ಶಂಭುದುರ್ಗ ಪ್ರತಿಷ್ಠಾನದ ಎಚ್ಚರಿಕೆಯ ಬಳಿಕ ಕ್ರೈಸ್ತ ವ್ಯಕ್ತಿಯಿಂದ ಹುದ್ದೆಗೆ ತ್ಯಾಗಪತ್ರ !

ತಿಹಾಸಿಕ ವಜ್ರೇಶ್ವರಿ ದೇವಸ್ಥಾನದ ಜನಸಂಪರ್ಕ ಅಧಿಕಾರಿ ಹುದ್ದೆಗೆ ಕ್ರೈಸ್ತ ವ್ಯಕ್ತಿಯ ನೇಮಕಾತಿ ಪ್ರಕರಣ.  ಮನವಿ ನೀಡಲು ಒಂದುಗೂಡಿದ ಶಂಭುದರ್ಗ ಪ್ರತಿಷ್ಠಾನದ ಕಾರ್ಯಕರ್ತರು ಠಾಣೆ -ಹಿಂದೂಗಳ ಪ್ರಾಚೀನ ಪರಂಪರೆ ಹೊಂದಿರುವ ಭಿವಂಡಿಯ ಐತಿಹಾಸಿಕ ವಜ್ರೇಶ್ವರಿ ದೇವಸ್ಥಾನದ ಜನಸಂಪರ್ಕ ಅಧಿಕಾರಿ ಹುದ್ದೆಗೆ ಕ್ರೈಸ್ತ ವ್ಯಕ್ತಿ ಫ್ರಾನ್ಸಿಸ್ ಜೋಸೆಫ್ ಲೆಮಾಸ್ ಇವರನ್ನು ನೇಮಿಸಿದ್ದರಿಂದ ಹಿಂದುತ್ವನಿಷ್ಠ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಈ ವಿಷಯದಲ್ಲಿ ಶಂಭುದುರ್ಗ ಪ್ರತಿಷ್ಠಾನದ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ಕೂಡ ನೀಡಲಾಗಿತ್ತು. ಹಿಂದುತ್ವನಿಷ್ಠರು ವ್ಯಕ್ತಪಡಿಸಿರುವ ತೀವ್ರ ವಿರೋಧದಿಮದಾಗಿ ದೇವಸ್ಥಾನದ ಅಧ್ಯಕ್ಷರಾದ ನ್ಯಾಯವಾದಿ ಪಾಟಕರ ಇವರು ಫ್ರಾನ್ಸಿಸ್ ಇವರನ್ನು ಹುದ್ದೆಯಿಂದ ಕೆಳಗಿಳಿಸುವುದಾಗಿ ಭರವಸೆ ನೀಡಿದ್ದರು; ಆದರೆ ಅದಕ್ಕಿಂತ ಮೊದಲೇ ಫ್ರಾನ್ಸಿಸ್ ತಾವಾಗಿಯೇ ಹುದ್ದೆಗೆ ತ್ಯಾಗಪತ್ರವನ್ನು ನೀಡಿದ್ದರು.

1. ಶಂಭುದುರ್ಗ ಪ್ರತಿಷ್ಠಾನದ ಕಾರ್ಯಕರ್ತರು ಎಪ್ರಿಲ್ 16 ರಂದು ವಜ್ರೇಶ್ವರಿ ದೇವಸ್ಥಾನಕ್ಕೆ ತೆರಳಿ ಫ್ರಾನ್ಸಿಸ್ ಇವರ ನೇಮಕಾತಿಯನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದರು. ತದನಂತರ ಫ್ರಾನ್ಸಿಸ್ ಇವರು ದೇವಸ್ಥಾನದ ಅಧ್ಯಕ್ಷರಿಗೆ ತಮ್ಮ ತ್ಯಾಗಪತ್ರವನ್ನು ಸಲ್ಲಿಸಿದರು.

2. ಫ್ರಾನ್ಸಿಸ್ ಜೊಸೆಫ್ ಲೆಮಾಸ ಇವರ ನಿರ್ಣಯವನ್ನು ಶಂಭುದುರ್ಗ ಪ್ರತಿಷ್ಠಾನ ಸ್ವಾಗತಿಸಿತು.

3. ಠಾಣೆ ಜಿಲ್ಲೆಯಲ್ಲಿ ಕ್ರೈಸ್ತ ಮಿಷನರಿಗಳು ಆದಿವಾಸಿ ವಸತಿಗಳಲ್ಲಿ ಪ್ರಾರ್ಥನಾ ಸ್ಥಳಗಳನ್ನು ನಿರ್ಮಾಣ ಮಾಡಿ ಜನರೊಂದಿಗೆ ಸಂಪರ್ಕವನ್ನು ಹೆಚ್ಚಿಸಿದ್ದಾರೆ. ಅವರ ಸಂಪರ್ಕಕ್ಕೆ ಬರುವ ಹಿಂದೂ ಸಹೋದರರು ಕಾಲಾಂತರದಲ್ಲಿ ಹಿಂದೂ ಧರ್ಮವನ್ನು ನಂಬುವುದಿಲ್ಲ, ಇನ್ನೂ ಕೆಲವು ಜನರು ಹಿಂದೂ ಧರ್ಮವನ್ನು ತ್ಯಜಿಸುತ್ತಿರುವುದು ಕಂಡು ಬಂದಿದೆ.

4. `ಕ್ರೈಸ್ತ ಮಿಷನರಿಗಳಿಂದಾಗುವ ಹಿಂದೂಗಳ ಮತಾಂತರವನ್ನು ತಡೆಗಟ್ಟಲು ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಪ್ರಯತ್ನಿಸುತ್ತಿವೆ. ಹೀಗಿರುವಾಗ ವಜ್ರೇಶ್ವರಿ ದೇವಸ್ಥಾನದ ವೀಕ್ಷಕ ಹುದ್ದೆಗೆ ಕ್ರೈಸ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಹಿಂದೂ ಧರ್ಮದ ಮೇಲೆ ಮತ್ತೊಂದು ಸಂಕಟವನ್ನು ಎಳೆದುಕೊಳ್ಳುವಂತಹದ್ದಾಗಿದೆ’, ಎಂದು ಶಂಭುದುರ್ಗ ಪ್ರತಿಷ್ಠಾನವು ವಜ್ರೇಶ್ವರಿ ದೇವಸ್ಥಾನಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

5. `ಹಿಂದೂ ರಾಷ್ಟ್ರ ಸೇನೆ’ ಯ ಕಾರ್ಯಕರ್ತರು ಕೂಡ ಈ ಪ್ರಕರಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ತದನಂತರ ಪೊಲೀಸರು ಹಿಂದುತ್ವನಿಷ್ಠರ ಮೇಲೆ ಒತ್ತಡವನ್ನು ಹೇರಲು ಪ್ರಯತ್ನಿಸಿದ್ದರು. ಫ್ರಾನ್ಸಿಸ್ ಜೊಸೆಫ್ ಲೆಮಾಸ್ ಇವರ ತ್ಯಾಗಪತ್ರದ ಕಾರಣದಿಂದ ಈ ವಿವಾದ ಈಗ ಮುಕ್ತಾಯಗೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ..!

Tue Apr 18 , 2023
ಅಕ್ರಮವಾಗಿ ಸಾಗಾಟ ‌ಮಾಡುತ್ತಿದ್ದ ಅಪಾರ ಪ್ರಮಾಣದ ಗಾಂಜಾ ಜಪ್ತಿ. 1 ಕೋಟಿ 65 ಲಕ್ಷ ಮೌಲ್ಯದ 165 ಕೆಜಿ ಗಾಂಜಾ ಜಪ್ತಿ ಮಾಡಿದ ಬೀದರ್ ಪೊಲೀಸರು.  ಗಾಂಜಾ ಕಿಂಗ್ ಫಿನ್ ಪ್ರಮುಖ ಆರೋಪಿಯನ್ನು ಬಂಧಿಸಿದ ಪೊಲೀಸರು.  ಆಂದ್ರಪ್ರದೇಶದ ವಿಜಯವಾಡದಲ್ಲಿ ಗಾಂಜಾದ ಮೂಲ ಕಿಂಗ್ ಫಿನ್ ಬಂಧಿಸಿದ ಪೊಲೀಸರು. ಬೀದರ್ ಜಿಲ್ಲೆಯ ಚಿಟ್ಟಗುಪ್ಪ ತಾಲೂಕಿನ ಬೆಳಕೇರಾ ಬಳಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 156 ಕೆಜಿ ಗಾಂಜಾ ಜಪ್ತಿ. ಕಾರಿನಲ್ಲಿ ಹೈದ್ರಾಬಾದ್ ‌ನಿಂದ […]

Advertisement

Wordpress Social Share Plugin powered by Ultimatelysocial