ʼಈ ನಟನʼ ಜೊತೆ ʼಅನುಷ್ಕಾ ಸಂಬಂಧʼ..!

ಟಾಲಿವುಡ್‌ ಸ್ಟಾರ್‌ ನಟ ಪ್ರಭಾಸ್ ಮತ್ತು ಕರಾವಳಿ ಬೆಡಗಿ ನಟಿ ಅನುಷ್ಕಾ ಶೆಟ್ಟಿ ಸಂಬಂಧದ ಸುದ್ದಿಗಳು ಆಗಾಗ ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ತೆಲುಗಿನ ʼಬಿಲ್ಲಾʼ ಸಿನಿಮಾದಿಂದ ಒಂದಾದ ಜೋಡಿ ಮದುವೆ ಆಗ್ತಾರೆ ಅಂತ ಅವರ ಅಭಿಮಾನಿಗಳು ಬೆಟ್ಟದಷ್ಟು ಆಸೆಯನ್ನು ಇಟ್ಟುಕೊಂಡು ಕುಳಿತಿದ್ದಾರೆ.

ಆದ್ರೆ ಇಬ್ಬರು ಜಸ್ಟ್‌ ಬೆಸ್ಟ್‌ ಫ್ರೆಂಡ್ಸ್‌ ಅಂತ ಹೇಳುವುದುನ್ನು ಬಿಟ್ರೆ ಮದುವೆ ವಿಚಾರವಾಗ್ಲಿ ಲವ್‌ ಮ್ಯಾಟರ್‌ ಆಗ್ಲಿ.. ಯಾವುದೇ ವಿಚಾರ ಕುರಿತು ಚಕಾರ ಎತ್ತುತ್ತಿಲ್ಲ.

2009 ರಲ್ಲಿಳಲ್ಲಿ ಇಬ್ಬರೂ ಭೇಟಿಯಾದರು. ಇಬ್ಬರ ಕ್ರ್ಯಾಕ್ಲಿಂಗ್ ಕೆಮಿಸ್ಟ್ರಿ ಸಿನಿಮಾವನ್ನು ಬ್ಲಾಕ್ಬಸ್ಟರ್‌ ಮಾಡಿತ್ತು. ಬಾಕ್ಸಾಫಿಸ್‌ನಲ್ಲಿ ಈ ಸಿನಿಮಾ ಸಖತ್‌ ಸದ್ದು ಮಾಡಿತ್ತು. ಈ ಚಿತ್ರದ ಯಶಸ್ವಿನ ನಂತರ ಮಿರ್ಚಿ, ಬಾಹುಬಲಿ: ದಿ ಬಿಗಿನಿಂಗ್ ಮತ್ತು ಬಾಹುಬಲಿ: ದಿ ಕನ್‌ಕ್ಲೂಷನ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಇಬ್ಬರ ಜೋಡಿ ತೆರೆ ಮೇಲೆ ಮೋಡಿ ಮಾಡಿತ್ತು. ಈ ಸ್ಟಾರ್‌ ಜೋಡಿ ನೋಡಿ, ಇಬ್ರು ಮದುವೆಯಾದ್ರೆ ಸೂಪರ್‌ ಆಗಿರುತ್ತೆ.. ಅಂತ ಇವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು.

ಆದ್ರೆ, Siasat.com ನಲ್ಲಿನ ಇತ್ತೀಚಿನ ವರದಿಯ ಪ್ರಕಾರ, ಪ್ರಭಾಸ್ ಮತ್ತು ಅನುಷ್ಕಾ ಸಂಬಂಧ ಮುರಿದುಬಿದ್ದಿದೆ ಎಂದು ಹೇಳಲಾಗಿದೆ. ಇಬ್ಬರು ನಟರು ಯಾವಾಗಲೂ ʼಒಳ್ಳೆಯ ಸ್ನೇಹಿತರುʼ ಎಂದು ಹೇಳಿಕೊಂಡಿದ್ದರೂ ಸಹ, ಅವರ ಲವ್‌ ಮ್ಯಾಟರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಚಾಟ್ ಶೋಗಳಲ್ಲಿ ಬಿಸಿ ಚರ್ಚೆಯ ವಿಷಯವಾಗಿದೆ. ಈ ಮದ್ಯ ಹಿರಿಯ ನಾಯಕನೊಂದಿಗಿನ ಅನುಷ್ಕಾ ಸಂಬಂಧದ ವದಂತಿಗಳೇ ಪ್ರಭಾಸ್ ಮತ್ತು ಅನುಷ್ಕಾ ನಡುವಿನ ಭಿನ್ನಾಭಿಪ್ರಾಯಗಳಿಗೆ ಕಾರಣ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ಅನುಷ್ಕಾ ಸಂಬಂಧದ ಬಗ್ಗೆ ವದಂತಿಗಳ ಪರಿಣಾಮವಾಗಿ ಪ್ರಭಾಸ್ ಅನುಷ್ಕಾ ಅವರಿಂದ ದೂರವಾದ್ರು ಅಂತ ವರದಿಯಾಗಿದೆ.

ಇತ್ತೀಚಿಗೆ ಬಾಲಿವುಡ್ ನಟಿ ಕೃತಿ ಸನೋನ್ ಜೊತೆ ಪ್ರಭಾಸ್‌ ಡೇಟಿಂಗ್‌ ಮಾಡುತ್ತಿದ್ದಾರೆ. ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ವದಂತಿಗಳು ಕೇಳಿಬಂದಿದ್ದವು. ಅಲ್ಲದೆ, ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಟ್ವೀಟ್ ಮಾಡಿ, ಕೃತಿ ಸನನ್ ಮತ್ತು ಪ್ರಭಾಸ್ ಅವರ ನಿಶ್ಚಿತಾರ್ಥವಾಗಲಿದ್ದಾರೆ ಎನ್ನುವ ವದಂತಿ ಹಬ್ಬಿಸಿದ್ದರು. ಸದ್ಯ ಆದಿಪುರುಷ ಚಿತ್ರದಲ್ಲಿ ಪ್ರಭಾಸ್ ಮತ್ತು ಕೃತಿ ನಟಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೋಚಕ ಸೆಣೆಸಾಟದಲ್ಲಿ ದಕ್ಷಿಣ ಆಫ್ರಿಕಾಗೆ ಭರ್ಜರಿ ಗೆಲುವು,

Fri Mar 3 , 2023
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್ ಮೊದಲ ಪಂದ್ಯದಲ್ಲಿ ಸೋಲಿನ ರುಚಿ ಕಂಡಿದೆ. ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ವೆಸ್ಟ್ ಇಂಡೀಸ್ ಬ್ಯಾಟಿಂಗ್‌ನಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ವೈಫಲ್ಯ ಅನುಭವಿಸಿದ ಕಾರಣ 87 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿದಂತಾಗಿದೆ. ಈ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಅದ್ಭುತ ಆರಂಭ […]

Advertisement

Wordpress Social Share Plugin powered by Ultimatelysocial