ಕಳೆದ 2 ವರ್ಷಗಳಲ್ಲಿ ಓಟಿಟಿ ಬಗ್ಗೆ ಸಾಕಷ್ಟು ಚರ್ಚೆ

ಕಳೆದ ಒಂದೆರೆಡು ವರ್ಷಗಳಲ್ಲಿ ಓಟಿಟಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅದರಲ್ಲೂ ಲಾಕ್‌ಡೌನ್ ಸಂದರ್ಭದಲ್ಲಿ ಓಟಿಟಿಯ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚಾಗಿದ್ದು, ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಪುನಃ ಪ್ರಾರಂಭವಾಗುವವರೆಗೂ, ಓಟಿಟಿಯ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಓಟಿಟಿಯಲ್ಲೂ ಬರೀ ಕನ್ನಡ ಚಿತ್ರಗಳೇ ಸಿಗುವುದಿಲ್ಲ. ಬೇರೆ ಭಾಷೆಯ ಚಿತ್ರಗಳ ಜತೆಗೆ ಕನ್ನಡ ಚಿತ್ರಗಳೂ ಸಿಗುತ್ತವೆ. ಹೀಗಿರುವಾಗ, ತಂಡವೊ0ದು ಬರೀ ಕನ್ನಡ ಚಿತ್ರಗಳಿಗಾಗಿಯೇ ಓನ್ಲಿ ಕನ್ನಡ ಎಂಬ ಹೊಸ ಓಟಿಟಿ ಶುರು ಮಾಡುವುದಕ್ಕೆ ಹೆಜ್ಜೆ ಇಟ್ಟಿದೆ. ಇಲ್ಲಿ ಬರೀ ಸಿನಿಮಾಗಳಷ್ಟೇ ಅಲ್ಲ, ನಾಟಕ, ಕಿರುಚಿತ್ರ, ಸಂಗೀತ-ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ನೋಡಬಹುದಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಆರಂಭವಾದ ಈ ಯೋಚನೆ ಮತ್ತು ಯೋಜನೆಯನ್ನು ಕನ್ನಡದ ಸಾಫ್ಟೇರ್ ಇಂಜಿನಿಯರ್ಗಳು ಇದೀಗ ಕಾರ್ಯರೂಪಕ್ಕೆ ತರುತ್ತಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ರೌಡಿಶೀಟರ್‌ನಿಂದ ಮಕ್ಕಳ ಅಶ್ಲೀಲ ವಿಡಿಯೋ ಸೆರೆ

Fri Jul 24 , 2020
ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ ರೌಡಿಶೀಟರ್ ಓರ್ವನನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಮಂಜುನಾಥ್ ಅಲಿಯಾಸ್ ಕೋಳಿ ಮಂಜ ಬಂಧಿತ ರೌಡಿ ಶೀಟರ್. ಆರೋಪಿ ಚಾಮರಾಜಪೇಟೆ ಮೂಲದವನಾಗಿದ್ದು, ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಪಿಸಿ ಜಗದೀಶ್ ನೇತೃತ್ವದ ಸಿಸಿಬಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. Please follow and like us:

Advertisement

Wordpress Social Share Plugin powered by Ultimatelysocial