ಇಡೀ ವಿಶ್ವದ ಕಣ್ಣು ಈಗ ಕನ್ನಡ ಚಿತ್ರರಂಗದ ಮೇಲಿದೆ. ‘ಕೆಜಿಎಫ್ 2’ ಬಾಕ್ಸಾಫೀಸ್!

 

ಇಡೀ ವಿಶ್ವದ ಕಣ್ಣು ಈಗ ಕನ್ನಡ ಚಿತ್ರರಂಗದ ಮೇಲಿದೆ. ‘ಕೆಜಿಎಫ್ 2’ ಬಾಕ್ಸಾಫೀಸ್ ದಾಖಲೆಗಳನ್ನು ಕಣ್ಣಾರೆ ನೋಡಿದ ಬಳಿಕ ಸ್ಯಾಂಡಲ್‌ವುಡ್ ಸಿನಿಮಾಗಳ ಕಡೆ ತಿರುಗಿ ನೋಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಮಧ್ಯೆ ‘ಕೆಜಿಎಫ್ 2’ ಒಂದೊಂದೇ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಾ?

ಮುನ್ನುಗುತ್ತಿದೆ.

‘ಕೆಜಿಎಫ್ 2’ ಬಿಡುಗಡೆ ಆದಲ್ಲಿಂದ ಸುಮಾರು 29 ದಾಖಲೆಗಳನ್ನು ಬರೆದಿದೆ. ಬಾಕ್ಸಾಫೀಸ್‌ನಲ್ಲಿ ರಾಕಿಭಾಯ್ ಹವಾ ಕಂಡು ಭಾರತೀಯ ಚಿತ್ರರಂಗ ತಲೆಕೆಡಿಸಿಕೊಂಡಿದೆ. ಇಷ್ಟೊಂದು ದಾಖಲೆ ಬರೆದ ‘ಕೆಜಿಎಫ್ 2’ ಸಿನಿಮಾ ಇದೊಂದು ದಾಖಲೆಯನ್ನು ಮುರಿಯಲು ಮಾತ್ರ ಸಾಧ್ಯವಾಗಿಲ್ಲ.

ವಿಶ್ವದ ಉದ್ದಗಲಕ್ಕೂ ಬೇಜಾನ್ ಸದ್ದು ಮಾಡುತ್ತಿರುವ ‘ಕೆಜಿಎಫ್ 2’ ಒಂದೇ ದಾಖಲೆಯಿಂದ ವಂಚಿತವಾಗಿದೆ. ಒಂದು ವೇಳೆ ಈ ದಾಖಲೆಯನ್ನೂ ಮುರಿದಿದ್ದರೆ, ‘ಕೆಜಿಎಫ್ 2’ ಮುಂದೆ ಬಾಲಿವುಡ್‌ ಮಂಡಿಯೂರಿದಂತಾಗುತ್ತಿತ್ತು.

ಬಾಲಿವುಡ್ ದಾಖಲೆ ಬ್ರೇಕ್ ಮಾಡಿಲ್ಲ ‘ಕೆಜಿಎಫ್ 2’
‘ಕೆಜಿಎಫ್ 2’ ಹಲವು ದಾಖಲೆಗಳನ್ನು ಮುರಿದಿದೆ. ಚಿತ್ರತಂಡದ ಪ್ರಕಾರವೇ ಸುಮಾರು 29ಕ್ಕೂ ಹೆಚ್ಚು ದಾಖಲೆಗಳನ್ನು ಮುರಿದಿದೆ. ಆದರೆ, ವೀಕೆಂಡ್‌ನಲ್ಲಿ ಬಾಲಿವುಡ್ ಸಿನಿಮಾಗಳ ಈ ಒಂದು ದಾಖಲೆಯನ್ನು ಮಾತ್ರ ‘ಕೆಜಿಎಫ್ 2’ ಬ್ರೇಕ್ ಮಾಡಲು ಸಾಧ್ಯವಾಗಲೇ ಇಲ್ಲ. ವಿಶ್ವದಾದ್ಯಂತ ವೀಕೆಂಡ್‌ ಕಲೆಕ್ಷನ್‌ನಲ್ಲಿ ‘ಕೆಜಿಎಫ್ 2’ ಐದನೇ ಸ್ಥಾನದಲ್ಲಿದೆ. ವಾರಾಂತ್ಯದ ಹೊತ್ತಿಗೆ ಬಾಲಿವುಡ್‌ನ ನಾಲ್ಕು ಸಿನಿಮಾಗಳ ಕಲೆಕ್ಷನ್ ಅನ್ನು ಹಿಂದಿಕ್ಕಲು ‘ಕೆಜಿಎಫ್ 2’ ಸಿನಿಮಾ ಸೋತಿದೆ.

4 ಸಿನಿಮಾಗಳ ದಾಖಲೆ ಮುರಿಯಲಿಲ್ಲ

ಸುದೀರ್ಘ ರಜೆಯ ಹೊರತಾಗಿಯೂ ‘ಕೆಜಿಎಫ್ 2’ ವೀಕೆಂಡ್‌ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದಿಲ್ಲ. ಹೌದು.. ಸಲ್ಮಾನ್ ಖಾನ್ ನಟನೆಯ ‘ಸುಲ್ತಾನ್’, ಪ್ರಭಾಸ್ ನಟನೆಯ ‘ಬಾಹುಬಲಿ 2’, ಆಮಿರ ಖಾನ್ ನಟನೆಯ ‘ದಂಗಲ್’ ಹಾಗೂ ರಣ್‌ಬೀರ್ ಕಪೂರ್ ಅಭಿನಯದ ‘ಸಂಜು’ ಚಿತ್ರದ ಮೊದಲ ವಾರದ ಗಳಿಕೆಯನ್ನು ಸೈಡ್ ಹಾಕುವಲ್ಲಿ ಸೋತಿದೆ. ‘ಸುಲ್ತಾನ್’ ಸಿನಿಮಾ ಮೊದಲ ವಾರ 210 ಕೋಟಿ, ‘ಬಾಹುಬಲಿ 2’ ಸಿನಿಮಾ 209 ಕೋಟಿ, ರಣ್‌ಬೀರ್ ಕಪೂರ್ ಅಭಿನಯದ ‘ಸಂಜು’ 204 ಕೋಟಿ, ಆಮಿರ್ ಖಾನ್ ಅಭಿನಯದ ‘ದಂಗಲ್’ 199 ಕೋಟಿ ಕಲೆಕ್ಷನ್ ಮಾಡಿತ್ತು. ಅದೇ ‘ಕೆಜಿಎಫ್ 2’ 198 ಕೋಟಿ ಗಳಿಕೆ ಮಾಡಿದೆ.

‘ಕೆಜಿಎಫ್ 2’ ದಾಖಲೆ ಗಳಿಕೆ

‘ಕೆಜಿಎಫ್ 2’ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಮೊದಲ ದಿನವೇ ದಾಖಲೆ ಬರೆದಿತ್ತು. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ‘ಕೆಜಿಎಫ್ 2’ ಫಸ್ಟ್ ಡೇನೇ 52.5 ಕೋಟಿ ಗಳಿಕೆ ಮಾಡಿದೆ. ಅದೇ ‘ಸಂಜು’ ಸಿನಿಮಾ ಮೊದಲ 34.2 ಕೋಟಿ, ಸಲ್ಮಾನ್ ಖಾನ್ ‘ಸುಲ್ತಾನ್’ 36.6 ಕೋಟಿ, ಪ್ರಭಾಸ್ ‘ಬಾಹುಬಲಿ 2’ 40.7 ಕೋಟಿ ಹಾಗೂ ‘ವಾರ್’ ಸಿನಿಮಾ 50.6 ಕೋಟಿ ಕಲೆಕ್ಷನ್ ಮಾಡಿತ್ತು. ಹೀಗಿದ್ದರೂ, ‘ಕೆಜಿಎಫ್ 2’ ಸಿನಿಮಾ ವೀಕೆಂಡ್ ಮುಗಿಯುವ ವೇಳೆಗೆ ಯಾಕೆ ಕಲೆಕ್ಷನ್ ಮಾಡಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಬಾಲಿವುಡ್ ಕಲೆಕ್ಷನ್ ಎಷ್ಟು?

ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ 6 ದಿನಗಳಲ್ಲಿ 255.05 ಕೋಟಿ ಗಳಿಕೆ ಕಂಡಿದೆ. ಇಂದಿಗೆ( ಏಪ್ರಿಲ್ 21) ಸರಿಯಾಗಿ ಒಂದು ವಾರ ಕಂಪ್ಲೀಟ್ ಆಗಿದ್ದು, 265 ಕೋಟಿ ಗಳಿಕೆ ಮಾಡುವ ಸಾಧ್ಯತೆಯಿದೆ. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ‘ಬಾಹುಬಲಿ 2’ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದು, RRR ಗಳಿಸಿದ ಸಾವಿರ ಕೋಟಿ ಕಲೆಕ್ಷನ್ ದಾಖಲೆಯನ್ನು ಮೀರಿಸುತ್ತಾ? ಅನ್ನೋದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಕ್ಷಮೆ ಕೋರಿದ ಅಕ್ಷಯ್ ಕುಮಾರ್!

Thu Apr 21 , 2022
  ನಟ ಅಕ್ಷಯ್ ಕುಮಾರ್ ಕ್ಷಮೆ ಕೇಳಿದ್ದಾರೆ. ಹಿಂದೊಮ್ಮೆ ತಾವು ಯಾವುದೇ ಗುಟ್ಕಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದ ಅಕ್ಷಯ್ ಕುಮಾರ್, ಇತ್ತೀಚೆಗೆ ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಬಹಿರಂಗ ಕ್ಷಮೆ ಕೇಳಿದ್ದಾರೆ. ನಟ ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಈಗಾಗಲೇ ವಿಮಲ್ ಮಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸುತ್ತಿದ್ದು, ಅದೇ ಜಾಹೀರಾತಿಗೆ ಈಗ ಅಕ್ಷಯ್ ಕುಮಾರ್ ಸಹ ಎಂಟ್ರಿ ಕೊಟ್ಟಿದ್ದರು. […]

Advertisement

Wordpress Social Share Plugin powered by Ultimatelysocial