ಕನ್ನಡಕ ಹಾಕಲು ಬಯಸದವರು ಕಾಂಟಾಕ್ಟ್ ಲೆನ್ಸ್ ಧರಿಸುತ್ತಾರೆ.

ನ್ನಡಕ ಹಾಕಲು ಬಯಸದವರು ಕಾಂಟಾಕ್ಟ್ ಲೆನ್ಸ್ ಧರಿಸುತ್ತಾರೆ. ಆದರೆ ಕಾಂಟಾಕ್ಟ್ ಲೆನ್ಸ್ ಧರಿಸಿದಾಗ ಅತಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅವುಗಳನ್ನು ಮೇಂಟೇನ್ ಮಾಡುವುದು ಕೂಡ ಅತ್ಯಗತ್ಯ. ಪ್ರತಿ ರಾತ್ರಿ ಕಾಂಟಾಕ್ಟ್ ಲೆನ್ಸ್ ತೆಗೆದು ನಿಗದಿಪಡಿಸಿದ ಸಲ್ಯೂಷನ್ ತುಂಬಿದ ಡಬ್ಬಿಯಲ್ಲಿ ಹಾಕಬೇಕಾಗುತ್ತದೆ.

ಒಂದೊಮ್ಮೆ ರಾತ್ರಿ ಕಾಂಟಾಕ್ಟ್ ಲೆನ್ಸ್ ತೆಗೆಯಲು ಮರೆತು ಹಾಗೇ ಮಲಗಿದರೆ ಬೆಳಗ್ಗೆ ಕಣ್ಣು ಕೆಂಪಗಾಗಿರುತ್ತದೆ. ಜೊತೆಗೆ ಇತರೆ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು. ಹೀಗೆ ಕಾಂಟಾಕ್ಟ್ ಲೆನ್ಸ್ ತೆಗೆಯಲು ಮರೆತು ಮಲಗಿದ ಯುವಕನೊಬ್ಬ ಈಗ ಕಣ್ಣನ್ನೇ ಕಳೆದುಕೊಂಡಿದ್ದಾನೆ. ಇಂತಹದೊಂದು ಘಟನೆ ಅಮೆರಿಕದಲ್ಲಿ ನಡೆದಿದೆ.

21 ವರ್ಷದ ಮೈಕ್ ಪಾರ್ಟ್ ಟೈಮ್ ಕೆಲಸವಾಗಿ ಮಕ್ಕಳನ್ನು ನೋಡಿಕೊಳ್ಳುವುದನ್ನು ಮಾಡುತ್ತಿದ್ದ. ಈಗ ಹೀಗೆ ಒಮ್ಮೆ ಒತ್ತಡದಲ್ಲಿ ಕಾಂಟ್ಯಾಕ್ಟ್ ಲೆನ್ಸ್ ತೆಗೆಯುವುದನ್ನು ಮರೆತು ಹಾಗೆಯೇ ಮಲಗಿದ್ದಾನೆ. ಬೆಳಗ್ಗೆ ಎದ್ದಾಗ ಕಣ್ಣು ಕೆಂಪಗಾಗಿದೆ. ಅದರ ಜೊತೆಗೆ ಆತನಿಗೆ ಕಣ್ಣು ಮಂಜಾದಂತೆ ಅನಿಸಿದೆ.

ದಿನ ಕಳೆದಂತೆ ಮೈಕ್, ಯಾಕೋ ಸರಿಯಾಗುತ್ತಿಲ್ಲ ಎಂದು ಕಣ್ಣಿನ ವೈದ್ಯರ ಬಳಿ ತಪಾಸಣೆಗೆ ತೆರಳಿದಾಗ ಬೆಚ್ಚಿ ಬೀಳಿಸುವ ಸಂಗತಿ ಬಹಿರಂಗವಾಗಿದೆ. ಮಾಂಸ ಭಕ್ಷಕ ಪರಾವಲಂಬಿ ಜೀವಿ ಆತನ ಒಂದು ಕಣ್ಣನ್ನೇ ತಿಂದಿರುವುದು ತಿಳಿದುಬಂದಿದೆ. ಇದೀಗ ಕಣ್ಣು ಟ್ರಾನ್ಸ್ ಪ್ಲಾಂಟ್ ಮಾಡಬೇಕೆಂದು ವೈದ್ಯರು ಹೇಳಿದ್ದು ಶೇಕಡ 50 ದೃಷ್ಟಿ ಬರಬಹುದು ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೀನ ಉದ್ಯಮಿ ಬಾವೋ ಫಾನ್‌ ನಾಪತ್ತೆ

Sat Feb 18 , 2023
ಬೀಜಿಂಗ್‌: ಚೀನದ ಪ್ರಮುಖ ಉದ್ಯಮಿ ಮತ್ತು ಚೀನ ರೆನೇಸಾನ್ಸ್‌ ಹೋಲ್ಡಿಂಗ್ಸ್‌ನ ಸಿಇಒ ಬಾವೋ ಫಾನ್‌ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಅವರು ಎಷ್ಟು ದಿನಗಳಿಂದ ಸಂಪರ್ಕಕ್ಕೆ ಲಭ್ಯರಾಗಿಲ್ಲ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಅವರ ಕಚೇರಿಯ ಅಧಿಕಾರಿಗಳ ಪ್ರಕಾರ 2 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದರಿಂದಾಗಿ ಅವರ ಕಂಪನಿಯ ಷೇರುಗಳು ಶುಕ್ರವಾರ ಕುಸಿದಿವೆ. ದೊಡ್ಡ ಉದ್ದಿಮೆಗಳು, ಟೆಕ್‌ ಕಂಪನಿಗಳ ವಿರುದ್ಧ ಚೀನಾ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದ ಬಳಿಕ […]

Advertisement

Wordpress Social Share Plugin powered by Ultimatelysocial