ಬೆಂಗಳೂರಲ್ಲಿ 266 ಕೇಸ್ ಸಕ್ರಿಯ

ಬೆಂಗಳೂರು, ಜನವರಿ 06: ಭಾರತದ ರಾಜ್ಯಗಳ ಪೈಕಿ ಕಳೆದ ಎರಡು ವಾರಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ ಕಂಡು ಬಂದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ಇದು ನಾಡಿನ ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ.ಕರ್ನಾಟಕ ಕಳೆದ ವಾರ ಡಿಸೆಂಬರ್ 26 ರಿಂದ ಜನವರಿ 1ರವರೆಗೆ 276 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಆಗಿವೆ.ಅದರ ಹಿಂದಿನ ವಾರ ಅಂದರೆ ಡಿಸೆಂಬರ್ 19 ರಿಂದ ಡಿ.25 ರ ನಡುವಿನ ಅವಧಿಯಲ್ಲಿ 116 ಪ್ರಕರಣಗಳು ದಾಖಲಾಗಿದ್ದವು. ಸದ್ಯ ಜನವರಿ 4 ವರೆಗಿನ ಅಂಕಿ ಅಂಶಗಳ ಗಮನಿಸಿದರೆ ಕರ್ನಾಟಕದಲ್ಲಿ 309 ಸಕ್ರಿಯ ಪ್ರಕರಣಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ಅತ್ಯಧಿಕ ಸೋಂಕಿನ ಪ್ರಕರಣಗಳ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ವರದಿಯಾಗಿವೆ. 266 ಸಕ್ರಿಯ ಪ್ರಕರಣ ಹೊಂದಿರುವ ಬೆಂಗಳೂರು ರಾಜ್ಯದ ಕೇಂದ್ರ ಬಿಂದುವಾಗಿದೆ. ದೇಶದ ಮಹಾನಗರಗಳಲ್ಲೇ ಬೆಂಗಳೂರಿನಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ.

ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಮುಂಬೈ ಎರಡೂ ಮಹಾನಗರಗಳು ಜನವರಿ 3ರವರೆಗೆ ತಲಾ 32 ಸಕ್ರಿಯ ಪ್ರಕರಣಗಳನ್ನಷ್ಟೇ ಹೊಂದಿವೆ. ನಂತರ ಚೆನ್ನೈ ನಗರದಲ್ಲಿ ಕೇವಲ 27 ಸಕ್ರಿಯ ಪ್ರಕರಣಗಳು ಇವೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣವು ಡಿಸೆಂಬರ್ 25 ರಂದು ಶೇ.2.2 ರಷ್ಟು ಇತ್ತು. ಅದು ಜನವರಿ 3ರ ಹೊತ್ತಿಗೆ ಶೇ.0.3ರಷ್ಟಕ್ಕೆ ಇಳಿಕೆ ಆಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನಿತ್ಯ 5,000 ಕೋವಿಡ್ ಪರೀಕ್ಷೆ

ನಗರದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಆಗಿದ್ದರೂ ಸಹ ಆತಂಕ ಪಡುವ ಅಗತ್ಯವಿಲ್ಲ. ಸದ್ಯ ದಿನಕ್ಕೆ ಬಿಬಿಎಂಪಿಯು 5,000 ಕೋವಿಡ್ ಪರೀಕ್ಷೆ ಮಾಡುತ್ತಿದೆ. ಇಷ್ಟು ಪ್ರಮಾಣದ ಪರೀಕ್ಷೆಗೆ ಹೋಲಿಕೆ ಮಾಡಿದರೆ ಪಾಸಿಟಿವ್ ಪ್ರಕರಣಗಳ ಕಂಡು ಬರುತ್ತಿರುವ ಪ್ರಮಾಣವು ಸಾಮಾನ್ಯ ಸಂಗತಿಯಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ತ್ರಿಲೋಕ್ ಚಂದ್ರ ಹೇಳಿದ್ದಾರೆ.ಆರೊಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಡಿಸೆಂಬರ್ 27ರಿಂದ ಜನವರಿ 2 ರವರೆಗೆ 12,397 ಪರೀಕ್ಷೆಗಳನ್ನು ಮಾಡಲಾಗಿದೆ. ಡಿಸೆಂಬರ್ 20 ರಿಂದ 26 ರವರೆಗೆ 3,353 ಮತ್ತು ಡಿಸೆಂಬರ್ 13 ರಿಂದ 19 ರವರೆಗೆ 3,223 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಮ ಮಂದಿರ ಕಟ್ಟಲು ನಮ್ಮವಿರೋಧವಿಲ್ಲ.

Fri Jan 6 , 2023
  ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ನಮ್ಮ ವಿರೋಧವಿಲ್ಲ. ಆದರೆ ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಶುಕ್ರವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಲು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದೆಂಬುದೆ ನಮ್ಮ ವಿರೋಧ. ಪ್ರತಿ ಹಳ್ಳಿಯಲ್ಲಿ ಆಂಜನೇಯ ಮಂದಿರಗಳಿವೆ. ನಾವು ಅವನ್ನು ಕಟ್ಟಿಲ್ಲವೇ? ಆದರೆ ಅದರಲ್ಲಿ ರಾಜಕಾರಣ ಮಾಡಬಾರದು ಎಂದರು. ಕೋಮುವಾದ ಮಾಡುವ ಯಾವುದೇ ಪಕ್ಷಗಳು ಜನರನ್ನು […]

Advertisement

Wordpress Social Share Plugin powered by Ultimatelysocial