ಸರ್ಕಾರಕ್ಕೆ ಸೇರಿದ ನಲವತ್ತು ಹೆಕ್ಟೇರ್ ಕೆರೆ ಆಕ್ರಮಣ

ರಾಯಚೂರಿನ ಕವಿತಾಳ ಪಟ್ಟಣದ  ಹೊರಭಾಗದಲ್ಲಿರುವ ನಲವತ್ತು ಹೆಕ್ಟೇರ್ ಕೆರೆಯು ಸರ್ಕಾರಕ್ಕೆ ಸೇರಿದ್ದು ಆದರೆ ಇದನ್ನು ಪಟ್ಟಣದ ಕೆಲವು ಭೂ ಮಾಲೀಕರು ಆಕ್ರಮಿಸಿಕೊಂಡು ಬಹುದಿನಗಳಿಂದ ತಮ್ಮ ಹೆಸರಿಗೆ ಪಟ್ಟ, ಪಹಣಿ ಪತ್ರಿಕೆ ಮಾಡಿಸಿಕೊಂಡಿರುತ್ತಾರೆ. ಸಣ್ಣ ನೀರಾವರಿ ಇಲಾಖೆ ಇದು ತಮಗೆ ಸೇರಿದ್ದು ಎಂದು ಇಲ್ಲಿ ಮೀನು ಸಾಗಾಣಿಕೆಗಾಗಿ ಪ್ರತಿವರ್ಷ ಹರಾಜನ್ನು ನಡೆಸುತ್ತಾ ಬರುತ್ತಿದೆ  ಕೆರೆಯು ಸರ್ಕಾರದ್ದೋ ಅಥವಾ ಖಾಸಗಿಯದ್ದೋ  ಎಂದು ಸ್ಪಷ್ಟಪಡಿಸಬೇಕು ಹಾಗೂ ಸುಮಾರು 84 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಕೆರೆಯ ಕಾಮಗಾರಿಯು ಕಳಪೆ ಮಟ್ಟದಿಂದ ನಡೆಯುತ್ತಿದೆ. ಈ ಕಳಪೆ ಕಾಮಗಾರಿಗೆ ಮುಂದಾದ ಗುತ್ತಿಗೆದಾರರ ಮತ್ತು ಸಹಕಾರ ನೀಡುತ್ತಿರುವ ಸಂಬಂಧಿಸಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಳೆದ ಕೆಲವು ದಿನಗಳ ಹಿಂದೆ ಕವಿತಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಿವೈಎಫ್ಐ ಮತ್ತು ಕವಿತಾಳ ನವ ನಿರ್ಮಾಣ ವೇದಿಕೆ ವತಿಯಿಂದ ಒತ್ತಾಯ ಮಾಡಿದೆ. ಕಳೆದ ವಾರ ಸಿರವಾರ ತಹಶಿಲ್ದಾರರು ಭೇಟಿ ನೀಡಿ ಸ್ಥಳ ಪರಿಶೀಲನೆ ನೆಡಸಿ ಕ್ರಮದ ಭರವಸೆ ನೀಡಿದ್ದರು. ನಂತರ ಎಇಇ ಇಲಾಖೆಯ ವಿನೋದ್ ಕುಮಾರ್ ಗುಪ್ತಾ ರವರು  ಕೆರೆಗೆ ಭೇಟಿ ನೀಡಿ ಕೆರೆಯ ಒಟ್ಟಾರೆ ಸ್ಥಳ ಮತ್ತು ಕಾಮಗಾರಿ ಯನ್ನು ಪರಿಶೀಲಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಉಮಾಭಾರತಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಿಂದ ದೂರ

Mon Aug 3 , 2020
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದ ಮಧ್ಯ ಪ್ರದೇಶ ಮಾಜಿ ಸಿಎಂ ಉಮಾಭಾರತಿ ಅವರು ಇದೀಗ ಶಿಲಾನ್ಯಾಸ ಕಾರ್ಯಕ್ರಮದಿಂದ ದೂರ ಉಳಿಯುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು.. ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಉಮಾ ಭಾರತಿ ಅವರಿಗೆ ಆಹ್ವಾನವಿದೆ. ಆದರೂ ತಾವು ಕಾರ್ಯಕ್ರಮದಿಂದ ದೂರು ಉಳಿಯಲು ನಿರ್ಧರಿಸಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿದ್ಯುಕ್ತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಇಂತಹ ಪ್ರಮುಖ ಕಾರ್ಯಕ್ರಮದಿಂದಲೇ ಉಮಾಭಾರತಿ ದೂರ ಉಳಿಯಲು […]

Advertisement

Wordpress Social Share Plugin powered by Ultimatelysocial