CRICKET:ತಂಡದಿಂದ ಹೊರಬಿದ್ದ ಆಟಗಾರನನ್ನು ಕೊಂಡಾಡಿದ ರಾಹುಲ್;

ಕೆಎಲ್ ರಾಹುಲ್, ಸದ್ಯ ವಿಶ್ವ ಕ್ರಿಕೆಟ್‍ನಲ್ಲಿ ಭಾರಿ ಚರ್ಚೆಗೀಡಾಗಿರುವ ಆಟಗಾರರಲ್ಲೊಬ್ಬ. ಭಾರತ ಕ್ರಿಕೆಟ್ ತಂಡ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಮುಖ ಆಟಗಾರನಾಗಿರುವ ಕೆಎಲ್ ರಾಹುಲ್ ಇತ್ತೀಚೆಗಷ್ಟೇ ಭಾರತ ಏಕದಿನ ಹಾಗೂ ಟಿ ಟ್ವೆಂಟಿ ತಂಡಗಳ ಉಪನಾಯಕನಾಗಿ ಆಯ್ಕೆಯಾಗಿದ್ದರು.

ಹೌದು, ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ತ್ಯಜಿಸಿದ ಮೇಲೆ ರೋಹಿತ್ ಶರ್ಮಾ ಎರಡೂ ತಂಡಗಳಿಗೂ ನೂತನ ನಾಯಕನಾಗಿ ನೇಮಕಗೊಂಡರು. ಹೀಗಾಗಿ ರೋಹಿತ್ ಶರ್ಮಾ ನಿರ್ವಹಿಸುತ್ತಿದ್ದ ಉಪನಾಯಕನ ಸ್ಥಾನಗಳಿಗೆ ಕೆಎಲ್ ರಾಹುಲ್ ನೇಮಕಗೊಂಡರು.

ಇನ್ನು ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅಲಭ್ಯರಾದಾಗ ಟೀಮ್ ಇಂಡಿಯಾವನ್ನು ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಅವರೇ ನಾಯಕನಾಗಿ ಮುನ್ನಡೆಸಿದರು. ಆದರೆ ದುರಾದೃಷ್ಟವಶಾತ್ ರಾಹುಲ್ ನಾಯಕನಾಗಿ ಮುನ್ನಡೆಸಿದ್ದ ಈ ಸರಣಿಯಲ್ಲಿ ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳನ್ನು ಕೂಡ ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದೆ. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾಗ ಕೆಎಲ್ ರಾಹುಲ್ ಆ ಪಂದ್ಯದ ನಾಯಕತ್ವವನ್ನು ವಹಿಸಿಕೊಂಡಿದ್ದರು ಹಾಗೂ ಆ ಪಂದ್ಯದಲ್ಲಿಯೂ ಕೂಡ ಭಾರತ ತಂಡ ಸೋಲನ್ನು ಅನುಭವಿಸುತ್ತು.

ಹೀಗೆ ನಾಯಕನಾಗಿ ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಲ್ಲಿ ಕಣಕ್ಕಿಳಿದು ಹೀನಾಯ ಆರಂಭವನ್ನು ಪಡೆದುಕೊಂಡಿರುವ ಕೆಎಲ್ ರಾಹುಲ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜಿಯಂಟ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹೌದು, ನೂತನ ಫ್ರಾಂಚೈಸಿಯಾದ ಲಕ್ನೋ ಕೆಎಲ್ ರಾಹುಲ್ ಅವರನ್ನು 17 ಕೋಟಿಗೆ ಖರೀದಿಸಿದ್ದು, ನಾಯಕನ ಪಟ್ಟವನ್ನು ನೀಡಿದೆ. ಇನ್ನು ದಕ್ಷಿಣ ಆಫ್ರಿಕಾ ಪ್ರವಾಸ ಮುಕ್ತಾಯಗೊಂಡ ನಂತರ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾಗಿ ಮಾತನಾಡಿರುವ ಕೆ ಎಲ್ ರಾಹುಲ್ ಈ ಕೆಳಕಂಡ ಮೂವರು ಆಟಗಾರರ ಕುರಿತು ಮಾತನಾಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬೇಕಾದ ಆಟಗಾರರು ಇವರು ಎಂದು ಹೊಗಳಿದ್ದಾರೆ.

ಕಗಿಸೋ ರಬಾಡ ಕುರಿತು ಮೆಚ್ಚುಗೆಯ ಸುರಿಮಳೆಗೈದ ಕೆಎಲ್ ರಾಹುಲ್“ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಗಿಸೋ ರಬಾಡ ಉತ್ತಮ ಪ್ರದರ್ಶನವನ್ನು ನೀಡಿ ತಂಡದ ಯಶಸ್ಸಿನಲ್ಲಿ ದೊಡ್ಡ ಮಟ್ಟದ ಪಾತ್ರವನ್ನು ನಿರ್ವಹಿಸಿರುವುದನ್ನು ನಾವು ನೀವೆಲ್ಲಾ ಕಂಡಿದ್ದೇವೆ. ಗಂಟೆಗೆ 145 ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಎಸೆಯಬಲ್ಲ ಸಾಮರ್ಥ್ಯವಿರುವ ಕಗಿಸೋ ರಬಾಡ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರತಿ ಫ್ರಾಂಚೈಸಿಯೂ ಸಹ ತಮ್ಮ ತಂಡದಲ್ಲಿ ಹೊಂದಲು ಇಚ್ಛಿಸುತ್ತದೆ” ಎಂದು ಈ ಬಾರಿಯ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ರಿಟೈನ್ ಆಗದೇ ತಂಡದಿಂದ ಹೊರಬಿದ್ದಿರುವ ಕಗಿಸೋ ರಬಾಡ ಕುರಿತು ಕೆಎಲ್ ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾರ್ಕೋ ಜೆನ್ಸೆನ್ ದೊಡ್ಡ ಆಟಗಾರ ಆಗ್ತಾನೆ ಎಂದ ರಾಹುಲ್

ಇನ್ನೂ ಮುಂದುವರೆದು ದಕ್ಷಿಣ ಆಫ್ರಿಕಾದ ಮತ್ತೋರ್ವ ಆಟಗಾರನನ್ನು ಹೊಗಳಿರುವ ಕೆಎಲ್ ರಾಹುಲ್ ಆತ ವಿಶ್ವ ಕ್ರಿಕೆಟ್‍ನ ಭವಿಷ್ಯದಲ್ಲಿ ದೊಡ್ಡ ಆಟಗಾರನಾಗಿ ನಿಲ್ಲುತ್ತಾನೆ ಎಂದಿದ್ದಾರೆ. “ಮಾರ್ಕೋ ಜೆನ್ಸೆನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕೆಲ ಪಂದ್ಯಗಳನ್ನು ಆಡಿದ್ದಾರೆ ಹಾಗೂ ಇತ್ತೀಚಿನ ದಿನಗಳಲ್ಲಿ ತನ್ನ ಪ್ರತಿಭೆಯಿಂದ ಗುರುತಿಸಿಕೊಂಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಕ್ರಿಕೆಟ್ ವೀಕ್ಷಕರಿಗೆ ತನ್ನ ಮೇಲಿದ್ದ ಅನುಮಾನವನ್ನು ತೊಡೆದು ಹಾಕಿದ್ದಾರೆ. ಈತನ ಕುರಿತು ಸರಣಿ ಮುಗಿದ ನಂತರ ಡ್ರೆಸಿಂಗ್ ರೂಮ್ ಒಳಗೂ ಕೂಡ ಚರ್ಚೆಗಳನ್ನು ನಡೆಸುತ್ತಿದ್ದೆವು. ಈತ ಮುಂದೊಂದು ದಿನ ದೊಡ್ಡ ಆಟಗಾರನಾಗುತ್ತಾನೆ” ಎಂದು ಕೆಎಲ್ ರಾಹುಲ್ ಹೊಗಳಿದ್ದಾರೆ.

ವಾನ್ ಡರ್ ಡಸನ್ ಕುರಿತು ಕೆಎಲ್ ರಾಹುಲ್ ಹೇಳಿದ್ದಿಷ್ಟು

ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರ ವಾನ್ ಡರ್ ಡಸನ್ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ವಾನ್ ಡರ್ ಡಸನ್ ಅತ್ಯುತ್ತಮ ಆಟವನ್ನು ಆಡುತ್ತಿದ್ದು, ಸ್ಪಿನ್ ಬೌಲಿಂಗ್ ದಾಳಿಗೆ ಸರಾಗವಾಗಿ ಬ್ಯಾಟ್ ಬೀಸಬಲ್ಲ ಉತ್ತಮ ಗುಣವನ್ನು ಹೊಂದಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳು ಹೆಚ್ಚಾಗಿ ಭಾರತದ ಪಿಚ್‌ಗಳಲ್ಲಿ ನಡೆಯುವುದರಿಂದ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ ದಾಳಿಗೆ ಪ್ರತ್ಯುತ್ತರ ನೀಡಬಲ್ಲಂತಹ ಸಾಮರ್ಥ್ಯವನ್ನು ವಾನ್ ಡರ್ ಡಸನ್ ಹೊಂದಿದ್ದಾರೆ” ಎಂದು ಕೆಎಲ್ ರಾಹುಲ್ ಹೊಗಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಶಾಂತ್‌ ಕಿಶೋರ್‌:2024ರಲ್ಲಿ ಬಿಜೆಪಿಯನ್ನು‌ ಸೋಲಿಸಬಹುದೇ?

Tue Jan 25 , 2022
ನವದೆಹಲಿ: 2024ರಲ್ಲಿ ನಡೆಯಲಿರುವ ಸಾರ್ವ‌ತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದು. ಆದರೆ, ಸದ್ಯ ಇರುವ ಪ್ರತಿಪಕ್ಷಗಳು ಮತ್ತು ಮೈತ್ರಿಗಳಿಂದ ಅದು ಸಾಧ್ಯವಿಲ್ಲ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ. ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಿಶೋರ್‌, 2024ರಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ? ಎಂದರೆ ಖಚಿತವಾಗಿ ಹೌದು ಎನ್ನಬಹುದು. ಆದರೆ, ಪ್ರಸ್ತುತ ಇರುವ ಪಕ್ಷಗಳು ಮತ್ತು ಮೈತ್ರಿಗಳಿಂದ ಇದು ಬಹುಶಃ ಇಲ್ಲ ಎಂದು ಹೇಳಿದ್ದಾರೆ. ಪ್ರಶಾಂತ್‌ ಅವರು, 2014ರ ಲೋಕಸಭೆ […]

Advertisement

Wordpress Social Share Plugin powered by Ultimatelysocial