30ನೇ ವಸಂತಕ್ಕೆ ಕಾಲಿಟ್ಟ ನಟಿ ಅಮೂಲ್ಯ

ಟಿ ಅಮೂಲ್ಯ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಕುಟುಂಬದೊಂದಿಗೆ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. 2002ರಲ್ಲಿ ತೆರೆಕಂಡ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಪರ್ವ’ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ತಮ್ಮ ಸಿನಿ ಪಯಣ ಆರಂಭಿಸಿದ ಅಮೂಲ್ಯ 2003 ರಲ್ಲಿ ಕಿಚ್ಚ ಸುದೀಪ್ ಅವರ ‘ಚಂದು’ ಚಿತ್ರದಲ್ಲಿ ಕಾಣಿಸಿಕೊಂಡರು.

ಬಾಲ ನಟಿಯಾಗಿ ಸಾಕಷ್ಟು ಹೆಸರು ಮಾಡಿದ ಅಮೂಲ್ಯ 2007ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಚೆಲುವಿನ ಚಿತ್ತಾರ’ ದಲ್ಲಿ ಮೊದಲ ಬಾರಿ ನಾಯಕಿಯಾಗಿ ಅಭಿನಯಿಸಿದರು.

ನಟಿ ಅಮೂಲ್ಯ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ನ ಬೇಡಿಕೆ ನಟಿಯಾಗಿ ಹೊರಹೊಮ್ಮಿದರು.

2017ರಲ್ಲಿ ‘ಮುಗುಳುನಗೆ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಇತ್ತೀಚಿಗೆ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್ವುಡ್ ಸಿನಿ ತಾರೆಯರಿಂದ ಹಾಗೂ ಅವರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಯಾವುದೇ ಸಿನಿಮಾದ ನಿಜವಾದ ನಾಯಕ ಎಂದರೆ 'ಶಕ್ತಿಶಾಲಿ ಕಥೆ': ನಟ ರಾಘವೇಂದ್ರ ರಾಜ್‌ಕುಮಾರ್

Thu Sep 14 , 2023
13 ಚಿತ್ರದಲ್ಲಿ ನಟಿ ಶ್ರುತಿ ಮತ್ತು ನಟ ಪ್ರಮೋದ್ ಶೆಟ್ಟಿ ಜೊತೆಗೆ ನಟ ರಾಘವೇಂದ್ರ ರಾಜ್ಕುಮಾರ್ ನಾಯಕನಾಗಿ ನಟಿಸಿದ್ದಾರೆ. ಈ ಕುರಿತು ಮಾತನಾಡುವ ಅವರು, 13 ಅನ್ನು ಅರ್ಥಪೂರ್ಣ ಆಧ್ಯಾತ್ಮಿಕ ಮತ್ತು ಸಮುದಾಯಕ್ಕೆ ಸಂದೇಶ ನೀಡುವ ಚಿತ್ರ ಎಂದು ಕರೆದಿದ್ದಾರೆ. ’13’ ಅನ್ನು ಸಾಮಾನ್ಯವಾಗಿ ಚಲನಚಿತ್ರಕ್ಕೆ ಅಶುಭ ಶೀರ್ಷಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಬೆರಳೆಣಿಕೆಯಷ್ಟು ನಿರ್ದೇಶಕರು ಈ ಸಂಖ್ಯೆಯನ್ನು ಸುತ್ತುವರೆದಿರುವ ರಹಸ್ಯವನ್ನು ಸ್ವೀಕರಿಸಿದ್ದಾರೆ. ಈಪೈಕಿ ನಿರ್ದೇಶಕ ಕೆ ನರೇಂದ್ರ ಬಾಬು […]

Advertisement

Wordpress Social Share Plugin powered by Ultimatelysocial