ತಮ್ಮ ಉತ್ತಮ ಕೆಲಸದಿಂದ ಮತ್ತೊಬ್ಬರಿಗೆ ಸ್ಪೂರ್ತಿಯಾದ ನಟ ಕಿರಣ್ ರಾಜ್.

 

ಕಲಾವಿದನಾಗಿ ಜನಮನಸೂರೆಗೊಂಡಿರುವ ಕಿರಣ್ ರಾಜ್, ಸಾಮಾಜಿಕ ಕಾರ್ಯಗಳ ಮೂಲಕ ಕೂಡ ಜನಪ್ರಿಯ. ಕೊರೋನ ಕಾಲದಲ್ಲಿ ಇವರು ಮಾಡಿದ್ದ ಸಮಾಜ ಮುಖಿ ಕೆಲಸಗಳು ಅಷ್ಟಿಷ್ಟಲ್ಲ. ಮಂಗಳಮುಖಿಯರು ಸಹ ಕಿರಣ್ ರಾಜ್ ಸಹಾಯ ನೆನೆದು ಭಾವುಕರಾಗಿದ್ದರು.

ಕಿರಣ್ ರಾಜ್ ಫೌಂಡೇಶನ್ ವತಿಯಿಂದ ಮಾಡುವ ಸಾಮಾಜಿಕ ಕೆಲಸಗಳನ್ನು ಗಮನಿಸಿರುವ ಬೆಂಗಳೂರಿನ ರಾಮಸಂದ್ರದ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳು, ಶೀತಲಗೊಂಡಿದ್ದ ತಮ್ಮ ಶಾಲೆಯನ್ನು ದುರಸ್ತಿ ಮಾಡಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು.

ಮಕ್ಕಳಿಗೆ ಶಾಲೆ ಮುಖ್ಯ‌. ದಿನದ ಹೆಚ್ಚಿನ ಭಾಗವನ್ನು ಮಕ್ಕಳು ಶಾಲೆಯಲ್ಲೇ ಕಳೆಯುತ್ತಾರೆ. ಅಂತಹ ಶಾಲೆ ಉತ್ತಮ ವ್ಯವಸ್ಥೆಯಲ್ಲಿರಬೇಕು ಎಂಬ ಆಶಯದಿಂದ ಕಿರಣ್ ರಾಜ್ ಫೌಂಡೇಶನ್ ಮೂಲಕ ಶಾಲೆಯನ್ನು ದುರಸ್ತಿ ಮಾಡಿ, ಸುಣ್ಣಬಣ್ಣದಿಂದ ಅಲಂಕರಿಸಿ ಕೊಟ್ಟಿದೆ ಕಿರಣ್ ರಾಜ್ ಫೌಂಡೇಶನ್.

ಈ ಸಂಸ್ಥೆಯ ಸೇವೆಯನ್ನು ಕಂಡು ತಾವು ಇಂತಹ ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸುವುದಾಗಿ ಕೆಲವು ಸ್ವಯಂಸೇವಕರು ಮುಂದೆ ಬಂದಿದ್ದಾರೆ.

ರವಿ, ಮಣಿಕಂಠ(ಕಿರಣ್ ರಾಜ್ ಫೌಂಡೇಶನ್),ರೋಹಿತ್(ಪೈಂಟರ್), ಜಾನ್ಸನ್ (ಪೈಂಟರ್), ಭೀಮೇಶ್(ಪೈಂಟರ್), ಕಾವ್ಯ, ಮೇಘನಾ,‌ ಸಂತೋಷ್, ಜಿತೇಂದ್ರ, ಶಶಿಧರ್, ಯುಕ್ತ, ವಿಭಾ ಮುಂತಾದವರು ಪ್ರಮುಖ ‌ಸ್ವಯಂಸೇವಕರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಶಯಕ್ಕೆ ಅಪಚಾರ

Sun Jun 5 , 2022
ಪಠ್ಯ ಪುಸ್ತಕ ರಚನಾಕಾರರು ಬಸವಣ್ಣನವರ ಆಶಯಕ್ಕೆ ಅಪಚಾರ – ಒಂದು ಪುಟದ ಕಿರು ಬರಹದಲ್ಲಿ ಬಸವಣ್ಣನವರ ಚಾರಿತ್ರೆಗಳಿಗೆ ದಕ್ಕೆ -ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ  ಪ್ರತಿಭಟನೆ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial