ್ಲ. ಸದಾ ತಾಳ್ಮೆ ತೋರುವ ಸಹನಾ ಘಾಟಿ ಅತ್ತೆಯ ಜೊತೆಗೆ ಅದೇಗೆ ಹೆಣಗುವಳೋ ಏನೋ..? ಧಾರಾವಾಹಿಯಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.ಸಹನಾ ಪಾತ್ರದಲ್ಲಿ ಅಕ್ಷತಾ ಅಭಿನಯಿಸಿದ್ದಾರೆ. ಮದುವೆಯಾಗಿ ಗಂಡನ ಮನೆಗೆ ಹೊರಟು ನಿಂತಿದ್ದಾಳೆ. ಈ ವೇಳೆ ಬೆಳೆದು, ಪ್ರೀತಿಸಿದ ಮನೆಯನ್ನು, ಅವ್ವನನ್ನು, ತಂಗಿಯರನ್ನು ಬಿಟ್ಟು ಹೋಗುವುದು ಅಷ್ಟು ಸುಲಭದ ಮಾತಲ್ಲ. ಇಂದು ಆ ಕಷ್ಟ ಸಹನಾಗೆ ಎದುರಾಗಿದೆ. ಸಹನಾ ತವರು ಬಿಟ್ಟು ಹೊರಟಾಗ ಅತ್ತಿದ್ದನ್ನು ಕಂಡು ನೋಡುಗರ ಕಣ್ಣುಗಳು ಒದ್ದೆಯಾಗಿದೆ. ಎಷ್ಟೇ ಸಮಾಧಾನ ಮಾಡಿಕೊಂಡರು ಸಹನಾಳ ಕಣ್ಣಲ್ಲಿ ನೀರು ನಿಲ್ಲುತ್ತಿಲ್ಲ. ನೋಡಿಗರಿಗೂ ತಮ್ಮ ತವರು ಮನೆಯ ನೆನಪಾಗಿಸುವಂತೆ ಮಾಡಿದೆ.ಪುಟ್ಟಕ್ಕನಿಗೂ ಆಗುತ್ತಿಲ್ಲ ಸಮಾಧಾನ..!ತನ್ನ ಮೂರು ಮಕ್ಕಳಲ್ಲಿ ಪುಟ್ಟಕ್ಕ ಅತಿ ಹೆಚ್ಚು ಕಾಳಜಿ ತೋರುತ್ತಾ ಇದ್ದದ್ದು ಸಹನಾಳ ಬಗ್ಗೆ. ಯಾಕಂದ್ರೆ ಸಹನಾ ಓದಿಲ್ಲದೆ ಇದ್ದರು, ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸಿದ್ದಾಳೆ. ಹಾಗೇ ಯಾರ ಜೊತೆಗೂ ಮಾತನಾಡದ ಸಹನಾಗೆ, ಟೆನ್ಶನ್ ಆದರೆ, ಭಯವಾದರೆ ಹೇಗಿರುತ್ತಾಳೆ ಎಂಬುದು ಪುಟ್ಟಕ್ಕನಿಗೆ ಮಾತ್ರ ಗೊತ್ತಿದೆ. ಅದಕ್ಕೆ ಮಗುವಿನಂತೆ ನೋಡಿಕೊಳ್ಳುತ್ತಿದ್ದಳು. ತಂಗಿಯರು ಏನಾದರೂ ದಬಾಯಿಸಿದಾಗಲೂ ಸಹನಾಳ ಪರವಾಗಿ ಪುಟ್ಟಕ್ಕ ಜೋರು ಮಾಡುತ್ತಿದ್ದಳು. ಈಗ ಸಹನಾ ಮನೆಯಲ್ಲಿ ಇಲ್ಲ. ಆ ದುಃಖ ಪುಟ್ಟಕ್ಕನಿಗೆ ತಡೆಯಲಾಗುತ್ತಿಲ್ಲ. ಮಗಳ ಧ್ವನಿ ಕೇಳಿದ ಕೂಡಲೇ ದೂರ ಎದ್ದು ಹೋಗಿ ಅಳುವುದಕ್ಕೆ ಶುರು ಮಾಡಿದ್ದಾಳೆ.ಕೌಸಲ್ಯಾಳಿಂದ ಶುರುವಾಗುತ್ತಾ ಅತ್ತೆ ಕಾಟ..?ಮುರುಳಿ ತಾಯಿ ಕೌಸಲ್ಯ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಕಾಳಿಯನ್ನು ಮುಂದೆ ಬಿಟ್ಟು ಮದುವೆಯನ್ನು ಮುರಿಯುವುದಕ್ಕೆ ಯತ್ನಿಸಿದ್ದಾಳೆ. ಆದ್ರೆ ಅದು ಸಾಧ್ಯವಾಗಲೇ ಇಲ್ಲ. ಈಗ ಎಲ್ಲರ ಮುಂದೆ ಏನು ಆಗಿಲ್ಲವೆಂಬಂತೆ, ಸಹನಾಳೆಂದರೆ ತನಗೂ ಇಷ್ಟ ಎಂಬಂತೆ ಮಾತನಾಡಲು ಶುರು ಮಾಡಿದ್ದಾಳೆ. ಆದ್ರೆ ಮನಸ್ಸಿನೊಳಗೆ ತನ್ನಿಷ್ಟದ ವಿರುದ್ಧ ಮಗನನ್ನು ಮದುವೆಯಾಗಿರುವುದು, ಇನ್ನು ಸುಖವಾಗಿರುವುದಕ್ಕೆ ಬಿಟ್ಟು ಬಿಡುತ್ತೀನಾ..? ಎಂದೆಲ್ಲಾ ಪ್ಲ್ಯಾನ್ ಹಾಕಿಕೊಂಡಿದ್ದಾಳೆ.ಸಹನಾಗೆ ಹಿಂಸೆ ಕೊಡುವುದಕ್ಕೆ ಸಜ್ಜು..ಸಹನಾ ಇದೇ ಮೊದಲ ಬಾರಿಗೆ ಅವ್ವನನ್ನು ಬಿಟ್ಟು, ಮನೆಯನ್ನು ಬಿಟ್ಟು, ತಂಗಿಯರನ್ನು ಬಿಟ್ಟು ಹೋಗುತ್ತಾ ಇರೋದು. ಆ ಕಡೆ ಘಾಟಿ ಅತ್ತೆ ಬೇರೆ. ಮುರುಳಿ ಮುಂದೆ ನಾಟಕವಾಡಿ, ಅವನಿಲ್ಲದೆ ಇದ್ದಾಗ ಕಷ್ಟ ಕೊಟ್ಟರೆ ಸಹನಾ ಹೇಳಿಕೊಳ್ಳುವುದಾದರೂ ಯಾರ ಬಳಿ..? ನಂಬುವುದಾದರೂ ಯಾರು..? ಈಗಲೇ ಹೆತ್ತವರಿಂದ ದೂರ ಮಾಡುತ್ತಿದ್ದಾಳೆ ಕೌಸಲ್ಯ. ಯಾರಾದರೂ ನನ್ನ ಜೊತೆಗೆ ಬನ್ನಿ ಅಂತ ಸಹನಾ ಅಳುತ್ತಾ ಫೋನ್ ಮಾಡಿದರೆ, ಅದನ್ನು ಕಿತ್ತುಕೊಂಡ ಕೌಸಲ್ಯ, “ಯಾರು ಬೇಡ. ನಿಮ್ಮ ಮಗಳನ್ನು ನೋಡಿಕೊಳ್ಳಲು ನಾವೆಲ್ಲಾ ಇದ್ದೇವೆ. ಮುಖ್ಯವಾಗಿ ಮುರುಳಿ ಇದ್ದಾನೆ” ಅಂತ ನಾಟಕ ಶುರು ಮಾಡಿದ್ದಾಳೆ.ಗಂಡನ ಮನೆಗೆ ಹೊರಟ ಸಹನಾ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಠಾಣ್‌ಗೆ ಆ್ಯಕ್ಷನ್ ಅಂದ್ರೆ ಎನರ್ಜಿ; ಲಾಜಿಕ್ ಅಂದ್ರೆ ಅಲರ್ಜಿ!.

Fri Feb 24 , 2023
  ಮಾಜಿ ರಾ ಏಜೆಂಟ್ ಆಗಿರುವ ಪಠಾಣ್‌ (ಶಾರುಖ್ ಖಾನ್) ಸೇನೆಯಿಂದ ದೂರ ಉಳಿದಿರುತ್ತಾನೆ. ಮತ್ತೊಂದೆಡೆ ಜಿಮ್ (ಜಾನ್ ಅಬ್ರಾಹಂ) ಎಂಬ ಪಾತಕಿಯೊಬ್ಬ ಭಾರತದ ಮೇಲೆ ದಾಳಿ ಮಾಡಲು ದೊಡ್ಡ ಸ್ಕೆಚ್ ಹಾಕಿರುತ್ತಾನೆ. ಅವನಿಗೆ ಬೆಂಬಲವಾಗಿ ಪಾಕಿಸ್ತಾನ ಇರುತ್ತದೆ. ಭಾರತದ ಮೇಲೆ ದಾಳಿ ಮಾಡಲು ಮುಂದಾಗಿರುವ ಜಿಮ್‌ನನ್ನು ಮಟ್ಟ ಹಾಕಲು ಪಠಾಣ್‌ ಮುಂದಾಗುತ್ತಾನೆ. ಆ ಮಿಷನ್‌ನಲ್ಲಿ ಪಠಾಣ್‌ಗೆ ಹೇಗೆ ಯಶಸ್ವಿಯಾಗುತ್ತಾನೆ? ಜಿಮ್‌ಗೆ ಭಾರತ ಮೇಲೇಕೆ ದ್ವೇಷ? ಪಾಕಿಸ್ತಾನ ಏಕೆ ಜಿಮ್‌ಗೆ […]

Advertisement

Wordpress Social Share Plugin powered by Ultimatelysocial