ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ತಂದೆ ಡಾ.ಕೆ.ಸುಬ್ರಹ್ಮಣ್ಯಂ ಅವರನ್ನು ರಕ್ಷಣಾ ಉತ್ಪಾದನಾ ಕಾರ್ಯದರ್ಶಿ ಹುದ್ದೆಯಿಂದ ತೆಗೆದಿದ್ದರು ̤

ವದೆಹಲಿ, ಫೆಬ್ರವರಿ 21: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 1980ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ತಮ್ಮ ತಂದೆ ಡಾ.ಕೆ.ಸುಬ್ರಹ್ಮಣ್ಯಂ ಅವರನ್ನು ರಕ್ಷಣಾ ಉತ್ಪಾದನಾ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಿದ್ದರು. ಅಲ್ಲದೆ ರಾಜೀವ್ ಗಾಂಧಿ ಅವಧಿಯಲ್ಲಿ ತಮ್ಮ ತಂದೆಗಿಂತ ಕಿರಿಯ ವ್ಯಕ್ತಿಯೊಬ್ಬರು ಕ್ಯಾಬಿನೆಟ್ ಕಾರ್ಯದರ್ಶಿ ಮಾಡಿ ಅವರನ್ನು ಹುದ್ದೆಯಿಂದ ದೂರ ಮಾಡಲಾಯಿತು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದರು.

 

ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಜೈಶಂಕರ್ ಅವರು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಸೇವೆಯಿಂದ ರಾಜಕೀಯಕ್ಕೆ ತಮ್ಮ ಪ್ರಯಾಣದ ಬಗ್ಗೆ ಮಾತನಾಡಿದರು. ತಾವು ಯಾವಾಗಲೂ ಅತ್ಯುತ್ತಮ ಅಧಿಕಾರಿಯಾಗಲು ಮತ್ತು ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಏರಲು ಆಕಾಂಕ್ಷೆ ಹೊಂದಿದ್ದರು ಎಂದು ಹೇಳಿದರು.

ಜೈಶಂಕರ್ ಅವರು ಜನವರಿ 2015 ರಿಂದ ಜನವರಿ 2018 ರವರೆಗೆ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು. ಮೊದಲು ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಪ್ರಮುಖ ರಾಯಭಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. 2011ರಲ್ಲಿ ನಿಧನರಾದ ಅವರ ತಂದೆ ಕೆ ಸುಬ್ರಹ್ಮಣ್ಯಂ ಅವರು ಭಾರತದ ಪ್ರಮುಖ ರಾಷ್ಟ್ರೀಯ ಭದ್ರತಾ ತಂತ್ರಜ್ಞರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟವರು.

ನನ್ನ ಮನಸ್ಸಿನಲ್ಲಿ ನಾನು ಅತ್ಯುತ್ತಮ ವಿದೇಶಿ ಸೇವಾ ಅಧಿಕಾರಿಯಾಗಬೇಕೆಂದು ಬಯಸಿದ್ದೆ. ನೀವು ಮಾಡಬಹುದಾದ ಅತ್ಯುತ್ತಮವಾದ ವ್ಯಾಖ್ಯಾನವೆಂದರೆ ವಿದೇಶಾಂಗ ಕಾರ್ಯದರ್ಶಿಯಾಗಿ ಕೊನೆಗೊಳ್ಳುವುದು. ನಮ್ಮ ಮನೆಯಲ್ಲಿಯೂ ಇದೆ ಬಯಕೆ ಇತ್ತು. ನಾನು ಅದನ್ನು ಒತ್ತಡ ಎಂದು ಕರೆಯುವುದಿಲ್ಲ. ಆದರೆ ಅಧಿಕಾರಶಾಹಿಯಾಗಿದ್ದ ನನ್ನ ತಂದೆ ಕಾರ್ಯದರ್ಶಿಯಾಗಿದ್ದರು. ಆದರೆ ಅವರನ್ನು ಅವರ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಯಿತು ಎಂಬ ಸತ್ಯದ ಬಗ್ಗೆ ನಮಗೆಲ್ಲರಿಗೂ ಅರಿವಿತ್ತು. ಆ ಸಮಯದಲ್ಲಿ ಅವರು ಬಹುಶಃ 1979ರಲ್ಲಿ ಜನತಾ ಸರ್ಕಾರದ ಅತ್ಯಂತ ಕಿರಿಯ ಕಾರ್ಯದರ್ಶಿಯಾದರು ಅವರು ಹೇಳಿದರು.

1980ರಲ್ಲಿ ಅವರು ರಕ್ಷಣಾ ಉತ್ಪಾದನೆಯ ಕಾರ್ಯದರ್ಶಿಯಾಗಿದ್ದರು. 1980ರಲ್ಲಿ ಇಂದಿರಾ ಗಾಂಧಿಯವರು ಪುನರಾಯ್ಕೆಯಾದಾಗ ಅವರು ತೆಗೆದು ಹಾಕಿದ ಮೊದಲ ಕಾರ್ಯದರ್ಶಿ ಅವರು. ಅವರು ರಕ್ಷಣೆಯ ಬಗ್ಗೆ ಹೇಳುವ ಅತ್ಯಂತ ಜ್ಞಾನವುಳ್ಳ ವ್ಯಕ್ತಿಯಾಗಿದ್ದರು. ತಮ್ಮ ತಂದೆಯು ತುಂಬಾ ನೇರ ವ್ಯಕ್ತಿಯಾಗಿದ್ದರು, ಇದು ಸಮಸ್ಯೆಗೆ ಕಾರಣವಾಗಿರಬಹುದು, ಆದರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಆದರೆ ವಾಸ್ತವವೆಂದರೆ ಅವರು ಅಧಿಕಾರಶಾಹಿಯಲ್ಲಿ ತಮ್ಮದೇ ವೃತ್ತಿಜೀವನವನ್ನು ನೋಡಿದ್ದವರು. ಹುದ್ದೆಯಿಂದ ತೆಗೆದ ಬಳಿಕ ಒಂದು ರೀತಿ ಸ್ಥಗಿತಗೊಂಡರು. ಅದರ ನಂತರ, ಅವರು ಮತ್ತೆ ಎಂದಿಗೂ ಕಾರ್ಯದರ್ಶಿಯಾಗಲಿಲ್ಲ. ರಾಜೀವ್ ಗಾಂಧಿ ಅವಧಿಯಲ್ಲಿ ತಮ್ಮ ತಂದೆ ಅವರು ಅವರಿಗಿಂತ ಕಿರಿಯ ವ್ಯಕ್ತಿಯನ್ನು ಸೆಕ್ರೆಟರಿ ಮಾಡಲಾಯಿತು. ಹಾಗಾಗಿ ನನ್ನ ಅಣ್ಣ ಸೆಕ್ರೆಟರಿಯಾದಾಗ ಅವರು ತುಂಬಾ ಹೆಮ್ಮೆಪಡುತ್ತಿದ್ದರು. ನನ್ನ ತಂದೆ ತೀರಿಕೊಂಡ ಬಳಿಕ ನಾನು ಕಾರ್ಯದರ್ಶಿಯಾದೆ ಎಂದು ಡಾ.ಜೈಶಂಕರ್ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಹುಲಿ ಇದ್ದಂತೆ, ಡಿ.ಕೆ.ಶಿವಕುಮಾರ್ ಸಿಂಹ ಇದ್ದಂತೆ ಇವರಿಬ್ಬರು ಇದ್ದ ಮೇಲೆ ಬೇರೆಯವರು ಯಾಕೆ..?

Wed Feb 22 , 2023
ಚಾಮರಾಜನಗರ, ಫೆಬ್ರವರಿ 22: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ಮರಳುಗಾಡಿನಲ್ಲಿದ್ದ ನಮಗೆ ತೊರೆ, ಕೆರೆ, ನದಿ ದಾಟಿಸಿ ಈಗ ಸಮುದ್ರದ ಬಳಿ ಕಾಂಗ್ರೆಸ್ ತಂದು ನಿಲ್ಲಿಸಿದೆ ಎಂದು ನಟ ಸಾಧುಕೋಕಿಲ ಕಾಂಗ್ರೆಸ್‌ ಪಕ್ಷವನ್ನು ಹೊಗಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ನಟ‌ ಸಾಧು‌ಕೋಕಿಲ, ಈಗ ನಾವು ದೊಡ್ಡ-ದೊಡ್ಡ ಬಿಲ್ಡಿಂಗ್, ಐಷರಾಮಿ ಜೀವನ, ಫ್ಲೈ ಓವರ್ ನೋಡುತ್ತಿದ್ದೇವೆ, ಆದರೆ ಸ್ವಾತಂತ್ರ್ಯ ಬಂದ ಬಳಿಕ […]

Advertisement

Wordpress Social Share Plugin powered by Ultimatelysocial