ʼಸುಂದರ ತ್ವಚೆʼ ಪಡೆಯಲು ಪುರುಷರೂ ಬಳಸಿ ಫೇಸ್ ಸ್ಕ್ರಬ್

 

 

ಮಹಿಳೆಯರಂತೆ ಪುರುಷರಿಗೂ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಸಮಸ್ಯೆ ಕಾಡುತ್ತದೆ. ಇವು ತ್ವಚೆಯನ್ನು ಮತ್ತಷ್ಟು ಗಡುಸಾಗಿಸುತ್ತದೆ. ಇದರ ನಿವಾರಣೆಗೆ ಫೇಸ್ ಸ್ಕ್ರಬ್ ಸಹಕಾರಿ.

ಪುರುಷರು ಸಾಮಾನ್ಯವಾಗಿ ಬಳಸುವ ಫೇಸ್ ವಾಶ್ ಗಳು ತ್ವಚೆಯ ಮೇಲ್ಭಾಗವನ್ನು ಸ್ವಚ್ಛಗೊಳಿಸಿದರೂ ಆಳಕ್ಕೆ ಇಳಿದು ಕೆಲಸ ಮಾಡುವುದಿಲ್ಲ.

ಫೇಸ್ ಸ್ಕ್ರಬ್ ಗಳು ಚರ್ಮದ ರಂಧ್ರದಲ್ಲಿರುವ ಕೊಳೆ ಮತ್ತು ಸತ್ತ ಜೀವಕೋಶಗಳನ್ನು ದೂರ ಮಾಡುತ್ತವೆ. ಮತ್ತು ತ್ವಚೆಗೆ ವಿಶೇಷ ಹೊಳಪು ನೀಡುತ್ತವೆ.

ನಿತ್ಯ ಶೇವಿಂಗ್ ಮಾಡುವ ಪುರುಷರು ಗಾಯ ಹಾಗೂ ಕ್ರೀಮ್ ಗಳ ಅಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಸ್ಕ್ರಬ್ ಗಳು ಇದನ್ನೂ ನಿವಾರಿಸುತ್ತವೆ. ಕೆಲವೊಮ್ಮೆ ಮೂಡುವ ಮೊಡವೆಗಳು ಕಲೆ ರೂಪದಲ್ಲಿ ಉಳಿದು ಬಿಡುತ್ತವೆ. ಇದರ ನಿವಾರಣೆಗೂ ಸ್ಕ್ರಬ್ ಸಹಕಾರಿ.

ನಿಯಮಿತವಾಗಿ ಅಂದರೆ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಫೇಸ್ ಸ್ಕ್ರಬ್ ಮಾಡುವುದರಿಂದ ಕಣ್ಣುಗಳ ಕೆಳಭಾಗದಲ್ಲಿ, ಕೆನ್ನೆಯಲ್ಲಿ ಕಾಣಿಸುವ ಸುಕ್ಕಿನ ಲಕ್ಷಣಗಳು ದೂರವಾಗುತ್ತವೆ. ತ್ವಚೆಯ ಆರೋಗ್ಯವನ್ನೂ ಕಾಪಾಡಿ, ತ್ವಚೆಯನ್ನು ಮೃದುಗೊಳಿಸುವ ಫೇಸ್ ಸ್ಕ್ರಬ್ ಅನ್ನು ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕತ್ರಿನಾಗೆ ಹೊಸ ಆರಂಭ...

Sun Mar 13 , 2022
‘ಮೆರ್ರಿ ಕ್ರಿಸ್ಮಸ್’ ಶೀರ್ಷಿಕೆಯ ಚಲನಚಿತ್ರವು ದಕ್ಷಿಣದ ಸೂಪರ್‌ಸ್ಟಾರ್ ವಿಜಯ್ ಸೇತುಪತಿಯನ್ನೂ ಸಹ ಒಳಗೊಂಡಿದೆ; ಇದನ್ನು ಕ್ರಿಸ್ಮಸ್ 2021 ರಂದು ಘೋಷಿಸಲಾಯಿತು ಕತ್ರಿನಾ ಕೈಫ್ ನಟ ವಿಕ್ಕಿ ಕೌಶಲ್ ಜೊತೆ ಮದುವೆಯಾದ ದಿನದಿಂದಲೂ ಸುದ್ದಿಯಾಗುತ್ತಿದ್ದಾರೆ. ಸಲ್ಮಾನ್ ಖಾನ್ ಅವರೊಂದಿಗೆ ಮುಂಬರುವ ಚಿತ್ರ ಟೈಗರ್ 3 ರ ಟೀಸರ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ನಟ, ಶುಕ್ರವಾರ ಶ್ರೀರಾಮ್ ರಾಘವನ್ ನಿರ್ದೇಶನದ ಮೆರ್ರಿ ಕ್ರಿಸ್‌ಮಸ್ ಚಿತ್ರೀಕರಣವನ್ನು ಪ್ರಾರಂಭಿಸಿದರು. ತನ್ನ Instagram ಹ್ಯಾಂಡಲ್‌ಗೆ ತೆಗೆದುಕೊಂಡು, ಝೀರೋ ನಟ […]

Advertisement

Wordpress Social Share Plugin powered by Ultimatelysocial