ಮಂಗಳೂರು: ತ್ರಿಕೋನ ಪ್ರೇಮ ಯುವಕನ ದುರಂತ ಅಂತ್ಯ

ಮಂಗಳೂರು: ಯುವಕನೊಬ್ಬ ಇಬ್ಬರು ಯುವತಿಯರನ್ನು ಪ್ರೀತಿಸಿ ಸೋಮೇಶ್ವರ ಬೀಚ್‌ನಲ್ಲಿ ಮಾತುಕತೆ ನಡೆಸಲು ಮುಂದಾಗಿ ದುರಂತ ಅಂತ್ಯವಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ (28) ಮೃತಪಟ್ಟ ಯುವಕ, ಕೋಟೆಕಾರು ಪಾನೀರು ನಿವಾಸಿ ಅಶ್ವಿತ ಫೆರಾವೊ(22) ಆತ್ಮಹತ್ಯೆಗೆ ಯತ್ನಿಸಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ.ಲಾಯ್ಡ್ ಡಿಸೋಜ ಮತ್ತು ಅಶ್ವಿತ ಅವರು ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ಲಾಯ್ಡ್ ಗೆ ತೊಕ್ಕೊಟ್ಟು ಚೆಂಬುಗುಡ್ಡೆಯ ಇನ್ನೊಬ್ಬ ಕ್ರೈಸ್ತ ಯುವತಿಯ ಜೊತೆ ಸಂಪರ್ಕ ಆಗಿದ್ದು ಪ್ರೀತಿ – ಪ್ರೇಮ ಅಂಕುರಿಸಿತ್ತು. ಈ ವಿಚಾರ ತಿಳಿದ ಮೊದಲ ಪ್ರೇಯಸಿ ಅಶ್ವಿತಾ, ಲಾಯ್ಡ್ ಬಳಿ ಆಕ್ಷೇಪ ತೆಗೆದಿದ್ದಳು.ಈ ಬಗ್ಗೆ ಮಾತುಕತೆ ನಡೆಸಲೆಂದು ಯುವಕ ಮತ್ತು ಇಬ್ಬರು ಯುವತಿಯರು ಸೋಮೇಶ್ವರ ಕಡಲ ಕಿನಾರೆಗೆ ತೆರಳಿದ್ದರು. ಈ ವೇಳೆ, ಲಾಯ್ಡ್ ಮಾತಿನಿಂದ ಬೇಸರಗೊಂಡ ಅಶ್ವಿತಾ ಏಕಾಏಕಿ ರುದ್ರಪಾದೆಯಿಂದ ಸಮುದ್ರಕ್ಕೆ ಜಿಗಿದಿದ್ದಾಳೆ. ಪ್ರೇಯಸಿ ಸಮುದ್ರಕ್ಕೆ ಹಾರಿದ್ದನ್ನು ನೋಡಿ ಪ್ರಿಯಕರ ಲಾಯ್ಡ್ ಆಕೆಯ ರಕ್ಷಣೆಗಾಗಿ ನೀರಿಗೆ ಹಾರಿದ್ದಾನೆ. ಇದೇ ವೇಳೆ, ಕಾವಲು ಪಡೆಯ ಸಿಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ಅಶ್ವಿತಾ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಪ್ರಿಯತಮೆಯ ರಕ್ಷಣೆಗೆ ಹೋಗಿದ್ದ ಲಾಯ್ಡ್ ಸಮುದ್ರಪಾಲಾಗಿ ಅಸುನೀಗಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶವನ್ನು ತೊರೆಯುತ್ತಿರುವ ಶ್ರೀಮಂತ ಭಾರತೀಯರು;

Sat Jan 29 , 2022
ಇತರ ದೇಶಗಳಿಗೆ ಶ್ರೀಮಂತ ಭಾರತೀಯರ ಹರಿವನ್ನು ತಡೆಯುವ ಉದ್ದೇಶದಿಂದ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ತಮ್ಮ ರೆಸಿಡೆನ್ಸಿ ಸ್ಥಿತಿಯನ್ನು ನಿರ್ಧರಿಸಲು ಮತ್ತು ಅವರ ಜಾಗತಿಕ ಆದಾಯವನ್ನು ದೇಶೀಯವಾಗಿ ತೆರಿಗೆ ವಿಧಿಸಲು ಕಟ್-ಆಫ್ ದಿನಗಳನ್ನು ಹೆಚ್ಚಿಸಲು ಅವರು ಸರ್ಕಾರವನ್ನು ನೋಡಬಹುದು. ಅವರ ನಿವಾಸ ಸ್ಥಿತಿಯನ್ನು ನಿರ್ಧರಿಸಲು ಕಟ್-ಆಫ್ ಅನ್ನು 183 ದಿನಗಳ ಹಿಂದಿನಿಂದ 120 ದಿನಗಳವರೆಗೆ ಕಡಿಮೆ ಮಾಡಲಾಗಿದೆ. ಅನೇಕ ಶ್ರೀಮಂತ ಭಾರತೀಯರು ಬೇರೆಡೆ ಪೌರತ್ವವನ್ನು ತೆಗೆದುಕೊಳ್ಳುತ್ತಾರೆ ಮತ್ತು ಭಾರತದಲ್ಲಿ ಅವರು ಕೆಮ್ಮುವ […]

Advertisement

Wordpress Social Share Plugin powered by Ultimatelysocial