ಪ್ರಿಯಾಂಕ ಗಾಂಧಿ ಆಪ್ತನ ವಿರುದ್ಧವೇ ಸಿಡಿದೆದ್ದ ಬಿಗ್​ಬಾಸ್​ ಬ್ಯೂಟಿ!

ರ್ಚನಾ ಗೌತಮ್.. ಹಿಂದಿಯ ಬಿಗ್​ ಬಾಸ್​-16 ಖ್ಯಾತಿಯ ಸೆಲೆಬ್ರಿಟಿ. ಈ ಬ್ಯೂಟಿ ಮಾಡೆಲ್​ ಕೂಡ ಆಗಿದ್ದು ನಟಿಯಾಗಿಯೂ ಮಿಂಚಿದ್ದಾರೆ. 2018ರಲ್ಲಿ ಮಿಸ್​ ಬಿಕಿನಿ ಇಂಡಿಯಾ ಅವಾರ್ಡ್​ಗೂ ಮುತ್ತಿಕ್ಕಿದ್ದಾರೆ. ಸದ್ಯ ರಾಜಕಾರಣದಲ್ಲಿ ಬ್ಯುಸಿಯಾಗಿರುವ ಅರ್ಚನಾ ಗೌತಮ್, ತನಗೆ ಕಾಂಗ್ರೆಸ್​ನ ನಾಯಕಿ ಪ್ರಿಯಾಂಕಾ ಗಾಂಧಿಯವರ ಪರ್ಸನಲ್​ ಅಸಿಸ್ಟೆಂಟ್​ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಈ ಆರೋಪದ ಬಗ್ಗೆ ಫೇಸ್​ಬುಕ್​ ವಿಡಿಯೋದಲ್ಲಿ ಲೈವ್​ ಬಂದ ಅರ್ಚನಾ, ನನಗೆ ಪ್ರಿಯಾಂಕಾ ಗಾಂಧಿ ಪರ್ಸನಲ್​ ಅಸಿಸ್ಟೆಂಟ್ ಸಂದೀಪ್​ ಸಿಂಗ್ ಬೆದರಿಕೆ ಹಾಕಿ ನೀನು ಎರಡು ಪೈಸೆಯ ಹೆಣ್ಣು. ರಾಯ್​ಪುರದ ಅಧಿವೇಶನ ಮುಗಿದ ಮೇಲೆ ನಿನ್ನನ್ನು ಕಂಬಿ ಹಿಂದೆ ಕಳುಹಿಸುತ್ತೇನೆ ಎಂದು ಬೆದರಿಸಿದ್ದಾರೆ. ಸಂದೀಪ್​ಗೆ ಒಬ್ಬ ಮಹಿಳೆ ಹತ್ತಿರ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು ಇದೇ ಲೈವ್​ನಲ್ಲಿ ನಿನಗೆ ಧೈರ್ಯ ಇದ್ರೆ, ಜೈಲಿಗೆ ಹಾಕಿಸು ನೋಡೋಣ ಎಂದು ಅರ್ಚನಾ ಚಾಲೆಂಜ್ ಹಾಕಿದ್ದಾಳೆ.​ ಸದ್ಯ ಇದಕ್ಕೆ ಸಂದೀಪ್​ ಸಿಂಗ್ ವಿರುದ್ಧ ಕಾಂಗ್ರೆಸ್​ ನಾಯಕರು ಗರಂ ಆಗಿದ್ದಾರೆ.

ನಾನು ಇನ್ನು ಕಾಂಗ್ರೆಸ್​ ಪಾರ್ಟಿಯನ್ನ ಅಧಿಕೃತವಾಗಿ ಸೇರಿಕೊಂಡಿಲ್ಲ. ಆದ್ರೆ ಪ್ರಿಯಾಂಕಾ ಗಾಂಧಿಯವರ ಮೀಟ್​ ಮಾಡಿದ್ದೇನೆ. ಅವರಿಂದಲೇ ಕಾಂಗ್ರೆಸ್​ಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು ಅರ್ಚನಾ ಬಿಗ್​ಬಾಸ್​ನಲ್ಲಿ ಇರುವಾಗ ಕಂಟೆಸ್ಟೆಂಟ್​ ಒಬ್ಬರು ಪ್ರಿಯಾಂಕಾ ಗಾಂಧಿ ವಿರುದ್ಧ ಮಾತನಾಡಿದ್ದರು. ಇದನ್ನ ಪ್ರಬಲವಾಗಿ ಖಂಡಿಸಿದ್ದರಿಂದ 7ನೇ ವಾರದಲ್ಲೇ ಬಿಗ್​ಬಾಸ್​ ಮನೆಯಿಂದ ಹೊರಬಂದಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

‌ʼಸ್ಮಾರ್ಟ್‌ ವಾಚ್ʼ ಬಳಕೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ,

Tue Feb 28 , 2023
  ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ವಾಚ್‌ಗಳು ಹೆಚ್ಚು ಜನಪ್ರಿಯವಾಗಿವೆ ಮತ್ತು ಅವುಗಳು ಕೇವಲ ಸಮಯ ಹೇಳುವುದಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ. ಸ್ಮಾರ್ಟ್ ವಾಚ್ ಬಳಸುವ ಕೆಲವು ಮುಖ್ಯ ಪ್ರಯೋಜನಗಳು ಇಲ್ಲಿವೆ. ನಿಮ್ಮ ಫೋನ್ ಅನ್ನು ಹೊರತೆಗೆಯದೆಯೇ ಪ್ರಮುಖ ಮಾಹಿತಿ ಮತ್ತು ವೈಶಿಷ್ಟ್ಯಗಳನ್ನು ಸುಲಭವಾಗಿ ತಿಳಿಸಲು ಸ್ಮಾರ್ಟ್ ವಾಚ್ ಅನುವು ಮಾಡಿಕೊಡುತ್ತದೆ. ನೀವು ನೋಟೀಫಿಕೇಷನ್ ಸ್ವೀಕರಿಸಬಹುದು, ಕರೆಗಳನ್ನು ಮಾಡಬಹುದು. ಹೃದಯ ಬಡಿತ ಮಾನಿಟರಿಂಗ್, ಸ್ಟೆಪ್ ಟ್ರ್ಯಾಕಿಂಗ್ ಮತ್ತು ವರ್ಕೌಟ್ ಟ್ರ್ಯಾಕಿಂಗ್‌ನಂತಹ ಫಿಟ್‌ನೆಸ್ ಟ್ರ್ಯಾಕಿಂಗ್ […]

Advertisement

Wordpress Social Share Plugin powered by Ultimatelysocial