ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅನುಷ್ಕಾ;

ಅನುಷ್ಕಾ ಶರ್ಮಾ ಬಗ್ಗೆ ವಿರಾಟ್ ಕೊಹ್ಲಿ ಅನೇಕ ಬಾರಿ ಮಾತಾಡಿದ್ದಾರೆ.

ಅನುಷ್ಕಾ ಸಹ ಸೋಶಿಯಲ್ ಮೀಡಿಯಾದಲ್ಲಿ ಪತಿಯನ್ನು ಕೊಂಡಾಡಿದ್ದಾರೆ. ಇದೀಗ ವಿರಾಟ್, ಸಂಸಾರಕ್ಕಾಗಿ ಅನುಷ್ಕಾ ಶರ್ಮಾ ಮಾಡಿದ ಪ್ರೀತಿ ತ್ಯಾಗವನ್ನು ನೆನಪು ಮಾಡಿಕೊಂಡಿದ್ದಾರೆ.ಕೆಲ ವರ್ಷಗಳ ಡೇಟಿಂಗ್ ಬಳಿಕ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. 2021ರ ಜನವರಿಯಲ್ಲಿ ಅನುಷ್ಕಾ ಹಾಗೂ ವಿರಾಟ್ ದಂಪತಿ ಪೋಷಕರಾಗಿ ಪ್ರಮೋಷನ್ ಕೂಡ ಪಡೆದಿದ್ದಾರೆ.

ಮುದ್ದಾದ ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ.ಮಗಳು ಹುಟ್ಟಿದ ಮೇಲೆ ಬದುಕಲ್ಲಿ ಬಹಳ ಬದಲಾವಣೆ ಆಗಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಅನುಷ್ಕಾ ಶರ್ಮಾ ನಟಿಯಾದ್ರು ಮಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂದು ಪತ್ನಿಯನ್ನು ವಿರಾಟ್ ಕೊಹ್ಲಿ ಕೊಂಡಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಮಾತಾಡಿದ ವಿರಾಟ್ ಕೊಹ್ಲಿ, ಕಳೆದ 2 ವರ್ಷಗಳಲ್ಲಿ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಿದೆ ಎಂದ್ರು. ಮಗಳು ವಮಿಕಾ ಆಗಮನ ಬದುಕನ್ನೇ ಬದಲಿಸಿತು. ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗ ದೊಡ್ಡದು ಎಂದು ಕೊಹ್ಲಿ ಹೇಳಿದ್ದಾರೆ.ಅಲ್ಲ ಎನಿಸಿದೆ. ನೀವು ಹೇಗಿದ್ದೀರೋ ಹಾಗೆ ನಿಮ್ಮ ಕುಟುಂಬ ನಿಮ್ಮನ್ನು ಒಪ್ಪಿಕೊಳ್ಳುತ್ತದೆ ಎಂದಾದರೆ ಅವರಿಂದ ಅದಕ್ಕಿಂತ ಹೆಚ್ಚಿನದ್ದನ್ನು ನೀವು ನಿರೀಕ್ಷಿಸಬಾರದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆರ್ಸಿಬಿ ಪಾಡ್ ಕಾಸ್ಟ್​ನಲ್ಲಿ ಮಾತಾಡಿದ ಕೊಹ್ಲಿ, ನನಗೆ ಅನುಷ್ಕಾ ದೊಡ್ಡ ಸ್ಪೂರ್ತಿಯಾಗಿದ್ದಾರೆ. ಮನೆ ಸದಸ್ಯರೇ ನಮ್ಮ ಮೊದಲ ಸ್ಪೂರ್ತಿಯಾಗಿರುತ್ತಾರೆ. ಒಬ್ಬರನ್ನು ಪ್ರೀತಿಸಲು ಆರಂಭಿಸಿದಾಗ ಅನೇಕ ಬದಲಾವಣೆ ಆಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆಜೀವನದ ಬಗ್ಗೆ ಅನುಷ್ಕಾ ದೃಷ್ಟಿಕೋನ ಭಿನ್ನವಾಗಿದೆ. ವಿಷಯಗಳನ್ನು ಒಪ್ಪಿಕೊಳ್ಳಲು ನಾನು ಅವರಿಂದ ಕಲಿತೆ ಎಂದಿದ್ದಾರೆ ವಿರಾಟ್. ಮದುವೆ ಬಳಿಕ ಅವರು ಕುಟುಂಬದಲ್ಲಿ ಜೊತೆ ಬ್ಯುಸಿ ಆದ ಅನುಷ್ಕಾ ಶೆಟ್ಟಿ, ಸಿನಿಮಾ ಮಾಡೋದನ್ನು ಕಡಿಮೆ ಮಾಡಿದ್ದಾರೆ.ಮಗಳ ಆರೈಕೆಯಲ್ಲಿ ಬ್ಯುಸಿ ಆಗಿರುವ ಅನುಷ್ಕಾ ಶರ್ಮಾ ಕುಟುಂಬಕ್ಕಾಗಿ ವೃತ್ತಿ ಜೀವನವನ್ನು ತ್ಯಾಗ ಮಾಡಿದ್ದಾರೆ. ನಿಜಕ್ಕೂ ಅನುಷ್ಕಾ ತ್ಯಾಗ ದೊಡ್ಡದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಪತ್ನಿ ಬಗ್ಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾತು ಕೇಳಿದ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜ್ವರವೆಂದು ಮಗುವನ್ನು ಹೊತ್ತು ಜಿಲ್ಲಾಸ್ಪತ್ರೆಗೆ ಓಡೋಡಿ ಬಂದ ಮಹಿಳೆ;

Wed Mar 1 , 2023
ಹಾವೇರಿ:7ನೇ ವೇತನ ಆಯೋಗದ ವರದಿ ಜಾರಿಗಾಗಿ ಬುಧವಾರ (ಮಾ.1) ಬೆಳಗ್ಗೆಯಿಂದ ರಾಜ್ಯ ಸರ್ಕಾರಿ ನೌಕಕರು ಮುಷ್ಕರ  ಕೈಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿದರೆ ಉಳಿದ ಸೇವೆಗಳು ಲಭ್ಯವಿರಲಿಲ್ಲ. ಇದೇ ವೇಳೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬರು ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಹೊತ್ತು ಜಿಲ್ಲಾಸ್ಪತ್ರೆಗೆ ಓಡೋಡಿ ಬಂದಿದ್ದು, ತುರ್ತು ಚಿಕಿತ್ಸೆಯಷ್ಟೇ ಲಭ್ಯವಾಗಿದೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮೆಳಾಗಟ್ಟಿ ಗ್ರಾಮದ ನಿವಾಸಿಯಾಗಿರುವ ಮಹಿಳೆಯು ರಾತ್ರಿಯಿಂದ ತೀವ್ರ ಜ್ವರದಿಂದ ಬಳಲುತ್ತಿರುವ […]

Advertisement

Wordpress Social Share Plugin powered by Ultimatelysocial