11 ದಿನದ ದಾಳಿಯಿಂದ ಚೇತರಿಸಿಕೊಳ್ಳೋಕೆ ಉಕ್ರೇನ್​ಗೆ 4 ವರ್ಷ ಬೇಕು, ಆಗಿರೋ ನಷ್ಟ ಎಷ್ಟು ಗೊತ್ತಾ?

ಉಕ್ರೇನ್ (Ukraine) ಮೇಲೆ ರಷ್ಯಾದ (Russia) ಆಕ್ರಮಣವು 11ನೇ ದಿನಕ್ಕೆ ಪ್ರವೇಶಿಸಿರುವ ನಡುವೆಯೇ ಶನಿವಾರದಂದು ರಷ್ಯಾ ಕದನ ವಿರಾಮ ಘೋಷಿಸಿತ್ತು. ಮಾನವೀಯ ಕಾರಿಡಾರ್‌ಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ರಷ್ಯಾ ಹೇಳಿತ್ತು. ಕದನ ವಿರಾಮ ಘೋಷಿಸುವ ಮುನ್ನ ಉಕ್ರೇನ್ (Ukraine) ನೆಲ ಸಂಪೂರ್ಣ ಯುದ್ಧದ ಭೀಕರತೆಗೆ ಸಾಕ್ಷಿಯಾಗಿದೆ.

 ರಷ್ಯಾ ದಾಳಿಗೆ ಸಂಪೂರ್ಣ ಛಿದ್ರ ಆಗಿರುವ ಉಕ್ರೇನ್ ಮಿಲಿಯನ್‌ಗಟ್ಟಲೇ ಆಸ್ತಿ ಹಾನಿಯನ್ನು (Property) ಅನುಭವಿಸಿದೆ. ದೊಡ್ಡ ಕಟ್ಟಡಗಳು, ವಿಶ್ವವಿದ್ಯಾಲಯಗಳು, ಪರಮಾಣು ಸ್ಥಾವರ (Nuclear Plant) ಸೇರಿ ಉಕ್ರೇನ್‌ನ ಮುಖ್ಯ ನಗರಗಳು ಹಾನಿಗೊಂಡಿವೆ. ರಷ್ಯಾದ ಆಕ್ರಮಣಕಾರಿ ದಾಳಿಗೆ ಉಕ್ರೇನ್ ಸಂಪೂರ್ಣ ನೆಲಕಚ್ಚಿದೆ. ಯುದ್ಧದ ಕರಾಳತೆಯಿಂದ ಉಕ್ರೇನ್ ಸಂಪೂರ್ಣ ಚೇತರಿಸಿಕೊಳ್ಳಲು ವರ್ಷಗಳೇ ಬೇಕು ಎನ್ನುತ್ತಾರೆ ತಜ್ಞರು.
ರಷ್ಯಾ ದೇಶ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ದಿನದಿಂದ ಉಕ್ರೇನ್ ಸುಮಾರು 10 ಬಿಲಿಯನ್‌ ಡಾಲರ್‌ನಷ್ಟು ಮೂಲಸೌಕರ್ಯದ ಹಾನಿಯನ್ನು ಅನುಭವಿಸಿದೆ ಎಂದು ಉಕ್ರೇನ್‌ನ ಮೂಲಸೌಕರ್ಯ ಸಚಿವ ಒಲೆಕ್ಸಾಂಡರ್ ಕುಬ್ರಕೋವ್ ಹೇಳಿದ್ದಾರೆ.

ದುರಸ್ತಿ ಕಾರ್ಯ ಸುಲಭವಿಲ್ಲ

ಈ ಅಂಕಿಅಂಶವು ಭಾನುವಾರದವರೆಗೆ ಮಾತ್ರ ಪರಿಗಣಿಸಲಾಗಿದೆ. ಹೆಚ್ಚಿನ (ಹಾನಿಗೊಳಗಾದ) ರಚನೆಗಳನ್ನು ಒಂದು ವರ್ಷದಲ್ಲಿ ದುರಸ್ಥಿ ಮಾಡಲಾಗುತ್ತದೆ. ದುರಸ್ಥಿ ಕಾರ್ಯ ತುಂಬಾನೆ ಕಷ್ಟಕರವಾಗಿದೆ ಎಂದು ಸಚಿವ ಒಲೆಕ್ಸಾಂಡರ್ ಕುಬ್ರಕೋವ್ ದೂರದರ್ಶನದಲ್ಲಿ ಮಾತನಾಡುತ್ತಾ ಹೇಳಿದರು.

40,000 ಜನರನ್ನು ಸ್ಥಳಾಂತರ

ಭಾನುವಾರದಂದು ಪೂರ್ವ ನಗರವಾದ ಖಾರ್ಕಿವ್‌ನಿಂದ 40,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಕುಬ್ರಕೋವ್ ಹೇಳಿದ್ದಾರೆ. ಆದರೆ ನಾಗರಿಕರು ಇತರ ನಗರಗಳನ್ನು ತೊರೆಯಲು ಅವಕಾಶ ನೀಡುವಂತೆ ಉಕ್ರೇನ್ ರಷ್ಯಾಕ್ಕೆ ಮನವಿ ಮಾಡಿದೆ ಮತ್ತು ಆಂತರಿಕ ಸಚಿವಾಲಯದ ಅಧಿಕಾರಿ ವ್ಯಾಡಿಮ್ ಡೆನಿಸೆಂಕೊ ಪ್ರಕಾರ ರಾಜಧಾನಿ ಕೀವ್‌ನ ಹೊರವಲಯದಿಂದ ಇನ್ನೂ 4,000 ನಾಗರಿಕರನ್ನು ಸ್ಥಳಾಂತರಿಸಬೇಕಾಗಿದೆ. ಕಾರಿಡಾರ್‌ಗಳನ್ನು ತಡೆಯಲು ರಷ್ಯಾ ಎಲ್ಲವನ್ನು ಮಾಡುತ್ತಿದೆ” ಎಂದೂ ಅವರು ಹೇಳಿದರು.

ರಷ್ಯಾ ಯುದ್ಧದಿಂದಾಗಿ ಉಕ್ರೇನ್‌ನಲ್ಲಿ ಏನೆಲ್ಲಾ ಹಾನಿಯಾಗಿದೆ?

• ಮಾರ್ಚ್ 3, 2022ರಂದು ಚೆರ್ನಿಹಿವ್‌ನಲ್ಲಿ ಶೆಲ್ ದಾಳಿಯಿಂದ ಅಪಾರ್ಟ್ಮೆಂಟ್ ಕಟ್ಟಡವು ಹಾನಿಗೊಂಡಿದೆ.

• ಸ್ಥಳೀಯ ಅಧಿಕಾರಿಗಳ ಪ್ರಕಾರ, ಕೀವ್ ಪ್ರದೇಶದಲ್ಲಿ ಶೆಲ್ ದಾಳಿಯ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿತ್ತು.

• ಉಕ್ರೇನ್ ಮೇಲೆ ರಷ್ಯಾ ಯುದ್ಧ ಹಿನ್ನೆಲೆಯಲ್ಲಿ ಕೀವ್‌ನಲ್ಲಿ ರಷ್ಯಾದ ಶೆಲ್ ದಾಳಿಯಿಂದ ಸೇತುವೆ ಕುಸಿತವಾಗಿದೆ. ಕೀವ್‌ನ ಬುಚಾದಲ್ಲಿ ಸಂಪೂರ್ಣವಾಗಿ ಸೇತುವೆ ಕುಸಿದಿದೆ.

• ಉಕ್ರೇನ್ ಮೇಲೆ ರಷ್ಯಾ ಯುದ್ಧದ ಪರಿಣಾಮ ಖಾರ್ಕಿವ್‌ನಲ್ಲಿ ಟೆಲಿವಿಷನ್ ಟವರ್ ಮೇಲೆ ದಾಳಿ ಆಗಿದ್ದು. ಪರಿಣಾಮ ರಷ್ಯಾದ ಏರ್‌ಸ್ಟ್ರೈಕ್‌ನಲ್ಲಿ7 ನಾಗರಿಕರು ಮೃತಪಟ್ಟಿದ್ದಾರೆ. ಇಡೀ ಖಾರ್ಕಿವ್ ನಗರ ದಟ್ಟ ಹೊಗೆಯಿಂದ ಆವರಿಸಿತ್ತು, ಹಲವು ಕಟ್ಟಡ ಸೇರಿ ಅನೇಕ ಸಾರ್ವಜನಿಕ ಆಸ್ತಿ ಹಾನಿಯಾಗಿದೆ.

• ರಷ್ಯಾ ಸೇನೆ ಖಾರ್ಕಿವ್‌ನಲ್ಲಿ ಕ್ಷಿಪಣಿ ದಾಳಿ ಮಾಡಿದ್ದು, ಈ ದಾಳಿಗೆ ಖಾರ್ಕಿವ್ ನಗರದ ಆಸ್ಪತ್ರೆ ಕಟ್ಟಡ ನೆಲಸಮವಾಗಿದೆ. ಹಲವರು ಮೃತಪಟ್ಟು, ನೂರಾರು ಜನ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿತ್ತು.

• ಉಕ್ರೇನ್‌ನ 395 ಯುದ್ಧ ಟ್ಯಾಂಕರ್ ಧ್ವಂಸಗೊಳಿಸಿದ್ದಾಗಿ ರಷ್ಯಾ ಹೇಳಿಕೊಂಡಿತ್ತು.

• ಖೆರ್ಸನ್ ನಗರವನ್ನು ಸುತ್ತುವರಿದಿದ್ದ ರಷ್ಯಾ ಸೇನೆ, ಖಾರ್ಕಿವ್ ನಗರದಲ್ಲಿ ಕ್ಷಿಪಣಿ ದಾಳಿ ಮಾಡಿತ್ತು ಮತ್ತು ಇದರ ಪರಿಣಾಮವಾಗಿ 6 ಜನರು ಗಾಯಗೊಂಡಿದ್ದರು.

• ಉಕ್ರೇನ್ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದ ರಷ್ಯಾ ಪಡೆಗಳು ಒಖ್ತಿರ್ಕಾ, ಸುಮ್ಸ್ಕಾ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆಗೆ ಮೂರು ವ್ಯಾಕ್ಯೂಮ್ ಬಾಂಬ್‌ಗಳನ್ನು ಬಳಸಿದೆ ಎಂದು ಉಕ್ರೇನ್ ಸಚಿವರು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು.

• ಉಕ್ರೇನ್ ಮೇಲೆ ರಷ್ಯಾ 6ನೇ ದಿನದಂದು 70 ಉಕ್ರೇನ್ ಯೋಧರು ಮೃತಪಟ್ಟಿದ್ದರು. ಕೀವ್, ಖಾರ್ಕಿವ್ ನಡುವಿನ ಓಖ್ತಿರ್ಕಾದಲ್ಲಿರುವ ಸೇನಾ ನೆಲೆ ಮೇಲೆ ರಷ್ಯಾ ಭೀಕರ ದಾಳಿ ನಡೆಸಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಂಕಾ ವಿರುದ್ಧದ ಎರಡನೇ ಟೆಸ್ಟ್‌ಗೆ ತಂಡ ಸೇರಿದ ಆಲ್ ರೌಂಡರ್ ಅಕ್ಷರ್ ಪಟೇಲ್

Tue Mar 8 , 2022
  ಬೆಂಗಳೂರು: ಗಾಯದ ಕಾರಣದಿಂದ ತಂಡದಿಂದ ಹೊರಬಿದ್ದಿದ್ದ ಆಲ್ ರೌಂಡರ್ ಅಕ್ಷರ್ ಪಟೇಲ್ ಇದೀಗ ಮತ್ತೆ ತಂಡ ಕೂಡಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಅಕ್ಷರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಅಕ್ಷರ್ ಪಟೇಲ್ ಅವರನ್ನು ಮಾರ್ಚ್ 12-16 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ಗೆ ಭಾರತ ತಂಡಕ್ಕೆ ಸೇರಿಸಿದೆ. ಅವರು ತಮ್ಮ ರಿಹ್ಯಾಬಿಟೇಶನ್ ಪೂರ್ಣಗೊಳಿಸಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡದಿಂದ ಅನುಮತಿ ಪಡೆದಿದ್ದಾರೆ” […]

Advertisement

Wordpress Social Share Plugin powered by Ultimatelysocial