ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.

ರಾಜ್ಯದ ಆರು ಜಿಲ್ಲೆಗಳ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಿಗೆ ತರಬೇತಿ ನೀಡುವುದಕ್ಕಾಗಿ ಕ್ರೀಡಾ ತರಬೇತುದಾರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ರಾಮನಗರ, ಯಾದಗಿರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಹಾವೇರಿ ಜಿಲ್ಲೆಗಳ ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾ ತರಬೇತುದಾರರ ನೇಮಕಕ್ಕೆ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮುಂದಾಗಿದೆ.

ನೇಮಕ ಆದೇಶ ನಿಡುವ ದಿನಾಂಕದಿಂದ 2023ರ ಅಂತ್ಯದವರೆಗೆ ಮಾಸಿಕ ಸಂಚಿತ ವೇತನ, ಗುತ್ತಿಗೆ ಆಧಾರದ ಮೇಲೆ ಕ್ರೀಡಾ ತರಬೇತುದಾರರನ್ನು ನೇಮಿಸಿಕೊಳ್ಳಲಿದ್ದು, ದೇಶದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಾಹಿತಿ ನೀಡಿದೆ.

15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ..13,363 ಅಭ್ಯರ್ಥಿಗಳು ಆಯ್ಕೆ
ಹುದ್ದೆಗಳ ವಿವರ
ಹಾಕಿ ಕ್ರೀಡೆಗೆ ಪುರುಷ ತರಬೇತುದಾರರು – ಹುದ್ದೆಗಳ ಸಂಖ್ಯೆ -2
ಅಥ್ಲೆಟಿಕ್ಸ್ ತರಬೇತುದಾರರು – ಹುದ್ದೆಗಳ ಸಂಖ್ಯೆ -2
ಫುಟ್ಬಾಲ್ ತರಬೇತುದಾರರು – ಹುದ್ದೆಗಳ ಸಂಖ್ಯೆ – 1
ಮಹಿಳಾ ಕುಸ್ತಿ ಮಹಿಳಾ ತರಬೇತುದಾರರು – ಹುದ್ದೆಗಳ ಸಂಖ್ಯೆ – 1
ವೇತನ ವಿವರ
ಮಾಸಿಕ ಸಂಚಿತ ವೇತನ – 39,960 ರೂಪಾಯಿ.
ದಲ್ಲಿ ಮತ್ತೇ ಭಾರಿ ಪ್ರಮಾಣದ ಉದ್ಯೋಗ ಕಡಿತ : ಅಮೆಜಾನ್ ಸಿಇಓ ಎಚ್ಚರಿಕೆ
ಅರ್ಹತಾ ಮಾನದಂಡಗಳನ್ನು ಪ್ರಾಧಿಕಾರ ವಿಧಿಸಿದ್ದು, ಅರ್ಹರು ನವೆಂಬರ್ 30ರ ಸಂಜೆ ನಾಲ್ಕು ಗಂಟೆಯ ಒಳಗಾಗಿ ಅರ್ಜಿ ಹಾಗು ಪೂರಕ ದಾಖಲೆಗಳೊಂದಿಗೆ ಮಹಾ ನಿರ್ದೇಶಕರು, ಕರ್ನಾಟಕ ಕ್ರೀಡಾ ಪ್ರಾಧಿಕಾರ, ರಾಜ್ಯ ಯುವ ಕೇಂದ್ರ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
ಡಿಸೆಂಬರ್ 9 ರಂದು ಸಂದರ್ಶನ ನಡೆಸಲು ನಿರ್ಧರಿಸಲಾಗಿದ್ದು. ಅಭ್ಯರ್ಥಿಗಳು ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈಲು, ಬಸ್ಸಿನಲ್ಲಿ ಸೀಟು ಹಿಡಿಯಲು ಕೆಲವೊಮ್ಮೆ ಎಷ್ಟು ಹರಸಾಹಸ ಪಡಬೇಕಾಗುತ್ತದೆ.

Wed Jan 11 , 2023
ರೈಲು, ಬಸ್ಸಿನಲ್ಲಿ ಸೀಟು ಹಿಡಿಯಲು ಕೆಲವೊಮ್ಮೆ ಎಷ್ಟು ಹರಸಾಹಸ ಪಡಬೇಕಾಗುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಕೆಲವೊಮ್ಮೆ ಇದೇ ದೊಡ್ಡ ಗಲಾಟೆಗೂ ಕಾರಣವಾಗುವುದು ಕೂಡಾ ಹೊಸದೇನೂ ಅಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಸದಾ ಸಾಗುವವರಿಗೆ ಬಹುತೇಕ ಇಂತಹ ಸನ್ನಿವೇಶಗಳ ಬಗ್ಗೆ ಗೊತ್ತಿರುತ್ತದೆ. ಕೆಲವೊಮ್ಮೆ ಇದೇ ಸನ್ನಿವೇಶಗಳು ಪುಕ್ಕಟೆ ಮನೋರಂಜನೆಯೊದಗಿಸಿದರೆ, ಇನ್ನೊಂದಷ್ಟು ಸಂದರ್ಭದಲ್ಲಿ ಆತಂಕಕಾರಿ ಸನ್ನಿವೇಶವನ್ನೂ ಸೃಷ್ಟಿಸುತ್ತವೆ. ಜನದಟ್ಟಣೆ ಇದ್ದಂತಹ ಸಂದರ್ಭದಲ್ಲಿ ಬಸ್ ಏರುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ, ಹಾಗೂ ಹೀಗೂ ನೂಕಾಡಿ, […]

Advertisement

Wordpress Social Share Plugin powered by Ultimatelysocial