‘ಶಿಕ್ಷಕರ ಹುದ್ದೆ’ ಇನ್ನೊಂದು ವಾರದಲ್ಲಿ ‘15,000 ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ’ ಪ್ರಕಟ

ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8 ತರಗತಿ) ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ( Karnataka Teacher Recruitment 2023 ) ಇನ್ನೊಂದು ವಾರದಲ್ಲಿ ಪ್ರಕಟಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ( Minister BC Nagesh ) ತಿಳಿಸಿದರು.

ಇಲಾಖೆ ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿ ಕೆಲವು ವಿವಾಹಿತ ಮಹಿಳಾ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಭ್ಯರ್ಥಿಗಳ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ವಿವಾಹಿತ ಮಹಿಳೆಯರು ಸಲ್ಲಿಸಿರುವ ತಂದೆಯ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಪರಿಗಣಿಸಿ ನೇಮಕಾತಿ ಪ್ರಕ್ರಿಯೆ ಮುಂದುವರೆಸುವಂತೆ ಆದೇಶದಲ್ಲಿ ತಿಳಿಸಿತ್ತು.

ಈ ಕುರಿತು ಮುಖ್ಯ ಕಾರ್ಯದರ್ಶಿಯವರು, ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ತಾತ್ಕಾಲಿಕ ಆಯ್ಕೆ ಪಟ್ಟಿ ಪರಿಷ್ಕರಿಸಲು ತೀರ್ಮಾನಿಸಲಾಗಿತ್ತು. ಮುಂದಿನ ಶೈಕ್ಷಣಿಕ ವರ್ಷದ ಆರಂಭದ ವೇಳೆಗೆ ಹೊಸ ಶಿಕ್ಷಕರ ಸೇವೆಯನ್ನು ಪಡೆದುಕೊಳ್ಳಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುರೇಶ್ ಹೆಬ್ಳೀಕರ್ ಚಿತ್ರರಂಗದಲ್ಲಿನ ಸದ್ದುಗದ್ದಲವಿಲ್ಲದ ಒಬ್ಬ ಸೂಪರ್ ಸ್ಟಾರ್.

Wed Feb 22 , 2023
ಸುರೇಶ್ ಹೆಬ್ಳೀಕರ್ ಯಾವಾಗಲೂ ಸುದ್ಧಿ ಮಾಡುವ ಚಿತ್ರರಂಗದಲ್ಲಿನ ಸದ್ದುಗದ್ದಲವಿಲ್ಲದ ಒಬ್ಬ ಸೂಪರ್ ಸ್ಟಾರ್. ಚಿತ್ರರಂಗದಲ್ಲಿ ಅವರೊಬ್ಬ ಯಶಸ್ವೀ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಪರಿಸರ ಸಂರಕ್ಷಣೆಯಲ್ಲಿ ನಿಷ್ಠೆಯ ಕಾರ್ಯಕರ್ತ.ಸುರೇಶ್ ಹೆಬ್ಳೀಕರ್ 1948ರ ಫೆಬ್ರವರಿ 22ರಂದು ಜನಿಸಿದರು. ಧಾರವಾಡದ ಪ್ರೆಸೆಂಟೇಷನ್ ಕಾನ್ವೆಂಟ್, ಬಾಸೆಲ್ ಮಿಷನ್ ಶಾಲೆಗಳಲ್ಲಿ ಓದಿ, ಕರ್ನಾಟಕ ಕಾಲೇಜಿನಲ್ಲಿ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಗಳಿಸಿದರು.ಸುರೇಶ್ ಹೆಬ್ಳೀಕರ್ ಸುರದ್ರೂಪಿ ನಾಯಕನಟರಾಗಿ ಕಂಗೊಳಿಸಿದ ಸರಳ ಸುಂದರ ಚಿತ್ರ ‘ಅಪರಿಚಿತ’ […]

Advertisement

Wordpress Social Share Plugin powered by Ultimatelysocial