ಸಿಕ್ಕಾಪಟ್ಟೆ ಕಾಫಿ ಕುಡಿಯುತ್ತೀರಾ, ನಿಮ್ಮ ದೃಷ್ಟಿಯೇ ಹೋಗಬಹುದು ಹುಷಾರ್‌!

ಕಾಫಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅದ್ರಲ್ಲೂ ಕರ್ನಾಟಕದಲ್ಲಿ ಕಾಫಿ ಪ್ರಿಯರೇ ಹೆಚ್ಚು. ದೇಶದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಇಲ್ಲಿನವರಿಗೂ ಕಾಫಿ ಹೆಚ್ಚಾಗಿ ರೂಢಿಯಾಗಿದೆ ಅನ್ನಬಹುದು.ನಿಮ್ಮಲ್ಲಿ ಯಾರಿಗಾದ್ರು ಕಾಫಿಯ ಚಟ ಇದ್ಯಾ? ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕಾಫಿ ಕುಡಿಯುವ ಅಭ್ಯಾಸ ಇದ್ಯಾ? ಹಾಗಾದ್ರೆ ನಿಮ್ಮ ಕಣ್ಣಿನ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಲೇಬೇಕು. ಅಷ್ಟಕ್ಕು ಕಾಫಿ ಕುಡಿಯುವುದರಿಂದ ಕಣ್ಣಿನ ಆರೋಗ್ಯಕ್ಕೆ ಯಾವ ರೀತಿ ತೊಂದರೆ ಆಗಲಿದೆ ಅನ್ನೋದನ್ನ ಡಿಟೈಲ್‌ ಆಗಿ ಹೇಳ್ತೀವಿ.

ಹೌದು, ಕಾಫಿ ಕುಡಿಯುವುದಕ್ಕೂ ಹಾಗೂ ನಿಮ್ಮ ಕಣ್ಣಿನ ದೃಷ್ಠಿಯ ಮಧ್ಯೆ ಒಂದು ಸಂಬಂಧವಿದೆ. ಅತಿಯಾದ ಕಾಫಿ ಸೇವನೆ ನಿಮಗೆ ಬೇರೆ ಬೇರೆ ರೀತಿಯಲ್ಲಿ ಸಮಸ್ಯೆಯನ್ನು ತಂದೊಡ್ಡಬಹುದು. ಕಣ್ಣಿನ ಗ್ಲೂಕೋಮ ಸಮಸ್ಯೆಯ ಬಗ್ಗೆ ನಿಮಗೆಲ್ಲಾ ಚೆನ್ನಾಗಿಯೇ ಗೊತ್ತಿರುತ್ತದೆ. ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಗ್ಲೂಕೋಮ ಕಾಯಿಲೆ ಇದ್ದರೆ ನಿಮಗೂ ಹರಡುವ ಸಾಧ್ಯತೆ ಇರುತ್ತದೆ. ಆದ್ರೆ ಎಲ್ಲರಿಗೂ ಹೀಗೆ ಆಗುತ್ತೆ ಅಂತ ಹೇಳೋದಿಕ್ಕೆ ಆಗೋದಿಲ್ಲ. ಅದ್ರಲ್ಲೂ ಯಾರು ಅತಿಯಾಗಿ ಕಾಫಿಯನ್ನು ಸೇವಿಸ್ತಾರೋ ಅವರಿಗೆ ಗ್ಲೂಕೋಮ ಕಾಯಿಲೆ ಭಾದಿಸುವ ಸಾಧ್ಯತೆಗಳು ಹೆಚ್ಚಾಗಿದ್ಯಂತೆ.ಗ್ಲೂಕೋಮ ಕಾಯಿಲೆಯು ಕಣ್ಣಿನ ಒಳಗಡೆ ಹೆಚ್ಚಿನ ಒತ್ತಡವನ್ನು ಸೃಷ್ಟಿಸುತ್ತದೆ. ಹಾಗೂ ನಿಮ್ಮ ಕಣ್ಣಿನ ನರಗಳನ್ನು ಹಾನಿಗೊಳಿಸುತ್ತದೆ ಇದರಿಂದ ಅಂಧತ್ವ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ದಿನಕ್ಕೆ ಮೂರು ಬಾರಿ ಕಾಫಿ ಕುಡಿಯುವ ಅಭ್ಯಾಸ ಇದ್ಯಾ?ಕಾಫಿ ಕುಡಿಯುತ್ತಾರೋ ಹಾಗೂ ಅವರ ಕುಟುಂಬದಲ್ಲಿ ಗ್ಲೂಕೋಮ ಕಾಯಿಲೆ ಇರುವವರು ಇದ್ದರೆ ಅಂತವರಿಗೆ ಈ ಕಾಯಿಲೆ ವಕ್ಕರಿಸುವ ಸಾಧ್ಯತೆ ಹೆಚ್ಚು. ಅದ್ರಲ್ಲೂ ಮಹಿಳೆಯರಿಗೆ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ಅಧ್ಯಯನಗಳು ದೃಢ ಪಡಿಸಿದೆ.

ನಿತ್ಯವು 125 ಮಿಲಿಗ್ರಾಂ ಕಾಫಿ ಕುಡಿಯುವವರಿಗಿಂತ 500 ಮಿಲಿ ಗ್ರಾಂ ಕಾಫಿ ಕುಡಿಯುವವರಿಗೆ ಗ್ಲೂಕೋಮ ಹೆಚ್ಚಾಗಿ ಕಾಣಿಸಿಕೊಂಡಿದ್ಯಂತೆ. 120,000 ಸಾಮಾನ್ಯ ಕಾಫಿ ಮತ್ತು ಟೀ ಕುಡಿಯುವವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಹಾಗೂ ಅವರು ಗ್ಲುಕೋಮಾದ ಅಪಾಯವನ್ನು ಮೌಲ್ಯಮಾಪನ ಕೂಡ ಮಾಡಿದರು. ಆಗ ಒಟ್ಟಾರೆ ಕಾಫಿ ಕುಡಿಯುವುದರಿಂದ ಅವರಿಗೆ ಗ್ಲುಕೋಮದ ಅಪಾಯ ಇದೆ ಎಂಬುವುದು ಗೊತ್ತಾಗಿಲ್ಲ. ಆದರೆ ದಿನಕ್ಕೆ 321 mg ಗಿಂತ ಹೆಚ್ಚು ಕೆಫೀನ್ ಸೇವಿಸುವ ಜನರಲ್ಲಿ ಹೆಚ್ಚಿನ ಅಪಾಯವನ್ನು ಪತ್ತೆಯಾಗಿದೆ. ಜೀನ್‌ಗಳು ಹೆಚ್ಚಿನ ಕಣ್ಣಿನ ಒತ್ತಡವನ್ನು ಉಂಟುಮಾಡುವುದನ್ನು ಕಂಡು ಹಿಡಿಯಲಾಗಿದೆಯಂತೆ.

ಕಾಫಿ ಹೇಗೆ ಕಣ್ಣಿಗೆ ತೊಂದರೆ ಉಂಟು ಮಾಡಲಿದೆ?

ಕಾಫಿಯಲ್ಲಿರುವ ಕೆಫಿನ್‌ ಅಂಶ ನಿಮ್ಮ ಕಣ್ಣಿನ ಒಳಗಡೆ ಒತ್ತಡವನ್ನು ಹೆಚ್ಚು ಮಾಡಲಿದೆ. ಅಷ್ಟೇ ಅಲ್ಲದೇ ಇದು ಕಣ್ಣಿನಲ್ಲಿ ಅಮಿನೋ ಆಮ್ಲ ಹೆಚ್ಚಾಗಿ ಹೊಮೋಸಿಸ್ಟೈನ್‌ನ ಅಪಾಯವನ್ನು ಹೆಚ್ಚಿಸಲಿದೆ. ಇದರಿಂದಾಗಿ ಗ್ಲುಕೋಮದ ಅಪಾಯವು ಹೆಚ್ಚಾಗಲಿದೆ. ಕೆಫೀನ್ ನಿಮ್ಮ ಕಣ್ಣಿನಲ್ಲಿರುವ ರಕ್ತನಾಳಗಳನ್ನು ನಿರ್ಬಂಧಿಸುತ್ತದೆ ಮತ್ತು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಈ ಕಡಿಮೆಯಾದ ರಕ್ತದ ಹರಿವು ಗ್ಲುಕೋಮಾದಿಂದಾಗಿ ನರ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ.

ಕಾಫಿ ಕುಡಿದರೆ ದೃಷ್ಟಿ ಸಮಸ್ಯೆ ಎದುರಾಗುತ್ತಾ?ಕೆಲವು ಅಧ್ಯಯನಗಳು ಕಾಫಿ ಕುಡಿಯುವುದರಿಂದ ಕಣ್ಣಿನ ಪೊರೆಗಳ ಅಪಾಯವು ಕಡಿಮೆಯಾಗುತ್ತದೆ ಎಂದು ಸಾಭೀತುಪಡಿಸಿದೆ. ಕಣ್ಣಿನ ಪೊರೆಗಳು ನಿಮ್ಮ ಕಣ್ಣಿನ ಮಸೂರದ ಮೇಲೆ ರೂಪುಗೊಳ್ಳುತ್ತದೆ. ಇದರಿಂದಾಗಿ ಕುರುಡುತನ ಉಂಟಾಗುತ್ತದೆ.

ಕಣ್ಣನ್ನು ರಕ್ಷಿಸುವ ಅಂಶ ಕಾಫಿಯಲ್ಲಿ ಇದ್ಯಾ?2019 ರ ದಶಕಗಳ ಅಧ್ಯಯನದ ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ ಕಾಫಿ ಬೀಜಗಳನ್ನು ಹುರಿಯುವ ಮೂಲಕ ಉತ್ಪತ್ತಿಯಾಗುವ ಕೆಫೀನ್ ಮತ್ತು ಪೈರೋಕಾಟೆಕೋಲ್ ಎಂಬ ರಾಸಾಯನಿಕವು ಮಸೂರವನ್ನು ರಕ್ಷಿಸುವ ಅಂಶವಾಗಿದೆ ಎಂದು ಸಾಭೀತುಪಡಿಸಲಾಗಿದೆ.

ಇನ್ನೂಂದು ಉದಯೋನ್ಮುಖ ಸಂಶೋಧಕರ ವರದಿಯ ಪ್ರಕಾರ ಕೆಫೀನ್ ರೆಟಿನಾದ ಉರಿಯೂತದ ವಿರುದ್ಧ ರಕ್ಷಣಾತ್ಮಕವಾಗುವ ಸಾಧ್ಯತೆ ಇದೆ. ಮತ್ತು ಭವಿಷ್ಯದಲ್ಲಿ ರೆಟಿನಾದ ಕಾಯಿಲೆಗೆ ಚಿಕಿತ್ಸೆ ನೀಡಲು ಉಪಯೋಗಕಾರಿಯಾಗಬಹುದು ಎಂದು ಅಂದಾಜು ಮಾಡಲಾಗಿದೆ.

ಕಣ್ಣಿನ ಆರೋಗ್ಯ ಕಾಪಾಡುವುದು ಹೇಗೆ?

* ವರ್ಷಕ್ಕೆ ಒಂದು ಬಾರಿಯಾದರೂ ಕಣ್ಣಿನ ಪರೀಕ್ಷೇ ಮಾಡಿಸಿಕೊಳ್ಳಿ

* ಆದಷ್ಟು ಸಮತೋಲಿತ ಆಹಾರವನ್ನೇ ಸೇವಿಸಿ ಹಾಗೂ ನಿತ್ಯ ವ್ಯಾಯಾಮ ಮಾಡುವುದರಿಂದ ಡಯಾಬಿಟೀಸ್‌ನ ಅಪಾಯದಿಂದ ತಪ್ಪಿಸಿಕೊಳ್ಳಬಹುದು.

* ಹಸಿರು ತರಕಾರಿ ಹಾಗೂ ಮೀನು ಸೇವಿಸಿ

* ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕಣ್ಣಿನ ಸಮಸ್ಯೆ ಇದ್ದರೆ ಜಾಗರೂಕರಾಗಿರಿ

* ಕ್ರೀಡೆ ಅಥವಾ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಕಣ್ಣಿನ ಬಗ್ಗೆ ಎಚ್ಚರವಿರಲಿ

* ಮನೆಯಿಂದ ಹೊರಗಡೆ ಬರುವಾಗ ಸನ್‌ಗ್ಲಾಸ್‌ ಬಳಸಿ

* ಸಿಗರೇಟ್‌ ಸೇವನೆ ಮಾಡುತ್ತಿದ್ದರೆ ಬಿಟ್ಟುಬಿಡಿ

* ಡಿಜಿಟಲ್‌ ಡಿವೈಸ್‌ಗಳನ್ನು ನೋಡುವಾಗ ಆಗಾಗ್ಗೆ ಬ್ರೇಕ್‌ ತೆಗೆದುಕೊಳ್ಳಿ

ಅತಿಯಾಗಿ ಕಾಫಿ ಸೇವಿಸುವುದರಿಂದ ಹಾಗೂ ನಿಮ್ಮ ಕುಟುಂಬದಲ್ಲಿ ಗ್ಲೂಕೋಮ ಸಮಸ್ಯೆ ಇದ್ದರೆ ಖಂಡಿತ ಗ್ಲೂಕೋಮ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳು ಸಾಭೀತು ಪಡಿಸಿದೆ. ಹಾಗೂ ಕೆಫಿನ್‌ ಅಂಶ ಕಣ್ಣಿಗೆ ಒಳ್ಳೆಯದು ಎಂದು ಕೂಡ ಮತ್ತೊಂದು ಅಧ್ಯಯನದಲ್ಲಿ ಹೇಳಲಾಗಿದೆ. ಆದೆ ಅತಿಯಾದ್ರೆ ಅಮೃತವು ವಿಷ ಎಂಬ ಮಾತಿನಂತೆ ಇನ್ನು ಮುಂದೆ ಅತಿಯಾಗಿ ಕಾಫಿ ಸೇವಿಸುವಾಗ ಎಚ್ಚರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯ ಸಂಕಲ್ಪ ರಥಯಾತ್ರೆ ಕಾರ್ಯಕ್ರಮ ವೇದಿಕೆ ವೀಕ್ಷಣೆ.

Fri Mar 3 , 2023
  ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣರಿಂದ ವಿಜಯ ಸಂಕಲ್ಪ ರಥಯಾತ್ರೆ ಕಾರ್ಯಕ್ರಮ ವೇದಿಕೆ ವೀಕ್ಷಣೆ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ರಥಯಾತ್ರೆ ಬೃಹತ್ ಕಾರ್ಯಕ್ರಮ ಮಧ್ಯಾಹ್ನ 1.15ಕ್ಕೆ ವಿಜಯ ಸಂಕಲ್ಪ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಲಿರೋ ಕೇಂದ್ರ ಗೃಹ ಸಚಿವ ಅಮಿತ್ ಶಾ ಖುದ್ದು ಮುತುವರ್ಜಿ ವಹಿಸಿ ವೇದಿಕೆ ಸಿದ್ಧತೆ ಕಾರ್ಯ ವೀಕ್ಷಿಸಿದ ಸಚಿವ ಚವ್ಹಾಣ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial