ರಾಜ್ಯದ ಬಡ ರೈತ ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ರೂ. ಸಿಎಂ ಬೊಮ್ಮಾಯಿ ಘೋಷಣೆ!

ಹಾವೇರಿ : ಬಡ ರೈತ ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ರೂ. ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಹಾವೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಭೀಜಕ್ಕೆ 10 ಸಾವಿರ ರೂ.

ನೆರವು ನೀಡುವ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ 67 ಲಕ್ಷ ರೈತರಿಗೆ ಈ ಲಾಭ ದೊರಕಿಸಿ ಕೊಡಲಾಗುವುದು. ರೈತರಿಗೆ ಮೊಟ್ಟ ಮೊದಲ ಬಾರಿಗೆ ವಿಮೆ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಲಾಗುವುದು. ಈ ಭಾಗದ ಮೆಗಾ ಯೋಜನೆಗಳನ್ನು ಈ ಮಂಡಳಿ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಕೊಡ್ತಿದ್ದಂತೆ ಫುಲ್ ಖುಷ್ ಆದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ!

Sat Mar 11 , 2023
ಬೆಂಗಳೂರು: ಸಂಸದೆ ಸುಮಲತಾ ಅಂಬರೀಷ್ ಇಂದು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿ, ಸಹ ಸದಸ್ಯತ್ವ ಪಡೆಯುವ ಘೋಷಣೆಯನ್ನ ಮಂಡ್ಯದಲ್ಲಿ ಮಾಡಿದರು. ಈ ಘೋಷಣೆ ಬೆನ್ನಲೇ ಮಂಡ್ಯ ರಾಜಕೀಯದಲ್ಲಿ ಹಲವಾರು ಲೆಕ್ಕಾಚಾರ ಮುನ್ನಲೆಗೆ ಬರುತ್ತಿದೆ. ಈ ಪೈಕಿ ಮುಖ್ಯವಾಗಿ ಹಿನ್ನಲೆಗೆ ಸರಿದಿದ್ದ ಮಾಜಿ ಸಂಸದೆ ರಮ್ಯಾ (ದಿವ್ಯಾ ಸ್ಪಂದನ ) ರಾಜಕೀಯ ಪಯಣ ಮತ್ತೆ ಮುಖ್ಯ ರಸ್ತೆಗೆ ಬರುವ ಸಾಧ್ಯತೆ ಹೆಚ್ಚಿದೆ. ಕೆಲ ವರ್ಷಗಳಿಂದ ರಾಜಕೀಯ ಹಾಗೂ ಚಿತ್ರರಂಗದಿಂದ ದೂರ ಉಳಿದಿದ್ದ ಮಾಜಿ […]

Advertisement

Wordpress Social Share Plugin powered by Ultimatelysocial