ಹೇರ್ ಸ್ಟೈಲ್ ಬದಲಾಯಿಸುತ್ತಿರಲಿಲ್ಲಅಂಬಿ!

ರೆಬಲ್ ಸ್ಟಾರ್ ಅಂಬರೀಶ್ (Rebel Star Ambareesh) ಎಲ್ಲ ರೀತಿಯ ಪಾತ್ರಗಳನ್ನ ಮಾಡಿದ್ದಾರೆ. ಪುಟ್ಟಣ್ಣನವರ ನಾಗರಹಾವು ಚಿತ್ರದಲ್ಲಿ ಜಲೀಲನಾಗಿ ಎಂಟ್ರಿ ಕೊಟ್ರು. ಅಂತ (Ambareesh Retro Story) ಚಿತ್ರದಲ್ಲಿ ಮಾಡಿರೋ ಪಾತ್ರ ಈಗಲೂ ಮೈಲುಗಲ್ಲೇ ಆಗಿದೆ.

ಈ ಒಂದು ಪಾತ್ರವನ್ನ ಅನೇಕರು ಟ್ರೈ ಮಾಡಿದ್ರು ಕೂಡ ಅದು ಅಂಬಿ (Ambareesh Film Unknow Facts) ರೀತಿ ಬರೋದಿಲ್ಲ ಬಿಡಿ. ರಂಗನಾಯಕಿ ಚಿತ್ರದಲ್ಲಿ ಅಣ್ಣನಾಗಿಯೇ ಕಾಣಿಸಿಕೊಂಡಿರೋದು ಎಲ್ಲರಿಗೂ ಗೊತ್ತಿದೆ. ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ವಿಶೇಷವಾಗಿಯೇ ಕಾಣಿಸಿಕೊಂಡ್ರು. ಆದರೂ ಅಂಬರೀಶ್ ಆ ಒಂದು  ಪಾತ್ರವನ್ನ ಮತ್ತೆ ಮತ್ತೆ ಮಾಡಲೇಬೇಕಿತ್ತು. ಹಾಗೆ ಒಂದೇ ರೀತಿಯ ಪಾತ್ರವನ್ನ 70 ಬಾರಿ ಮಾಡಿದ್ದಾರೆ. ಆ ಪಾತ್ರ ಯಾವುದು? ಇಲ್ಲಿದೆ ಒಂದಷ್ಟು ಹಳೆ ಕಥೆ, .ರೆಬಲ್ ಸ್ಟಾರ್ ಹೇರ್ ಸ್ಟೈಲಿಸ್ಟ್ ಯಾರು ಗೊತ್ತೇ?
ರೆಬಲ್ ಸ್ಟಾರ್ ಅಂಬರೀಶ್ ಹೇರ್ ಸ್ಟೈಲ್ ವಿಶೇಷವಾಗಿಯೇ ಇತ್ತು. ಅದನ್ನ ಅಂಬರೀಶ್ ಚೆನ್ನಾಗಿಯೇ ಮೆಂಟೇನ್ ಮಾಡ್ತಾ ಇದ್ದರು. ಮೈಸೂರಿನ ಚಲಂ ಅನ್ನೋ ವ್ಯಕ್ತಿನೇ ಅಂಬರೀಶ್ ಹೇರ್ ಸ್ಟೈಲ್ ಮಾಡ್ತಿದ್ದರು.ರೆಬಲ್ ಸ್ಟಾರ್ ಹೇರ್ ಸ್ಟೈಲಿಸ್ಟ್ ಯಾರು ಗೊತ್ತೇ?ಚಲಂ ಒಂದು ರೀತಿ ವಿಶೇಷ ವ್ಯಕ್ತಿನೇ ಆಗಿದ್ದರು. ಅಂಬರೀಶ್ ಸಲೂನ್​ಗೆ ಬಂದಾಗ ಅಣ್ಣ ಆ ಸ್ಟೈಲ್ ಮಾಡ್ಲಾ? ಈ ಸ್ಟೈಲ್ ಮಾಡ್ಲಾ? ಹೀಗೆ ಬೇರೆ ಬೇರೆ ಹೇರ್ ಸ್ಟೈಲ್ ಮಾಡ್ಲಾ ಅಂತಲೇ ಚಲಂ ಕೇಳ್ತಿದ್ದರು.ಅಂಬಿ ಅಣ್ಣಾ “ದೇವಾನಂದ್” ಹೇರ್ ಸ್ಟೈಲ್ ಮಾಡ್ಲಾ!ಬಾಲಿವುಡ್​​ನಲ್ಲಿ ಆಗೆಲ್ಲ ದೇವಾನಂದ್ ಫೇಮಸ್ ಆಗಿದ್ದರು. ಅವರ ಪ್ರತಿ ಸ್ಟೈಲ್ ಟ್ರೆಂಡ್ ಆಗುತ್ತಿದ್ದವು. ಹೇರ್ ಸ್ಟೈಲ್ ಅಂತೂ ವೇರಿ ಫೇಮಸ್ ಆಗಿರುತ್ತಿತ್ತು.ಅದನ್ನ ಚಲಂ ಎಲ್ಲಿ ನೋಡಿದ್ರೋ ಏನೋ. ಆದರೆ ಅಂಬರೀಶ್ ಸಲೂನ್​ಗೆ ಬಂದಾಗ, ಚಲಂ ಕೇಳುತ್ತಿದದ್ದು ಒಂದೇ ಮಾತು, ಅಣ್ಣ ನಾನು ನಿಮಗೆ ದೇವಾನಂದ್ ಹೇರ್ ಸ್ಟೈಲ್ ಮಾಡ್ಲಾ ಅಂತಲೇ ಕೇಳ್ತಿದ್ರು. ಆದರೆ ಅಂಬಿ ಇದಕ್ಕೆ ಒಪ್ಪದೇ ಬೇಡ್ವೋ, ನನಗೆ ಆ ಹೇರ್ ಸ್ಟೈಲ್ ಬೇಡ ಅಂತಲೇ ತಮ್ಮದೇ ಶೈಲಿಯಲ್ಲಿ ತಳ್ಳಿಹಾಕಿ ಬಿಡುತ್ತಿದ್ದರು.ಅಂಬಿ ಯಾಕೆ ದೇವಾನಂದ್ ಹೇರ್ ಸ್ಟೈಲ್ ಬೇಡ ಅಂತಿದ್ರು?ಅಂಬರೀಶ್ ಬೇರೆ ಬೇರೆ ಹೇರ್ ಸ್ಟೈಲ್ ಅನ್ನ ಮೆಂಟೇನ್ ಮಾಡ್ತಾನೇ ಇರಲಿಲ್ಲ. ಇದಕ್ಕೆ ಕಾರಣವೂ ಇದೆ. ಅದು ಬೇರೆ ಏನೋ ಅಲ್ಲ. ಅಂದಿನ ಟೈಮ್​ ನಲ್ಲಿ ಅಂಬರೀಶ್ ಒಂದೇ ರೀತಿಯ ಪಾತ್ರವನ್ನೆ ಮಾಡ್ತಾ ಇದ್ದರು. ಅದಕ್ಕೆ ಹೇರ್ ಸ್ಟೈಲ್ ಕೂಡ ಒಂದೇ ರೀತಿ ಮೆಂಟೇನ್​ ಮಾಡ್ತಾನೇ ಇದ್ದರು.70 ಚಿತ್ರಗಳಲ್ಲಿ ಅಂಬರೀಶ್ ಪೊಲೀಸ್ ಇನ್ಸಪೆಕ್ಟರ್!ಅಂಬರೀಶ್ 70 ಚಿತ್ರಗಳಲ್ಲಿ ಪೊಲೀಸ್ ಇನ್ಸಪೆಕ್ಟರ್ ರೋಲ್ ಮಾಡಿದ್ದರು. ಈ ಒಂದು ಕಾರಣದಿಂದಲೇ ಅಂಬರೀಶ್ ಪೊಲೀಸ್ ಇನ್ಸಪೆಕ್ಟರ್ ಹೇರ್ ಸ್ಟೈಲ್ ಮೆಂಟೇನ್ ಮಾಡ್ತಾ ಇದ್ದರು.ಅಂಬಿ ಅಣ್ಣಾ “ದೇವಾನಂದ್” ಹೇರ್ ಸ್ಟೈಲ್ ಮಾಡ್ಲಾ!ಒಂದೇ ರೀತಿಯ ಪಾತ್ರ ಮಾಡ್ತಿದ್ದೀನಿ ಅನ್ನೋ ಫೀಲ್ ಏನೂ ಅಂಬರೀಶ್ ಅವರಿಗೆ ಇರಲಿಲ್ಲ. ಹಾಗಾಗಿಯೇ ಅಂಬಿ ಒಂದೇ ರೀತಿ ಪಾತ್ರ ಮಾಡ್ತಾ ಹೋದ್ರು. ಅದರಿಂದ ಜನ ಕೂಡ ಅಂಬರೀಶ್ ಅಂದ್ರೆ ಪೊಲೀಸ್ ಅನ್ನೋ ಮಟ್ಟಿಗೆ ಕ್ರೇಜ್ ಕ್ರಿಯೇಟ್ ಮಾಡಿದ್ದರು.ಅಂಬಿ ಬಳಿಕ ಪ್ರಭಾಕರ್ ಪೊಲೀಸ್ ಪಾತ್ರದಲ್ಲಿ ಮಿಂಚಿಂಗ್ರೆಬಲ್ ಸ್ಟಾರ್ ಅಂಬರೀಶ್ ಆದ್ಮೇಲೆ ಟೈಗರ್ ಪ್ರಭಾಕರ್ ಪೊಲೀಸ್ ಪಾತ್ರ ಮಾಡ್ತಾ ಇದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂಬರೀಶ್ ಬೇಸರ ಏನೂ ಮಾಡಿಕೊಳ್ಳಲಿಲ್ಲ. ಪ್ರಭಾಕರ್ ಅವರಿಗೆ ತಮ್ಮದೇ ರೀತಿಯಲ್ಲಿ ಸಪೋರ್ಟ್ ಮಾಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಾಟ್ಸಾಪ್​ನಲ್ಲಿ ಸುಲಭದಲ್ಲಿ ಲೈವ್​ ಲೊಕೇಶನ್​ ಶೇರ್​ ಮಾಡೋದು ಹೇಗೆ?

Wed Jan 11 , 2023
ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದ ನಂತರ, ವಿವಿಧ ಪ್ರದೇಶಗಳನ್ನು ಸುತ್ತಲು ತುಂಬಾ ಸುಲಭವಾಗಿದೆ.ಪ್ರಯಾಣದ ಮಾರ್ಗಗಳು ತಿಳಿದಿಲ್ಲದಿದ್ದರೂ, ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್ ನಕ್ಷೆಗಳು ಮಾರ್ಗವನ್ನು ತೋರಿಸುತ್ತದೆ. ಅದೇ ರೀತಿ, ಸುರಕ್ಷತೆಗಾಗಿ ನಾವು ನಮ್ಮ ಲೈವ್ ಸ್ಥಳವನ್ನು ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಹಂಚಿಕೊಳ್ಳಬಹುದು.. ಈ ಮೂಲಕ ಅವರು ನಮ್ಮ ಚಲನವಲನಗಳ ಬಗ್ಗೆ ನಿರಂತರವಾಗಿ ತಿಳಿಯಬಹುದಾಗಿದೆ.ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸಾಪ್​ ಸಹ ಈ ರೀತಿಯ ವೈಶಿಷ್ಟ್ಯವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.ಈ ಮೂಲಕ ವಾಟ್ಸಾಪ್ ಬಳಕೆದಾರರು […]

Advertisement

Wordpress Social Share Plugin powered by Ultimatelysocial