ಮೈಸೂರು ಜಿಲ್ಲೆಯ ಹಲವೆಡೆ ವಾರದೊಳಗೆ ಚಿರತೆ ಕಾರ್ಯಾರಂಭ, ಒಂದು ತಿಂಗಳಲ್ಲಿ ಸೆರೆಯಾದ ಚಿರತೆಗಳ ಮಾಹಿತಿ

 

ಮೈಸೂರು, ಫೆಬ್ರವರಿ, 10: ಚಿರತೆ ಕಾರ್ಯಪಡೆ (leopard taskforce) ಇನ್ನು 10 ದಿನದೊಳಗೆ ತನ್ನ ಕೆಲಸ ಪ್ರಾರಂಭಿಸಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜು ಮೈಸೂರಿನಲ್ಲಿ ತಿಳಿಸಿದರು. ಹಾಗೆಯೇ ಸೆರೆಯಾದ ಚಿರತೆಗಳ ವಿವರನ್ನು ಇಲ್ಲಿ ನೀಡಲಾಗಿದೆ.

ನಗರದ ಅರಣ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಕಡೆಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಅನುಕೂಲವಾಗುವಂತೆ 5 ವಾಹನಗಳನ್ನು ಶೀಘ್ರದಲ್ಲೇ ಖರೀದಿಸಲಾಗುವುದು. ಡಿಸಿಎಫ್‌ ನೇತೃತ್ವ ಕಾರ್ಯಪಡೆ ಇದರ ಕೆಲಸ ನಿರ್ವಹಿಸಲಿದೆ. ಈಗಾಗಲೇ ಕಾರ್ಯಪಡೆಗೆ ಹೊರಗುತ್ತಿಗೆ ಆಧಾರದ ಮೇಲೆ 40 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

FSL ವರದಿ ಬಳಿಕ ಸತ್ಯ ತಿಳಿಯಲಿದೆ

ಬಾಲಕ ಜಯಂತ್ ಮೃತಪಡುವ ಮುನ್ನ ಎರಡು ದಿನಗಳ ಹಿಂದೆ ಸೆರೆ ಸಿಕ್ಕ ಚಿರತೆ ಓಡಾಡಿರುವ ಕುರುಹುಗಳಿವೆ. ಅಲ್ಲದೆ, ದಾಳಿ ಸಮಯದಲ್ಲೂ ಕೆಲವು ಗುರುತುಗಳು ಮೇಲ್ನೋಟಕ್ಕೆ ಚಿರತೆ ದಾಳಿ ಎಂದು ದೃಢಪಡಿಸಿವೆ. ಆದರೂ, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ನಿಜವಾದ ಕಾರಣ ತಿಳಿಯಲಿದೆ. ಅದೇ ರೀತಿ ಮೃತಪಟ್ಟ ಉಳಿದ ಮೂವರ ವರದಿ ಕೂಡ ಬರಲಿವೆ ಎಂದರು.

30 ಹೆಚ್ಚುವರಿ ಬೋನ್‌ಗಳ ಖರೀದಿ

ಚಿರತೆಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಂದ ಹೆಚ್ಚಿನ ಕರೆಗಳು ಬರುತ್ತಿವೆ. ಸದ್ಯ ನಮ್ಮ ಬಳಿ 20 ಬೋನ್‌ಗಳಿವೆ. ಇನ್ನು 30 ಹೆಚ್ಚುವರಿ ಬೋನ್‌ಗಳನ್ನು ಖರೀದಿಸಲಾಗುವುದು. ಚಿರತೆ ಕಾಣಿಸಿಕೊಳ್ಳುವ ಪ್ರದೇಶದಲ್ಲಿ ಒಂದೊಂದು ಬೋನ್ ಅನ್ನು ಹತ್ತು-ಹದಿನೈದು ದಿನ ಒಂದೇ ಜಾಗದಲ್ಲಿ ಇಡುವ ಕಾರಣ ಬೇರೆ ಕಡೆ ಸಾಗಿಸಲು ಸಮಸ್ಯೆಯಾಗಿದೆ. ಹಾಗಾಗಿ ಎರಡು ದೊಡ್ಡ ಗಾತ್ರದ ಗೇಜ್ ಇರುವ ಬೋನ್‌ಗಳನ್ನು ಖರೀದಿಸಲಾಗುತ್ತಿದೆ ಎಂದು ವಿವರಿಸಿದರು.

ಒಂದು ತಿಂಗಳಲ್ಲಿ ಸೆರೆಯಾದ ಚಿರತೆಗಳು

ಒಂದು ತಿಂಗಳಲ್ಲಿ ಮೈಸೂರು ಸುತ್ತಮುತ್ತ ನಾಲ್ಕು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ನಾಲ್ಕು ವರ್ಷಗಳಲ್ಲಿ 65 ಚಿರತೆಗಳನ್ನು ಸೆರೆಹಿಡಿಯಲಾಗಿದ್ದು, ಮೈಕ್ರೋಚಿಪ್ ಅಳವಡಿಸಿರುವ ಚಿರತೆಗಳ ಚಲನವಲನವನ್ನು ಗಮನಿಸಲಾಗುತ್ತಿದೆ. ಅದೇ ರೀತಿ ಸಿಸಿ ಟಿವಿಗಳನ್ನು ಹೆಚ್ಚು ಅಳವಡಿಸಲಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಚಿರತೆ ಚಲನವಲನದ ಮೇಲೆ ನಿಗಾ ಇಟ್ಟು ಕಾರ್ಯಾಚರಣೆ ಮಾಡಿ ಸೆರೆ ಹಿಡಿಯಲಾಗುವುದು ಎಂದು ಹೇಳಿದರು.

ಬೇಸ್‌ಲೈನ್ ಸರ್ವೆಗೆ ತೀರ್ಮಾನ

ಮೈಸೂರಿನ ಸುತ್ತಮುತ್ತ ಎಷ್ಟು ಚಿರತೆಗಳಿವೆ ಎಂಬ ನಿಖರ ಮಾಹಿತಿ ಇಲ್ಲ. ಹಾಗಾಗಿ ಬೇಸ್‌ಲೈನ್ ಸರ್ವೆಗೆ ತೀರ್ಮಾನಿಸಲಾಗಿದೆ. ಲೆಪರ್ಡ್ ಕಾರ್ಯಪಡೆ ಕೆಲಸ ಶುರು ಮಾಡಿದ ಮೇಲೆ ನಂಜನಗೂಡು, ತಿ.ನರಸೀಪುರ, ಎಚ್.ಡಿ.ಕೋಟೆ ತಾಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ಸರ್ವೆ ಮಾಡಲಾಗುವುದು ಎಂದು ಹೇಳಿದರು.

ಮಾನವ ಮತ್ತು ಚಿರತೆ ನಡುವಿನ ಸಂಘರ್ಷ ತಡೆಗೆ ಮೈಸೂರು, ತಿ.ನರಸೀಪುರ, ಎಚ್.ಡಿ.ಕೋಟೆ, ನಂಜನಗೂಡು, ಸರಗೂರಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. 20 ದಿನಗಳಲ್ಲಿ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮೂಡಿಸುವ, ಜನರಲ್ಲಿ ಭಯವನ್ನುಂಟು ಮಾಡುವ ಸಂದೇಶಗಳು ಹರಿದಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್, ಆರ್‌ಎಫ್‌ಒ ಸುರೇಂದ್ರ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾದ ದೋವಲ್‌

Fri Feb 10 , 2023
  ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌,ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಿದ್ದಾರೆ. ಭಾರತ ಹಾಗೂ ರಷ್ಯಾ ನಡುವಿನ ಕಾರ್ಯತಂತ್ರ ಪಾಲುದಾರಿಕೆ ಮತ್ತು ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಅಫ್ಘಾನಿಸ್ತಾನದ ಭದ್ರತಾ ಕಾಳಜಿಗಳ ಕುರಿತು ರಷ್ಯಾ ಆಯೋಜಿಸಿದ್ದ ಭದ್ರತಾ ಮಂಡಳಿಯ ಕಾರ್ಯದರ್ಶಿಗಳು ಹಾಗೂ ಭದ್ರತಾ ಸಲಹೆಗಾರರ ಸಭೆಯಲ್ಲಿ ದೋವಲ್‌ ಪಾಲ್ಗೊಂಡಿದ್ದರು. […]

Advertisement

Wordpress Social Share Plugin powered by Ultimatelysocial