ರಾಂಚಿ ಅಣೆಕಟ್ಟಿನಲ್ಲಿ 8,000ಕ್ಕೂ ಹೆಚ್ಚು ಮೀನುಗಳು ಸಾವು, ತನಿಖೆಗೆ ಆದೇಶ

ರಾಂಚಿಯ ಅಣೆಕಟ್ಟಿನಲ್ಲಿ 8,000ಕ್ಕೂ ಹೆಚ್ಚು ಮೀನುಗಳು ಸತ್ತಿರುವುದು ಕಂಡುಬಂದಿದ್ದು, ನಂತರ ಮೀನುಗಾರಿಕೆ ಇಲಾಖೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ರಾಂಚಿ: ರಾಂಚಿಯ ಅಣೆಕಟ್ಟಿನಲ್ಲಿ 8,000ಕ್ಕೂ ಹೆಚ್ಚು ಮೀನುಗಳು ಸತ್ತಿರುವುದು ಕಂಡುಬಂದಿದ್ದು, ನಂತರ ಮೀನುಗಾರಿಕೆ ಇಲಾಖೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಗೆಟಲ್ಸುಡ್ ಅಣೆಕಟ್ಟಿನಲ್ಲಿ ಮೀನು ಸಾಕಣೆಗೆಂದು ಹಾಕಲಾಗಿದ್ದ ನಾಲ್ಕು ಪಂಜರಗಳಲ್ಲಿ 500 ಗ್ರಾಂನಿಂದ 1 ಕೆಜಿ ತೂಕದ ಮೀನುಗಳು ಸತ್ತಿವೆ ಎಂದು ಜಿಲ್ಲಾ ಮೀನುಗಾರಿಕಾ ಅಧಿಕಾರಿ ಅರುಪ್ ಕುಮಾರ್ ಚೌಧರಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ರಾಜ್ಯ ಕೃಷಿ ಸಚಿವ ಬಾದಲ್ ಪತ್ರಲೇಖ್ ಶನಿವಾರ ಸಂಜೆ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಭಾನುವಾರದಂದು ಈ ಬಗ್ಗೆ ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಇಲಾಖೆ ಕಾರ್ಯದರ್ಶಿಗೆ ಬಾದಲ್ ಸೂಚಿಸಿದ್ದಾರೆ. ತಾನು ಮತ್ತು ತನ್ನ ತಂಡ ಅಣೆಕಟ್ಟಿಗೆ ಭೇಟಿ ನೀಡುತ್ತೇವೆ ಮತ್ತು ಮೀನುಗಳು ಹೇಗೆ ಸತ್ತವು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇವೆ ಎಂದು ಚೌಧರಿ ಹೇಳಿದರು.

‘ಮೀನುಗಳ ಸಾವಿಗೆ ಆಮ್ಲಜನಕದ ಕೊರತೆ, ರೋಗಗಳು ಅಥವಾ ಮಾಲಿನ್ಯದಂತಹ ಹಲವಾರು ಕಾರಣಗಳಿರಬಹುದು. ಆಮ್ಲಜನಕದ ಕೊರತೆ ಅಥವಾ ರೋಗವು ಈ ಮೀನುಗಳ ಸಾವಿಗೆ ಕಾರಣವಾಗಿರಬಹುದು ಎಂಬುದು ನಮ್ಮ ಶಂಕೆ. ಆದಾಗ್ಯೂ, ನಿಖರವಾದ ಕಾರಣ ಏನೆಂಬುದು ತನಿಖೆಯ ನಂತರವೇ ತಿಳಿಯಲಿದೆ. ನಾವು ನಮ್ಮ ತನಿಖೆಯನ್ನು ಮುಗಿಸುತ್ತೇವೆ’ ಎಂದು ಚೌಧರಿ ಹೇಳಿದರು.

ಉಳ್ಳಾಲ ಕೆರೆಯಲ್ಲಿ ಮೀನುಗಳ ಸಾವು: ಟೀಕೆ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ; ಮೀನುಗಾರಿಕಾ ಇಲಾಖೆಗೆ ಪತ್ರ ಬರೆಯಲು ಮುಂದು!ಮೀನುಗಳು ಉಳಿಯಲು ನೀರಿನಲ್ಲಿ ಆಮ್ಲಜನಕದ ಪ್ರಮಾಣವು ಲೀಟರ್ಗೆ ಐದು ಮಿಲಿಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಇರಬೇಕು. ಪ್ರತಿ ಲೀಟರ್ಗೆ ಮೂರು ಮಿಲಿಗ್ರಾಂಗಿಂತ ಕಡಿಮೆಯಾದರೆ, ಮೀನುಗಳು ಸಾಯುತ್ತವೆ ಎಂದು ಅವರು ಹೇಳಿದರು. ಘಟನಾ ಸ್ಥಳದ ಪಕ್ಕದಲ್ಲಿರುವ ಮಹೇಶ್ಪುರ ಪ್ರದೇಶದಲ್ಲಿ ಸುಮಾರು 300 ಮೀನಿನ ಪಂಜರಗಳಿವೆ ಮತ್ತು ಸುಮಾರು ಒಂದೂವರೆ ಟನ್ ಮೀನುಗಳನ್ನು ಸಾಕಲಾಗುತ್ತಿದೆ. ಆದರೆ, ಅವೆಲ್ಲವೂ ಸುರಕ್ಷಿತವಾಗಿವೆ ಎಂದು ಚೌಧರಿ ಹೇಳಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

Sonia Gandhi: ಅಸಮಾಧಾನ ಸ್ಫೋಟಗೊಳ್ಳುತ್ತಿದೆ ಅನ್ನೋದು ಊಹಾಪೋಹ: ಸೋನಿಯಾ ಗಾಂಧಿ

Sun Sep 17 , 2023
ಮುಂಬೈ: ವಿರೋಧ ಪಕ್ಷಗಳ ಮೈತ್ರಿ ಕೂಟ INDIA (ಇಂಡಿಯಾ) ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಕರೆ ನೀಡಿದ್ದಾರೆ. ಮುಂಬೈನಲ್ಲಿ ಐಎನ್‌ಡಿಐಎ (ಇಂಡಿಯಾ) ಒಕ್ಕೂಟದ ಉನ್ನತಮಟ್ಟದ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಅವರು, ಬಿಜೆಪಿ (BJP) ವಿರುದ್ಧ ಒಗ್ಗಟ್ಟಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.ಮೈತ್ರಿಕೂಟದ ಪಕ್ಷಗಳು 2024ರ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಸಾಧ್ಯವಾದಷ್ಟು ಒಟ್ಟಿಗೆ ಸ್ಪರ್ಧಿಸುವುದಾಗಿ ಹೇಳಿವೆ ಎಂದರಲ್ಲದೇ, […]

Advertisement

Wordpress Social Share Plugin powered by Ultimatelysocial