UNION BUDGET:2022ರ ಕೇಂದ್ರ ಬಜೆಟ್ ಯಾವಾಗ?

ದೇಶದ ಆರ್ಥಿಕ ಬೆಳವಣಿಗೆ ನಿರ್ಧಾರದಲ್ಲಿನ ಪ್ರಮುಖ ಜವಾಬ್ದಾರಿಗಳಲ್ಲಿ ಒಂದು ಬಜೆಟ್​ ಮಂಡನೆ.

ಪ್ರತಿ ವರ್ಷ ಬಜೆಟ್​ ಮಂಡನೆ ದಿನದಂದು ಆಯಾ ಆರ್ಥಿಕ ವರ್ಷದ ಕೇಂದ್ರದ ಬಜೆಟ್ ಹಣಕಾಸು ಸಚಿವರಿಂದ ಮಂಡಿಸಲಾಗುತ್ತದೆ. ಈ ವರ್ಷ (Union Budget 2022-23) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿ ಸರ್ಕಾರದ ಪರವಾಗಿ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಅವರು ಮಂಡಿಸುತ್ತಿರುವ ನಾಲ್ಕನೇ ಬಜೆಟ್. ಈ ವರ್ಷದ ಅಧಿವೇಶನದಲ್ಲಿ ಕೊವಿಡ್-19 ಬಿಕ್ಕಟ್ಟಿನ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ. ಕೊವಿಡ್-19 ಶುರುವಾದಾಗಿನಿಂದ ಭಾರತವು ಈಗ ಮೂರನೇ ಅಲೆಗೆ ಸಾಕ್ಷಿ ಆಗಿದೆ. ಕೇಂದ್ರ ಬಜೆಟ್ 2022ರ ಬಗ್ಗೆ ನಿಮಗೆ ಗೊತ್ತಿರಬೇಕಾದ ಎಲ್ಲ ಮಾಹಿತಿಗಳು ಇಲ್ಲಿವೆ.

ಬಜೆಟ್ 2022ರ ದಿನಾಂಕ ಮತ್ತು ಸಮಯ:

ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ನೇ ತಾರೀಕಿನ ಮಂಗಳವಾರ ಬೆಳಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡಿಸುವ ಅವಧಿ 9ರಿಂದ 120 ನಿಮಿಷಗಳು ಇರಲಿದೆ. ಆದರೆ ಕಳೆದ ವರ್ಷ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ಭಾಷಣ 2 ಗಂಟೆ 40 ನಿಮಿಷ ಹಿಡಿಸಿತು (160 ನಿಮಿಷಗಳು). ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಇದು ದಾಖಲೆಯ ಅವಧಿಯಾಗಿದೆ.

ಬಜೆಟ್ 2022 ನೋಡುವುದು ಎಲ್ಲಿ?

ಬಜೆಟ್ 2022 ಲೋಕಸಭಾ ಟೀವಿಯಲ್ಲಿ ನೇರ ಪ್ರಸಾರ ಆಗುತ್ತದೆ. ಇದನ್ನು ಹೊರತುಪಡಿಸಿ, ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳಾದ ಫೇಸ್​ಬುಕ್, ಟ್ವಿಟರ್ ಮತ್ತು ಯೂಟ್ಯೂಬ್​ಗಳಲ್ಲೂ ಬಜೆಟ್ ಮಂಡನೆಯ ವೀಕ್ಷಣೆ ಮಾಡಬಹುದು ನೇರ ಪ್ರಸಾರವನ್ನು ಟೀವಿ ಸುದ್ದಿ ಮಾಧ್ಯಮಗಳು ಸಹ ಪ್ರಸಾರ ಮಾಡುತ್ತವೆ.

ಏನನ್ನು ನಿರೀಕ್ಷೆ ಮಾಡಬಹುದು?

ಕಳೆದ ವರ್ಷ ಸರ್ಕಾರವು ಕೊವಿಡ್-19 ಲಸಿಕೆಗಾಗಿ 35 ಸಾವಿರ ಕೋಟಿ ರೂಪಾಯಿ ಮೀಸಲಿರಿಸಿತ್ತು. ಇನ್ನಷ್ಟು ಬೆಂಬಲ ನೀಡುವ ಬಗ್ಗೆ ತಿಳಿಸಿತ್ತು. ಆ ನಂತರ ಭಾರತದಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಸಂಖ್ಯೆಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಶುರುವಾಯಿತು. ಇದರಿಂದಾಗಿ ಕೋಟ್ಯಂತರ ಫಲಾನುಭವಿಗಳು ಲಸಿಕೆ ಪಡೆಯುತ್ತಿದ್ದಾರೆ. ಈ ವರ್ಷ ಕೂಡ ಕೊರೊನಾ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಇನ್ಷೂರೆನ್ಸ್ ವಲಯಗಳ ಬಗ್ಗೆ ಹೆಚ್ಚಿನ ಗಮನ ನೀಡುವ ಸಾಧ್ಯತೆ ಇದೆ.

ಇನ್ನು ತೆರಿಗೆ ಪಾವತಿದಾರರ ವಿಚಾರಕ್ಕೆ ಬಂದರೆ 2022ರ ತೆರಿಗೆ ದರದ ಇಳಿಕೆ ಹಾಗೂ ಸರ್​ಚಾರ್ಜ್ ಮತ್ತಿತರವುಗಳನ್ನು ಕಡಿಮೆ ಮಾಡಬಹುದು ಎಂದು ನಿರೀಕ್ಷಿಸುತ್ತಿದ್ದಾರೆ.

ಕೊವಿಡ್-19 ಪರಿಹಾರವಾಗಿ ಆದಾಯ ತೆರಿಗೆ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಿನಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಸೆಕ್ಷನ್ 80ಸಿ ಅಡಿಯಲ್ಲಿ ಭಾರತದಲ್ಲಿ ಬಹುಪಾಲು ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಉಳಿತಾಯಕ್ಕೆ ಅವಕಾಶ ಸಿಗುತ್ತದೆ. ಬಹಳ ಸಮಯದಿಂದ ಸ್ಟ್ಯಾಂಡರ್ಡ್ ಡಿಡಕ್ಷನ್ 1.5 ಲಕ್ಷ ರೂಪಾಯಿಯೇ ಇದೆ. ಆ ಮಿತಿಯನ್ನು ಹೆಚ್ಚಿಸಬೇಕು ಎಂದು ವಿಶ್ಲೇಷಕರು ಹೇಳಿದ್ದಾರೆ.

ಇದನ್ನು ಹೊರತುಪಡಿಸಿ, ಸರ್ಕಾರದಿಂದ ಇನ್ಷೂರೆನ್ಸ್ ವಲಯದ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ. ಇದರ ಜತೆಗೆ ಸ್ಟ್ಯಾಂಡರ್ಡ್ ಡಿಡಕ್ಷನ್​ನಲ್ಲಿ ಏರಿಕೆ ಹಾಗೂ ಇತರ ತೆರಿಗೆ ಅನುಕೂಲಗಳನ್ನು ಮಾಡಿಕೊಡಬಹುದು. ಇನ್ನು ಗ್ರಾಮೀಣ ಆರ್ಥಿಕತೆ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಬಯಸಿದೆ ಮತ್ತು ಈ ಹಿಂದಿನ ವರ್ಷಗಳಲ್ಲಿ ಪಿಎಲ್​ಐಗೆ ಹೆಚ್ಚು ಖರ್ಚು ಮಾಡವ ಮೂಲಕ ಉತ್ಪಾದನೆ ವಲಯಕ್ಕೆ ಬೆಂಬಲ ನೀಡಲು ಬಯಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಗಳ ಮೇಲೆ ಅತ್ಯಾಚಾರ ಮಾಡಿದ ಕಾಮುಕ ಅಪ್ಪ;

Tue Jan 25 , 2022
 ಆಘಾತಕಾರಿ ಘಟನೆಯೊಂದರಲ್ಲಿ, ವಿಶಾಖಪಟ್ಟಣಂನಲ್ಲಿ 42 ವರ್ಷದ ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿಯನ್ನು ಬಂಧಿಸಿ ಜನವರಿ 23 ರಂದು ಭಾನುವಾರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದ ಆರೋಪಿ ತಂದೆ ಎರಡು ವರ್ಷಗಳ ಹಿಂದೆ ತನ್ನ ಎರಡೂ ಕಿಡ್ನಿಗಳು ವಿಫಲವಾದ ಹಿನ್ನೆಲೆಯಲ್ಲಿ ಆತ ಅಸ್ವಸ್ಥನಾಗಿದ್ದ ಆತ ವೇಳೆಯಲ್ಲಿ . ಆತನ ಪತ್ನಿ ತನ್ನ ಒಂದು ಕಿಡ್ನಿಯನ್ನು ಆತನಿಗೆ ದಾನ ಮಾಡಿದಳ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗೆ ಮಗಳು […]

Advertisement

Wordpress Social Share Plugin powered by Ultimatelysocial