ಚಕ್ರವರ್ತಿಯನ್ನ ಬೈದ್ರೆ ಪಕ್ಷಕ್ಕೆ ಹಿನ್ನಡೆ: ಸದಾನಂದಗೌಡ್ರನ್ನ ಹಿಗ್ಗಾಮುಗ್ಗಾ ಜಾಡಿಸಿದ ಬಿಜೆಪಿ ನಾಯಕ

ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಒಂದು ಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂಬ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕ ಬಿಜೆಪಿ ಸಂಸದರ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ನೆರೆ ಪರಿಹಾರ ವಿಚಾರವಾಗಿ ಇತ್ತೀಚೆಗೆ ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದಿದ್ದ ಬಿಜೆಪಿ ಶಾಸಕ ಯತ್ನಾಳ್​ ಮತ್ತೆ ಕೇಂದ್ರದ ವಿರುದ್ಧ ಕಿಡಿಕಾರಿದ್ದು, ಚಿಂತಕ ಚಕ್ರವರ್ತಿ ಸೂಲಿಬೆಲೆ ಪರ ಬ್ಮಾಟಿಂಗ್ ಮಾಡಿದ್ದಾರೆ. ಹಾಗಾದ್ರೆ ರಾಜ್ಯದ ಸ್ವಪಕ್ಷದ ಸಂಸದರನ್ನ ತರಾಟೆಗೆ ತೆಗೆದುಕೊಂಡ ವೈಖರಿ ಈ ಕೆಳಗಿನಂತಿದೆ..

 ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತೆ ನೆರೆ ಪರಿಹಾರ ವಿಚಾರದಲ್ಲಿ ಮತ್ತೆ ಸ್ವಪಕ್ಷದ ರಾಜ

ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ….

ಇಂದು (ಗುರುವಾರ) ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಕೇಳುವುದರಲ್ಲಿ ತಪ್ಪೇನಿಲ್ಲ. ಚಕ್ರವರ್ತಿ ಮೋದಿ ಪ್ರಧಾನಿಯಾಗಲಿ ಎಂದು ತಪಸ್ಸು ಮಾಡಿದ ವ್ಯಕ್ತಿ. ನಿಮ್ಮ ವೈಫಲ್ಯಗಳನ್ನ ಅವರ ಮೇಲೆ ಯಾಕೆ ಹಾಕ್ತೀರಿ. ಅವರ ವಿರುದ್ಧ ಟೀಕೆ ಮಾಡುವ ನೈತಿಕತೆ ನಿಮಗೆ ಇಲ್ಲ ಎಂದು ಸ್ವಪಕ್ಷೀಯ ಸಂಸದರು, ಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

ಟ್ಯಾಟೂ ಅಭಿ​ಮಾ​ನಿಯ ಮೆಚ್ಚಿ ಅಪ್ಪಿದ ಕೊಹ್ಲಿ!

Thu Oct 3 , 2019
ಟ್ಯಾಟೂ ಪ್ರಿಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಯೊಬ್ಬನನ್ನ ಅಪ್ಪಿಕೊಳ್ಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರೇ ಅದರಲ್ಲೇನು ವಿಶೇಷ ಅಂತಿರಾ, ಈ ಸ್ಟೋರಿ ಓದಿ, ನಿಮಗೆ ತಿಳಿಯುತ್ತೆ. ಭಾರತ ಕ್ರಿಕೆಟ್‌ ತಂಡದ ನಾಯ​ಕ ವಿರಾಟ್‌ ಕೊಹ್ಲಿ ಯಾವುದೇ ಮೈದಾ​ನ​ದಲ್ಲಿ ಆಡು​ತ್ತಿ​ದ್ದರೂ ಅಭಿ​ಮಾ​ನಿ​ಗಳನ್ನು ಸೆಳೆ​ಯು​ತ್ತಾರೆ. ವಿಶೇಷ ಅಭಿ​ಮಾ​ನಿ​ಯನ್ನು ಮೊದಲ ಟೆಸ್ಟ್‌ ಆರಂಭಕ್ಕೂ ಮುನ್ನ ಸುದ್ದಿ​ಗೋಷ್ಠಿಯಲ್ಲಿ ವಿರಾಟ್‌ ಕೊಹ್ಲಿ ಭೇಟಿ​ಯಾ​ಗಿದ್ದು, ತಾವಾ​ಗಿಯೇ ಅಭಿ​ಮಾ​ನಿ​ಯನ್ನು ಅಪ್ಪಿ​ಕೊಂಡರು. Please follow and like […]

Advertisement

Wordpress Social Share Plugin powered by Ultimatelysocial