ನೀವು ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಬಾಲಿವುಡ್ ನಟಿ ಟಬು ಅಭಿನಯದ ‘ಚೀನಿ ಕಮ್’ ಚಿತ್ರ ನೋಡಿದ್ದರೆ, ನಿಮಗೆ ಅದರಲ್ಲಿ ಬರುವ ಒಂದು ಪುಟ್ಟ ಹುಡುಗಿಯ ಪಾತ್ರ ಖಂಡಿತ ನೆನಪಿರುತ್ತದೆ ಅಂತ ಹೇಳಬಹುದು.
ಏಕೆಂದರೆ ಆ ಪಾತ್ರ ತುಂಬಾನೇ ಚಿಕ್ಕದಾಗಿದ್ದರೂ ಸಹ ಚಿತ್ರದ ಅರ್ಧ ಭಾಗದವರೆಗೆ ಆಗಾಗ ನಟ ಅಮಿತಾಭ್ ಬಚ್ಚನ್ ಅವರ ಜೊತೆ ಕಾಣಿಸಿಕೊಂಡಿದೆ ಅಂತ ಹೇಳಬಹುದು.ಆ ಪುಟ್ಟ ಹುಡುಗಿಯ ಪಾತ್ರದಲ್ಲಿ ಆಗ ನಟಿಸಿದ್ದ ಬಾಲನಟಿಯ ಹೆಸರು ಸ್ವಿನಿ ಖಾರಾ. ಈ ಚಿತ್ರ ಬಿಡುಗಡೆಯಾಗಿದ್ದು 2007ರಲ್ಲಿ ಅಂತ ಹೇಳಬಹುದು. ಈಗ ಆ ಪುಟ್ಟ ಹುಡುಗಿ ಬೆಳೆದು ದೊಡ್ಡವಳಾಗಿದ್ದಾಳೆ, ಎಷ್ಟು ದೊಡ್ಡವಳು ಅಂತ ಹೇಳಿದರೆ ಈಗ ಆಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ ನೋಡಿ.ಈ ಚೀನಿ ಕಮ್ ಚಿತ್ರ ಆಗ ಬಿಡುಗಡೆಯಾದಾಗ ವಿಮರ್ಶಕರು ಈ ಚಿತ್ರವು ಎಲ್ಲರಿಗೂ ಅಲ್ಲ ಎಂದು ವಾದಿಸಿದ್ದರು. ಚಿತ್ರದ ಕೆಲವು ಅಂಶಗಳು ಮತ್ತು ಪಾತ್ರಗಳು ಇವತ್ತಿಗೂ ಜನರ ಮನಸ್ಸಿನಲ್ಲಿ ಅಳಿಸದಂತೆ ಹಾಗೆ ಉಳಿದಿವೆ ಅಂತ ಹೇಳಬಹುದು.ಈ ಚಿತ್ರದಲ್ಲಿ ಬಿಗ್ ಬಿ ಅವರ ಜೊತೆ ನಟಿಸಿದ್ದಂತಹ 9 ವರ್ಷದ ಪಕ್ಕದಮನೆಯ ಬಾಲಕಿಯ ಪಾತ್ರವನ್ನು ನಿರ್ವಹಿಸಿದ ಸ್ವಿನಿ ಖಾರಾ ಈಗ ಟಿವಿ ನಟಿ ಆಗಿ ಕೆಲಸ ಮಾಡುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: