ಸುಧಾಕರ್ ಹೆಂಡತಿ,ಮಗಳಿಗೆ ಕೊರೊನಾ

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿನ್ನೆ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಮನೆಯ ಅಡುಗೆ ಕೆಲಸದವನಿಗೆ ಕೊರೋನಾ ತಗುಲಿತ್ತು. ಬಳಿಕ ಅವರ ೮೨ ವರ್ಷದ ತಂದೆಗೂ ಕೊರೊನಾ ಇರುವುದು ದೃಢಪಟ್ಟಿತ್ತು. ಈಗ ಸುಧಾಕರ್ ಅವರ ಹೆಂಡತಿ ಮತ್ತು ಮಗಳಿಗೂ ಕೊರೋನಾ ತಗುಲಿರುವುದು ಖಚಿತವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಹೆಂಡತಿ ಹಾಗೂ ಮಗಳಿಗೆ ಕೊರೊನಾ ಇರುವುದನ್ನು ದೃಢಪಡಿಸಿದ್ದಾರೆ. ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ನನ್ನ ಪತ್ನಿ ಹಾಗು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅವರಿಬ್ಬರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕೊರೋನಾ ನೆಗೆಟಿವ್ ಬಂದಿದೆ. ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥಿಸಿದ, ಶುಭಕೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವೈಲ್ಡ್ ಕ್ರಾಫ್ಟ್ ಕಂಪನಿಯಿAದ ಮಾಸ್ಕ್ ವಿತರಣೆ

Tue Jun 23 , 2020
ವೈಲ್ಡ್ ಕ್ರಾಫ್ಟ್ ಕಂಪನಿಯು ಕೊರೊನಾದ ವಿರುದ್ಧ ಹೋರಾಟ ಮಾಡುತ್ತಿರುವ ಪೊಲೀಸರಿಗೆ ಇಂದು ವೈಲ್ಡ್ ಕ್ರಾಫ್ಟ್ ತಯಾರಿಕೆಯ ಮಾಸ್ಕ್ ನ್ನು ನೀಡಿದೆ. 66 ಸಾವಿರ ಮಾಸ್ಕ್ ಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಸ್ತಾಂತರ ಮಾಡಲಾಗಿದ್ದು, ಪೊಲೀಸ್ ಸಿಬ್ಬಂದಿಗೆ ತಲಾ ಮೂರು ಮಾಸ್ಕ್ ಗಳನ್ನು ನೀಡಲಾಗಿದೆ. ಇನ್ನೂ ವೈಲ್ಡ್ ಕ್ರಾಫ್ಟ್ ಕಂಪನಿ ನೀಡಿದ್ದ ಮಾಸ್ಕ್ ಗಳನ್ನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರವರು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ರವರಿಗೆ […]

Advertisement

Wordpress Social Share Plugin powered by Ultimatelysocial