ಮೊದಲ ದಿನ ಕ್ರಾಂತಿಗಿಂತ ನಟ ಭಯಂಕರ ಚಿತ್ರದ ಕಲೆಕ್ಷನ್ ಹೆಚ್ಚು;

ಳೆದ ವಾರವಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ನಟನೆಯ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಿಡುಗಡೆಯಾಯಿತು. ಮೊದಲ ದಿನವೇ 12.85 ಕೋಟಿ ಗಳಿಕೆ ಮಾಡಿದ ಕ್ರಾಂತಿ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಎರಡು ವರ್ಷಗಳ ಬಳಿಕ ತೆರೆಗೆ ಬಂದ ತಮ್ಮ ನೆಚ್ಚಿನ ನಟನ ಚಿತ್ರವನ್ನು ದರ್ಶನ್ ಅಭಿಮಾನಿಗಳು ಮೆಚ್ಚಿಕೊಂಡರು.

ಇನ್ನು ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ ಕ್ರಾಂತಿ ನಂತರದ ದಿನಗಳಲ್ಲಿ ಸಮಾಧಾನಕರ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಯಿತು. ಒಂದೆಡೆ ಪಠಾಣ್ ಪೈಪೋಟಿ ಹಾಗೂ ನೆಗೆಟಿವ್ ವಿಮರ್ಶೆ ಚಿತ್ರಕ್ಕೆ ಎದುರಾಯಿತು. ಎಷ್ಟೇ ನೆಗೆಟಿವ್ ವಿಮರ್ಶೆ ಎದುರಾದರೂ ನಮ್ಮ ಚಿತ್ರ ಗೆದ್ದಿದೆ ಎಂದು ಚಿತ್ರತಂಡ ಹೇಳಿಕೊಂಡಿತು. ಕೆಲ ಮಾಧ್ಯಮಗಳು ಚಿತ್ರ ಗಳಿಕೆ ಹಾಗೂ ತನ್ನ ವಿವಿಧ ರೈಟ್ಸ್‌ಗಳ ಮಾರಾಟದ ಹಣ ಸೇರಿ ನೂರು ಕೋಟಿ ಕ್ಲಬ್ ಸೇರಿದೆ ಎಂದು ಪ್ರಕಟಿಸಿದವು. ಅಲ್ಲದೇ ಕ್ರಾಂತಿ ಚಿತ್ರತಂಡ ಸಹ ನೂರು ಕೋಟಿ ಎಂದು ಮಾಡಲಾಗಿದ್ದ ಕೇಕ್ ಕತ್ತರಿಸಿ ಸಂಭ್ರಮಿಸಿತು.

ಆದರೆ ಸಾಮಾನ್ಯ ಸಿನಿ ರಸಿಕರು ಈ ಕಲೆಕ್ಷನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅದರಲ್ಲೂ ಮೊದಲ ದಿನ ಚಿತ್ರ 35 ಕೋಟಿ ಗಳಿಸಿದೆ ಎಂದು ಹರಿದಾಡಿದ್ದ ಪೋಸ್ಟರ್ ಅನ್ನು ಟ್ರೋಲ್ ಮಾಡಿದ್ದರು. ಇದು ನಕಲಿ ಕಲೆಕ್ಷನ್ ರಿಪೋರ್ಟ್, ಈ ರೀತಿ ಮಾಡಿ ಜನರಿಗೆ ತಪ್ಪು ಮಾಹಿತಿ ನೀಡಬೇಡಿ ಎಂದಿದ್ದರು. ಆದರೆ ದರ್ಶನ್ ಅಭಿಮಾನಿಗಳ ಪೇಜ್‌ಗಳಲ್ಲಿ ಮತ್ತು ಟ್ರೋಲ್ ಪೇಜ್‌ಗಳಲ್ಲಿ ಈ ಪೋಸ್ಟರ್ ಹರಿದಾಡಿತ್ತು. ಇದೀಗ ಈ ಪೋಸ್ಟರ್‌ಗೆ ಕೌಂಟರ್ ಕೊಡುವಂತ ಮತ್ತೊಂದು ಪೋಸ್ಟರ್ ಹೊರಬಿದ್ದಿದೆ. ಅದೂ ಸಹ ಪ್ರಥಮ್ ಅಭಿನಯದ ನಟ ಭಯಂಕರ ಚಿತ್ರದ್ದು. ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಪೋಸ್ಟರ್ ಇದಾಗಿದ್ದು, ಸದ್ಯ ಇದೊಂದು ಪೋಸ್ಟರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಕ್ರಾಂತಿಗಿಂತ ಹೆಚ್ಚು ಕಲೆಕ್ಷನ್

ನಿನ್ನೆ ( ಫೆಬ್ರವರಿ 3 ) ಪ್ರಥಮ್ ನಟನೆಯ ನಟ ಭಯಂಕರ ಸಿನಿಮಾ ತೆರೆಗೆ ಬಂತು. ಮೊದಲ ದಿನದ ಪ್ರದರ್ಶನಗಳು ಮುಗಿದ ಕೂಡಲೇ ಈ ಚಿತ್ರ ಮೊದಲ ದಿನವೇ ಬರೋಬ್ಬರಿ 35.5 ಕೋಟಿ ಕಲೆಕ್ಷನ್ ಮಾಡಿದೆ ಎಂಬ ಪೋಸ್ಟರ್ ಹೊರಬಿತ್ತು. ಇನ್ನು ಈ ಪೋಸ್ಟರ್ ಅನ್ನು ಕ್ರಾಂತಿ ಚಿತ್ರ ಮೊದಲ ದಿನ 35.3 ಕೋಟಿ ಕಲೆಕ್ಷನ್ ಮಾಡಿತ್ತು ಎಂಬ ಪೋಸ್ಟರ್ ಜತೆ ಹೋಲಿಸಿ ಪ್ರಥಮ್ ನಿಜವಾದ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಟ್ರೋಲ್ ಮಾಡಲಾಗಿದೆ. ಸದ್ಯ ಈ ಹೋಲಿಕೆಯ ಟ್ರೋಲ್ ವೈರಲ್ ಆಗಿದೆ.

ಸ್ಪಷ್ಟನೆ ನೀಡಿದ ಪ್ರಥಮ್

ಹೀಗೆ ಕ್ರಾಂತಿ ಚಿತ್ರಕ್ಕಿಂತ ಪ್ರಥಮ್ ನಟನೆಯ ನಟ ಭಯಂಕರ ಚಿತ್ರ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ಟ್ರೋಲ್ ವೈರಲ್ ಆದ ಬೆನ್ನಲ್ಲೇ ನಟ ಪ್ರಥಮ್ ಇದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಹಾಗೂ ಕ್ರಾಂತಿ ಚಿತ್ರದ ಕಲೆಕ್ಷನ್ ಬಗ್ಗೆ ಮಾಡಲಾಗಿರುವ ಟ್ರೋಲ್ ಫೋಟೊವನ್ನು ಹಂಚಿಕೊಂಡಿರುವ ಪ್ರಥಮ್ “ಇದು ಸುಳ್ಳು ಸುದ್ದಿ. ನಾನು ಪೂಜೆ ಮಾಡೋ ಕಬ್ಬಾಳಮ್ಮನ ಸಾಕ್ಷಿಯಾಗಿಯೂ ಇದಕ್ಕೂ ನನಗೂ ಸಂಬಂಧವಿಲ್ಲ. ಹಾಗೂ ಮುಖ್ಯವಾಗಿ ನಮ್ಮ ಚಿತ್ರ ಅಷ್ಟು ಕಲೆಕ್ಷನ್ ಮಾಡಿಲ್ಲ. ದರ್ಶನ್ ಸರ್ ದೊಡ್ಡವರು. ಸುಮ್ಮನೆ ಸುಳ್ಳು ಹೋಲಿಕೆ ಬೇಡ. ಚೆನ್ನಾಗಾಗ್ತಾ ಇದೆ ಸಂತೋಷ. ಆದರೆ ಈಶ್ವರನ ಸಾಕ್ಷಿಯಾಗಿ ಇದು ಸುಳ್ಳು ಹಾಗೂ ನನಗೂ ಇದಕ್ಕೂ ಸಂಬಂಧವಿಲ್ಲ. ದಯವಿಟ್ಟು ನಿಲ್ಲಿಸಿ” ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.

ಎರಡೂ ಅಫಿಷಿಯಲ್ ಪೋಸ್ಟರ್ ಅಲ್ಲ

ಇನ್ನು ಈ ರೀತಿ ಟ್ರೋಲ್‌ಗೆ ಒಳಗಾಗಿರುವ ಈ ಎರಡೂ ಪೋಸ್ಟರ್‌ಗಳೂ ಸಹ ಅಫಿಷಿಯಲ್ ಅಲ್ಲ. ಚಿತ್ರವನ್ನು ನಿರ್ಮಿಸುವ ನಿರ್ಮಾಪಕರು ಚಿತ್ರ ಮೊದಲ ದಿನ ಇಷ್ಟನ್ನೇ ಗಳಿಕೆ ಮಾಡಿದೆ ಎಂದು ತಾವೇ ಪೋಸ್ಟರ್ ಬಿಡುಗಡೆ ಮಾಡಿ ಹೇಳಿದರೆ ಮಾತ್ರ ಅದು ಅಧಿಕೃತ ಕಲೆಕ್ಷನ್ ಪೋಸ್ಟರ್ ಎನಿಸಿಕೊಳ್ಳಲಿದೆ. ಈ ರೀತಿಯ ರೂಢಿ ತೆಲುಗು ಚಿತ್ರರಂಗದಲ್ಲಿದ್ದು, ಕೆಜಿಎಫ್ ಹಾಗೂ ರಾಬರ್ಟ್ ಚಿತ್ರತಂಡಗಳು ಸಹ ಮೊದಲ ದಿನದ ಕಲೆಕ್ಷನ್ ಅನ್ನು ಬಿಚ್ಚಿಟ್ಟು ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಂಡಿದ್ದವು. ಒಟ್ಟಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆಗಳು ಮೊದಲ ದಿನ ಚಿತ್ರ ಏನು ಕಲೆಕ್ಷನ್ ಮಾಡಿದೆ ಎಂಬುದನ್ನು ಬಿಚ್ಚಿಡದಿದ್ದರೆ ಈ ರೀತಿಯ ಗೊಂದಲ ಹಾಗೂ ಇದರಿಂದ ವಿವಾದ ಉಂಟಾಗುವುದು ತಪ್ಪಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಸ್ತುತ ಅನೇಕ ಜನರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

Sat Feb 4 , 2023
ಪ್ರಸ್ತುತ ಅನೇಕ ಜನರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆಧುನಿಕ ಜೀವನಶೈಲಿಯನ್ನು ಅನುಸರಿಸಿ ಅನೇಕ ಜನರು ಮಧುಮೇಹದಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಮಧುಮೇಹದ ತೊಂದರೆಗಳಿಗೆ ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುವುದೇ ಮುಖ್ಯ ಕಾರಣ ಎನ್ನುತ್ತಾರೆ ಆರೋಗ್ಯ ತಜ್ಞರು. ಆದ್ದರಿಂದ ಮಧುಮೇಹ ಮತ್ತು ಮಧುಮೇಹದ ಲಕ್ಷಣಗಳಿಂದ ಬಳಲುತ್ತಿರುವವರು ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಅದರಲ್ಲೂ ತಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಇಲ್ಲದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳ ಜತೆಗೆ ಮಧುಮೇಹವೂ […]

Advertisement

Wordpress Social Share Plugin powered by Ultimatelysocial