ಮಾಂಡೌಸ್ ಸೈಕ್ಲೋನ್‌ ಪರಿಣಾಮ ಕೋಲಾರ, ಚಿಕ್ಕಬಳ್ಳಾಪುರ ಶಾಲಾ-ಕಾಲೇಜಿಗೆ ಒಂದು ದಿನ ರಜೆ!

 

ಚಿಕ್ಕಬಳ್ಳಾಪುರ,ಡಿಸೆಂಬರ್ 12: ಮ್ಯಾಂದೊಸ್‌ ಸೈಕ್ಲೋನ್‌ ಪರಿಣಾಮ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆ ಸೋಮವಾರ ಒಂದು ದಿನದ ಮಟ್ಟಿಗೆ ಶಾಲಾ – ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ತಿಳಿಸಿದ್ದಾರೆ.ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಮ್ಯಾಂದೊಸ್‌ ಚಂಡಮಾರುತದ ರೂಪ ತಳೆದಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಈ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೂ ಬೀರಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುತ್ತಿದೆ. ಈ ಮಳೆ ಇನ್ನೂ 3 ದಿನಗಳ ಕಾಲ ಮುಂದುವರೆಯಲಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು ಎಲ್ಲೋ ಅಲರ್ಟ್‌ ಘೋಷಣೆ ಮಾಡಿದೆ. ಅಲ್ಲದೇ ಜಿಲ್ಲೆಯಲ್ಲಿ ಶೀತಗಾಳಿಯೂ ಬೀಸುತ್ತಿರುವ ಹಿನ್ನೆಲೆ ಶಾಲಾ- ಕಾಲೇಜಿಗೆ ರಜೆ ನೀಡಲು ನಿರ್ಧರಿಸಲಾಗಿದೆ. ಕಳೆದ 2 ದಿನದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಕ್ಕಳು ಶಾಲೆಗೆ ಬರಲು ತೊಂದರೆಯಾಗಿದೆ. ಹೀಗಾಗಿ ಒಂದು ದಿನದ ಮಟ್ಟಿಗೆ ಶಾಲಾ – ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.ಇನ್ನೂ ಜಿಟಿಜಿಟಿ ಮಳೆ ಜೊತೆಗೆ ಶೀತಗಾಳಿಯೂ ಹೆಚ್ಚಾಗಿ ಬೀಸುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ಮಳೆಯಲ್ಲೆ ಶಾಲಾ-ಕಾಲೇಜಿಗೆ ಬರುವುದು ಕಷ್ಟ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಸೋಮವಾರ ಒಂದು ದಿನ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲು ತೀರ್ಮಾನಿಸಿದೆ.ಕೋಲಾರದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಇನ್ನು ಜಿಟಿಜಿಟಿ ಮಳೆ ಹಾಗೂ ಶೀತ ಗಾಳಿಯ ಹಿನ್ನೆಲೆ ಕೋಲಾರದಲ್ಲಿಯೂ ಶಾಲಾ ಮಕ್ಕಳಿಗೆ ಒಂದು ದಿನದ ರಜೆ ಘೋಷಿಸಲಾಗಿದೆ. ತಮಿಳುನಾಡು, ಮ್ಯಾಂದೊಸ್‌ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ.ಈಗಾಗಲೇ ಡಿಸೆಂಬರ್ 14 ರವರೆಗೆ ಮಳೆಯಾಗಲಿದ್ದು, ಭಾನುವಾರ ಇಡೀ ದಿನ ಸುರಿದ ಮಳೆ ಯಿಂದಾಗಿಯೇ ಜನರು ತತ್ತರಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಅಗತ್ಯವಿದ್ದರೆ ರಜೆ ನೀಡಬಹುದೆಂದು ಡಿಡಿಪಿಐ ಶಾಲೆಗಳ ಮುಖ್ಯಶಿಕ್ಷಕರಿಗೆ ತಿಳಿಸಿದ್ದರು.ಡಿಸೆಂಬರ್ 14 ರವರೆಗೂ ಮಳೆ ಸುರಿಯುವುದಾಗಿ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ. ಅಲ್ಲದೆ, ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದ್ದು, ಎಚ್ಚರಿಕೆ ಯಿಂದ ಇರಬೇಕಿದೆ ಎಂದು ಸೂಚಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ದೇವನಹಳ್ಳಿ ಬಳಿ ಡಿಸೆಂಬರ್ 13 ರಿಂದ ಜಿ20 ಶೃಂಗ ಸಭೆ ಹಿನ್ನೆಲೆ,

Mon Dec 12 , 2022
ಶೃಂಗ ಸಭೆ ಹಿನ್ನೆಲೆಯಲ್ಲಿ ರಸ್ತೆಗೆ ಡಾಂಬಾರು ಭಾಗ್ಯ.ಯೂರೋಪಿಯನ್ ಯುನಿಯನ್ 40 ದೇಶಗಳ ಗಣ್ಯರು ಭಾರಿಹಲವು ದೇಶಗಳ ಗಣ್ಯರ ಜಿ20 ಶೃಂಗಸಭೆ ರಾಜ್ಯದಲ್ಲಿ ನಡೆಯಲಿದೆ. ಅದಕ್ಕಾಗಿ ಎಲ್ಲ ಸಿದ್ದತೆಗಳು ಬೆಂಗಳೂರು ಹೊರವಲಯದಲ್ಲಿ ಜೋರಾಗಿ ನಡೆದಿದೆ. ಶೃಂಗಸಭೆ ನಡೆಯುವ ಹೋಟೆಲ್ ರಸ್ತೆಗೆ ಹೊಸ ಡಾಂಬರೀಕರಣ ಹಾಕಲಾಗ್ತಿದೆ. ಜಿ20 ಶೃಂಗಸಭೆಗೆ ಬಿಗಿ ಭದ್ರೆತೆಯನ್ನ ಒದಗಿಸಲು ಸಿದ್ದತೆಗಳು ನಡೆದಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ….ಜಿ20 ಶೃಂಗಸಭೆಗೆ ತೆರಳುವ ಮಾರ್ಗವನ್ನ ಮಳೆಯ ನಡುವೆ ಡಾಂಬರೀಕರಣ, […]

Advertisement

Wordpress Social Share Plugin powered by Ultimatelysocial