ಗಂಡನಿಗೆ 1.5 ಕೋಟಿ ರೂ. ಸಂಬಳ ಕೊಡುವ ಪತ್ನಿ.

ಭಾರತದಿಂದ ನಾರ್ವೆಗೆ 2002ರಲ್ಲಿ ವಲಸೆ ಹೋಗಿದ್ದ ಪೂನಮ್ ಗುಪ್ತ ತನ್ನದೇ ಆದ ಉದ್ಯಮ ಆರಂಭಿಸಿ ಯಶಸ್ಸು ಕಂಡಿದ್ದು ಮಾತ್ರವಲ್ಲ, ಇಂಗ್ಲೆಂಡ್ ನ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಅನಿವಾಸಿ ಭಾರತೀಯರಾಗಿರುವ ಪೂನಮ್ ಗುಪ್ತ ಅವರ ಆಸ್ತಿ ಸುಮಾರು 1000 ಕೋಟಿ ರೂ.!

ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಅವರು ಎನ್ ಆರ್ ಐಗಳ ಸಮಾವೇಶದಲ್ಲಿ ಗಂಡನ ಬಗ್ಗೆ ಮಾತನಾಡಿದರು.

ಉದ್ಯಮ ಆರಂಭಿಸಿದ ಪ್ರಾರಂಭದಲ್ಲಿ ತಮ್ಮ ಜೊತೆ ಕೈ ಜೋಡಿಸುವಂತೆ ಗಂಡನನ್ನು ಕೇಳಿದರಂತೆ. ಆಗ ಗಂಡ ನನಗೆ ಸಂಬಳ ಕೊಡಲು ನಿನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದರು. ಆಗ ಅವರ ವೇತನ ವಾರ್ಷಿಕ 80 ಲಕ್ಷ ರೂ. ಆಗಿತ್ತು.

ಪೂನಮ್ ತಮ್ಮ ಉದ್ಯಮ ಬೆಳೆಸುವತ್ತ ಗಮನ ಹರಿಸಿದರು. ಈಗ ಪತಿಯೇ ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರ ವೇತನ 1.5 ಕೋಟಿ ರೂ.!

2002ರಲ್ಲಿ ಪುನೀತ್ ಗುಪ್ತ ಅವರನ್ನು ಪೂನಮ್ ಗುಪ್ತ ವಿವಾಹವಾದರು. ಪುನೀತ್ ಸ್ಕಾಟ್ಲೆಂಡ್ ನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದರು. ಪೂನಮ್ ಗುಪ್ತ ಎಂಬಿಎ ಓದಿದ್ದರು. ಆದರೆ ಕೆಲಸ ಮಾಡಿದ ಅನುಭವ ಇಲ್ಲದ ಕಾರಣ ಯಾರೂ ಕೆಲಸ ಕೊಟ್ಟಿರಲಿಲ್ಲ. ಹೀಗಾಗಿ ಅವರು ತಮ್ಮದೇ ಉದ್ಯಮ ಆರಂಭಿಸಲು ನಿರ್ಧರಿಸಿದರು.

ಯಾವ ಉದ್ಯೋಗ ಆರಂಭಿಸುವುದು ಎಂದು ಸಮೀಕ್ಷೆ ನಡೆಸಿದಾಗ ಅಮೆರಿಕ ಮತ್ತು ಇಂಗ್ಲೆಂಡ್ ನಲ್ಲಿ ಜನರು ಪೇಪರ್ ಗಳನ್ನು ಬಿಸಾಡುತ್ತಿದ್ದರು. ಕೆಲವು ಕಂಪನಿಗಳು ಈ ತ್ಯಜ್ಯವಾಗಿದ್ದ ಪೇಪರ್ ಸಾಗಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದವು.

10 ತಿಂಗಳ ಸಮೀಕ್ಷೆ ನಂತರ ಪೂನಮ್ ಈ ತ್ಯಜ್ಯ ಪೇಪರ್ ಅನ್ನು ರೀಸೈಕಲ್ (ಪುನರ್ ಬಳಕೆ) ಮಾಡಬಹುದು ಎಂದು ನಿರ್ಧರಿಸಿ, ವೇಸ್ಟ್ ಪೇಪರ್ ಅನ್ನು ಸ್ಕಾಟ್ಲೆಂಡ್, ಇಟಲಿ, ಫಿನ್ ಲ್ಯಾಂಡ್, ಸ್ವೀಡನ್ ಮತ್ತು ಅಮೆರಿಕದಿಂದ ಖರೀದಿಸಲು ನಿರ್ಧರಿಸಿದರು.

ಪೂನಮ್ ಮೊದಲ ಬಾರಿಗೆ ಇಟಲಿಯ ಕಂಪನಿಯಿಂದ ಪೇಪರ್ ಖರೀದಿಸಿದರು. ವಿಶೇಷ ಅಂದರೆ ಸ್ವತಃ ಪೂನಮ್ ಅವರೇ ದುಡ್ಡು ಕೊಡುವುದಾಗಿ ಹೇಳಿದರು. ಹಣ ಕೊಟ್ಟು ಹೊರಹಾಕುತ್ತಿದ್ದ ಪೇಪರ್ ಗೆ ಹಣ ಬರುತ್ತೆ ಅಂದಾಗ ಅವರು ಪೇಪರ್ ನೀಡಲು ಒಪ್ಪಿದರು. ಆರಂಭದಲ್ಲಿ ಎರಡು ಕಂಟೈನರ್ ಪೇಪರ್ ನಿಂದ 40 ಲಕ್ಷ ರೂ. ಸಂಪಾದಿಸಿದರು.

2004ರಲ್ಲಿ ಸ್ಕಾಟ್ಲೆಂಡ್ ನಲ್ಲಿ ಪೂನಮ್ ಕಂಪನಿ ಆರಂಭಿಸಿದರು. ಈ ವೇಳೆ ಪತಿ ಪುನೀತ್ ಗೆ ಕಂಪನಿ ಸೇರಿ ಕೈ ಜೋಡಿಸುವಂತೆ ಕೇಳಿದರು. ಆದರೆ ಆಗ ವಾರ್ಷಿಕ 80 ಲಕ್ಷ ರೂ. ವೇತನ ಪಡೆಯುತ್ತಿದ್ದರು. ನನಗೆ ಸಂಬಳ ಕೊಡುವಷ್ಟು ನಿನಗೆ ಸಾಮರ್ಥ್ಯ ಇಲ್ಲ ಅಂದು ಹೇಳಿದರು.

ಹೀಗಾಗಿ ಪಾರ್ಟ್ ಟೈಂ ಕೆಲಸ ಮಾಡಲು ಮನವಿ ಮಾಡಿದರು. 6 ತಿಂಗಳ ಕಾಲ ಪತಿ ಪುನೀತ್ ಪಾರ್ಟ್ ಟೈಂ ಕೆಲಸ ಮಾಡಿದರು. ಈಗ ಪೂರ್ಣಾವಧಿ ಕೆಲಸ ಮಾಡುತ್ತಿದ್ದು, ಇದಕ್ಕಾಗಿ 1.5 ಕೋಟಿ ರೂ. ಸಂಬಳ ಪಡೆಯುತ್ತಿದ್ದಾರೆ. ಇದೀಗ ದಂಪತಿ ತಮ್ಮ ಉದ್ಯಮವನ್ನು ಐಟಿ, ಹಾಸ್ಪಿಟಾಲಿಟಿ ಮತ್ತು ರಿಯಲ್ ಎಸ್ಟೇಟ್ ಗೂ ವಿಸ್ತರಿಸಿದ್ದಾರೆ.

ಪ್ರಸ್ತುತ ಪೂನಮ್ ಅವರ ಕಂಪನಿ 1000 ಕೋಟಿ ಮೌಲ್ಯದ್ದಾಗಿದೆ. ಆದರೆ ಅವರ ಗುರಿ 1 ಲಕ್ಷ ಕೋಟಿ ರೂ. ತಲುಪುವುದಾಗಿದೆ. ಈಗಾಗಲೇ 7 ದೇಶಗಳಲ್ಲಿ 9 ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ.

ಪೂನಮ್ ವಾರ್ಷಿಕ 60 ದಶಲಕ್ಷ ಪೌಂಡ್ ಆಗಿದ್ದು, 60 ದೇಶಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಇದೀಗ ಭಾರತ, ಚೀನಾ, ಟರ್ಕಿ, ಸ್ವೀಡನ್ ದೇಶಗಳಲ್ಲೂ ಕಚೇರಿ ತೆರೆದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಶಸ್ವಿಯಾಗಿ ಜರುಗಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ.

Sun Jan 22 , 2023
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗೂಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಂಗಾವತಿ ಗ್ರಾಮದಲ್ಲಿ ಇಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಈ ಹಿಂದೆ ಈ ಕೆಲ ಅಧಿಕಾರಿಗಳು ಬರದ ಕಾರಣ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ದೂರು ಆದ್ದರಿಂದ ಈ ಸಲ ಮತ್ತೊಮ್ಮೆ ಕಾರ್ಯಕ್ರಮವನ್ನು ಈ ಗ್ರಾಮದಲ್ಲಿ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಕಾಗವಾಡ ತಹಶೀಲ್ದಾರ ರಾಜೇಶ್ ಬುರ್ಲಿ ಅವರು ಅಂಬಿಗರ […]

Advertisement

Wordpress Social Share Plugin powered by Ultimatelysocial