ನಾಗರಹೊಳೆಯಲ್ಲಿ ಮತ್ತೆ ಕಾಣಿಸಿಕೊಂಡ ಭಗೀರ:

ಮೈಸೂರು, ಫೆಬ್ರವರಿ, 27: ಮೂರು ತಿಂಗಳಿನಿಂದ ಕಣ್ಮರೆಯಾಗಿದ್ದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಐಕಾನ್ ಭಗೀರ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಭಗೀರನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಭಗೀರ ಎಂದು ಕರೆಯಲ್ಪಡುವ ಕರಿ ಚಿರತೆಗಳಿಗೆ ನಾಗರಹೊಳೆ ಅಭಯಾರಣ್ಯ ನೆಚ್ಚಿನ ತಾಣವಾಗಿದೆ.ಸಾಮಾನ್ಯವಾಗಿ ಭಗೀರಗಳು ಹೆಚ್ಚು ಮಳೆ ಸುರಿಯುವ, ಕಡಿಮೆ ಸೂರ್ಯನ ಬೆಳಕಿರುವ, ದಟ್ಟಾರಣ್ಯದಲ್ಲಿ ವಾಸಿಸಲು ಇಷ್ಟಪಡುತ್ತವೆ. ಇಂತಹ ತಾಣಗಳಲ್ಲಿ ಸಾಕಷ್ಟು ಆಹಾರ ಸಿಗುವುದರಿಂದ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅವುಗಳು ಇಲ್ಲಿಯೇ ನೆಲೆಯೂರುತ್ತವೆ.ಪ್ರವಾಸಿಗರಿಗೆ ಅಚ್ಚುಮೆಚ್ಚಾದ ಭಗೀರನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಬಿನಿ ಹಿನ್ನೀರಿನ ದಮ್ಮನಕಟ್ಟೆಗೆ ತೆರಳುವ ವನ್ಯಜೀವಿ ಪ್ರಿಯರಿಗೆ ನಿರಂತರವಾಗಿ ದರ್ಶನ ನೀಡುವ ಮೂಲಕ ಸದಾ ಪ್ರೀತಿಪಾತ್ರನಾಗಿದ್ದ. ಆದರೆ ಕಳೆದ ಮೂರು ತಿಂಗಳಿಂದ ಆ ಭಾಗದಲ್ಲಿ ಯಾರ ಕಣ್ಣಿಗೂ ಕಾಣಿಸಿರಲಿಲ್ಲ. ಅರಣ್ಯ ಅಧಿಕಾರಿಗಳು ವಾಚ್ ಟವರ್ ಹಾಗೂ ಫೈರ್‌ಲೈನ್ ಕಾಮಗಾರಿ ಪರಿಶೀಲನೆ ಮಾಡುವಾಗ ಅಪರೂಪದ ಹಾಗೂ ಸಾಯಾ ಮಾಯಾ, ಕರಿಯಾ, ಭಗೀರ ಎಂದು ಕರೆಸಿಕೊಳ್ಳುವ ಕಪ್ಪು ಚಿರತೆ ಮತ್ತೆ ಅದೇ ಜಾಗದಲ್ಲಿ ಕಾಣಿಸಿಕೊಂಡಿದೆ.ಕಪ್ಪು ಚಿರತೆಯ ವಿಡಿಯೋ ವೈರಲ್‌ಕಪ್ಪು ಚಿತರತೆಯ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಜನತೆ ಭಗೀರನಿಗೆ ಯಾವುದೇ ಅಪಾಯವಾಗಿಲ್ಲ. ಆತನನ್ನು ಮತ್ತೊಮ್ಮೆ ನೋಡುವ ಅವಕಾಶವಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಕಾಲ ಭಗೀರ ಎಂದು ಕರೆಸಿಕೊಲ್ಳುತ್ತಿದ್ದ ಕರಿ ಚಿರತೆ ಕಾಣೆಯಾಗಿತ್ತು. ಇದು ಈ ಮೊದಲು ಪ್ರವಾಸಿಗರಿಗೆ ಹಾಗಾಗ ದರ್ಶನ ಕೊಡುತ್ತಿತ್ತು.ಕೆಲವು ದಿನಗಳ ಹಿಂದೆಯಷ್ಟೇ ಇದು ನಾಪತ್ತೆಯಾಗಿದ್ದು, ಪ್ರವಾಸಿಗರಿಗೆ ಅದನ್ನು ನೋಡುವ ಭಾಗ್ಯವೇ ಸಿಗದಂತಾಗಿತ್ತು. ಇದೀಗ ಈ ಚಿರತೆ ಪ್ರತ್ಯಕ್ಷ ಆಗಿದ್ದು, ಅಲ್ಲಿನ ಸುತ್ತಮುತ್ತಲಿನ ಜನರ ಮುಖದಲ್ಲಿ ಸಂತಸ ತರಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬಿ.

Tue Feb 28 , 2023
  ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬಿಯಾಗಿದೆ ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಹಾಗು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ -ಡಿಆರ್‌ಡಿಒ ಮಾಜಿ ಮುಖ್ಯಸ್ಥ ಡಾ. ಜಿ. ಸತೀಶ್ ರೆಡ್ಡಿ ಇಂದಿಲ್ಲಿ ಹೇಳಿದ್ದಾರೆ. ಭಾರತದ ಶಸ್ತ್ರಗಾರದಲ್ಲಿ ಅತ್ಯಾಧುನಿಕ ಶ್ರೇಣಿಯ ಕ್ಷಿಪಣಿ ಹೊಂದಿದೆ. ಜೊತೆಗೆ ಕ್ಷಿಪಣಿ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗಿ ಜಾಗತಿಕವಾಗಿಯೂ ಸಹಾಯ ಮಾಡಿದೆ ಎಂದಿದ್ದಾರೆ. ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಮೇಲ್ಮೈಯಿಂದ ಮೇಲ್ಮೈಗೆ ಕ್ಷಿಪಣಿಗಳು, ಮೇಲ್ಮೈಯಿಂದ ಗಾಳಿ ಕ್ಷಿಪಣಿಗಳು […]

Advertisement

Wordpress Social Share Plugin powered by Ultimatelysocial