ರಾಜ್ಯಕ್ಕೆ ಚುನಾವಣ ಆಯೋಗದ ಹಿರಿಯ ಅಧಿಕಾರಿಗಳ ತಂಡ ಭೇಟಿ

 

ಬೆಂಗಳೂರು: ವಿಧಾನ ಸಭೆ ಚುನಾವಣೆಗೆ ಕೇಂದ್ರ ಚುನಾವಣ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಪ್ರಾರಂಭಿಸಿದ್ದು, ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಪೂರ್ವತಯಾರಿಗಳ ಪರಿಶೀಲನೆ ಗಾಗಿ ಕೇಂದ್ರ ಚುನಾವಣ ಆಯೋಗದ 3 ತಂಡಗಳು ರಾಜ್ಯ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಿವೆ.

ಜಿಲ್ಲಾ ಮಟ್ಟದಲ್ಲಿ ಕೈಗೊಂಡಿರುವ ಚುನಾವಣೆ ಸಿದ್ಧತೆ, ಮತದಾರರ ಪಟ್ಟಿ ಮತ್ತಿತರ ಪ್ರಕ್ರಿಯೆ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ಸಮಾಲೋಚಿಸಿ ಇವಿಎಂ ಮತ್ತು ವಿವಿಪ್ಯಾಟ್‌ಗಳ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದೆ.

ಈ ಪ್ರವಾಸದಲ್ಲಿ ಪ್ರಮುಖವಾಗಿ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಮತದಾನ ನಡೆದಿರುವ ಮತಗಟ್ಟೆಗಳನ್ನು ಗುರುತಿಸುವುದು, ಕಡಿಮೆ ಮತದಾನಕ್ಕೆ ಕಾರಣಗಳನ್ನು ಕಂಡು ಹಿಡಿದು ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯುವುದು, ಮತದಾನದ ಜಾಗೃತಿ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವುದು. ಹೊಸ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಹೆಚ್ಚಿನ ಯುವ ಮತದಾರರನ್ನು ಸೆಳೆಯುವ ಬಗ್ಗೆ ಚರ್ಚಿಸಲಾಯಿತು.

ಕೇಂದ್ರ ಚುನಾವಣ ಆಯೋಗದ ಉಪ ಮುಖ್ಯ ಆಯುಕ್ತರಾದ ಅಜಯ್‌ ಬಾಡು ಅವರ ನೇತೃತ್ವದ ತಂಡ ಯಾದಗಿರಿ ಜಿಲ್ಲೆಗೆ ಬೇಟಿ ನೀಡಿ ಕಲಬುರಗಿ ವಲಯದ ಜಿಲ್ಲಾಧಿಕಾರಿಗಳೊಂದಿಗೆ ಚುನಾವಣ ಪೂರ್ವ ತಯಾರಿ ಕುರಿತಂತೆ ಸಭೆ ನಡೆಸಿದರು. ಈ ತಂಡದ ಜತೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಮತ್ತು ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್‌ ಭಾಗವಹಿಸಿದ್ದರು.

ಆಯೋಗದ ನಿರ್ದೇಶಕರಾದ ಶುಭ್ರ ಸಕ್ಸೇನಾ ಹಾಗೂ ಕಾರ್ಯದರ್ಶಿ ಬಿ.ಸಿ ಪಾತ್ರ ನೇತೃತ್ವದ ತಂಡ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ತಂಡದ ಜತೆಗೆ ರಾಜ್ಯ ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್‌ ಕುಮಾರ್‌ ಭಾಗವಹಿಸಿದ್ದರು.

ಆಯೋಗದ ಸ್ವೀಪ್‌ ನಿರ್ದೇಶಕರಾದ ಸಂತೋಷ್‌ ಅಜೆ¾àರ ಅವರ ನೇತೃತ್ವದ ತಂಡ ಮತದಾರರ ಜಾಗೃತಿಯ ರಾಜ್ಯ ಸ್ವೀಪ್‌ ಕಾರ್ಯಕ್ರಮಗಳ ಪೂರ್ವತಯಾರಿ ಕುರಿತಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್‌ ನೋಡಲ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಸ್ವೀಪ್‌ ನೋಡೆಲ್‌ ಅಧಿಕಾರಿ ಪಿ.ಎಸ್‌ ವಸ್ತ್ರದ್‌ ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರಿ ವೈದ್ಯರಿಗೆ ಮಾನವೀಯತೆಯ ಪಾಠ ಮಾಡಿದ ಸಚಿವ ಮಾಧುಸ್ವಾಮಿ

Sun Feb 12 , 2023
ಸರ್ಕಾರಿ ವೈದ್ಯರಿಗೆ ಮಾನವೀಯತೆಯ ಪಾಠ ಮಾಡಿದ ಸಚಿವ ಮಾಧುಸ್ವಾಮಿ ಸಚಿವ ಮಾಧುಸ್ವಾಮಿ ನಿಷ್ಠುರ ಮಾತಿಗೆ ವೈದ್ಯರು ಶಾಕ್ ಸರ್ಕಾರಿ ವೈದ್ಯರ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಮುಖ್ಯ ಅಥಿತಿಯಾಗಿ ಭಾಗಿಯಾಗಿದ್ದ ಮಾಧುಸ್ವಾಮಿ. ತುಮಕೂರಿನ ಹೆಗ್ಗೆರೆ ಬಳಿಯ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ನಡೆಯುತ್ತಿರುವ ವೈದ್ಯೋತ್ಸವ. ಈ ವೇಳೆ ವೈದ್ಯರ ಮೇಲೆ ಸಾರ್ವಜನಿಕರಿಂದ ಆಗುತ್ತಿರುವ ಹಲ್ಲೆ ವಿರುದ್ದ ಕಠಿಣ ಕಾನೂನು ಬೇಕು ಎಂದು ಬೇಡಿಕೆ ಇಟ್ಟ ವೈದ್ಯರು. ವೈದ್ಯರ ಬೇಡಿಯನ್ನು ಮನ್ನಿಸುವ ಬದಲು ನಿಷ್ಠುರವಾಗಿ […]

Advertisement

Wordpress Social Share Plugin powered by Ultimatelysocial