ಉರಿಯೂತ ಕಡಿಮೆ ಮಾಡಿ ಈ ಆರೋಗ್ಯ ಪ್ರಯೋಜನ ನೀಡುತ್ತೆ ಕರಿಮೆಣಸು

ಪ್ಪು ಮೆಣಸು ಮಸಾಲೆಗಳಲ್ಲಿ ಜನಪ್ರಿಯತೆ ಪಡೆದಿದೆ. ವಿವಿಧ ಅಡುಗೆಗೆ ಇದನ್ನು ಬಳಸಲಾಗುತ್ತದೆ. ಪೌಷ್ಟಿಕ ಅಂಶಗಳಿಂದ ತುಂಬಿರುವುದರಿಂದ ಇದು ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ.

ಶೀತ, ಕೆಮ್ಮಿನಿಂದ ಬಳಲುತ್ತಿರುವ ಜನರಿಗೆ ಕರಿಮೆಣಸು ಅತ್ಯುತ್ತಮ ಔಷಧಿಯಾಗಿದೆ.ಆಯುರ್ವೇದದಲ್ಲೂ ಶೀತ ಮತ್ತು ಕೆಮ್ಮಿನ ಸಮಸ್ಯೆಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ. ಜನರು ಜೇನುತುಪ್ಪದೊಂದಿಗೆ ಕರಿಮೆಣಸಿನ ಪುಡಿಯನ್ನು ಸೇವಿಸುವುದ್ರಿಂದ ಕೆಮ್ಮು, ಶೀತ ಕಡಿಮೆಯಾಗುತ್ತದೆ.

ಸಾಂಕ್ರಾಮಿಕವನ್ನು ತಪ್ಪಿಸಲು ರೋಗ ನಿರೋಧಕ ಶಕ್ತಿ ಬಲವಾಗಿರಬೇಕು. ಈ ಸಂದರ್ಭದಲ್ಲಿ ಕಷಾಯವನ್ನು ಕುಡಿಯಲು ಕೇಳಲಾಗುತ್ತಿದೆ. ರೋಗ ಲಕ್ಷಣಗಳನ್ನು ಗುಣಪಡಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಈ ಕಷಾಯ ಬಹಳ ಪರಿಣಾಮಕಾರಿ ಎಂದು ನಂಬಲಾಗಿದೆ

ಕರಿಮೆಣಸು ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಕರಿಮೆಣಸಿನ ಪುಡಿಯನ್ನು ಬಿಸಿ ನೀರಿನಲ್ಲಿ ಕುದಿಸಿ ಜೇನುತುಪ್ಪದೊಂದಿಗೆ ಕುಡಿಯಬಹುದು.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದು. ಕರಿಮೆಣಸನ್ನು ನಿಯಮಿತವಾಗಿ ಸೇವಿಸಿದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಟ್ಟುಕೊಳ್ಳುವ ಮೂಲಕ ಮಧುಮೇಹದ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.

ಉರಿಯೂತವನ್ನು ಇದು ಕಡಿಮೆ ಮಾಡುತ್ತದೆ. ಇದು ತುಂಬಾ ಪ್ರಯೋಜನಕಾರಿಯಾಗಿದೆ. ಸಂಧಿವಾತದ ಸಮಸ್ಯೆ ಇರುವವರು ಮುಖ್ಯವಾಗಿ ಕರಿಮೆಣಸು ಸೇವಿಸಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಟಮಿನ್ ಸಿ ಧಾರಾಳವಾಗಿರುವ ಬ್ರೊಕೋಲಿ ಮಲಬದ್ಧತೆಗೆ ಮದ್ದು...!

Fri Mar 3 , 2023
ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ ಸೇವನೆಯಿಂದ ಈ ಸಮಸ್ಯೆ ಬಗೆಹರಿಸಬಹುದು. ಹೆಚ್ಚಿನ ಸಮಯ ಕುಳಿತಲ್ಲೇ ಕಳೆಯುವುದು, ವ್ಯಾಯಾಮದ ಕೊರತೆ, ಜಂಕ್ ಫುಡ್ ತಿನ್ನುವುದು ಮತ್ತಿತರ ಕಾರಣಗಳಿಂದ ಮಲಬದ್ಧತೆ ಸಮಸ್ಯೆ ಬರುತ್ತದೆ. ಬ್ರೊಕೋಲಿಯಲ್ಲಿ ಅನೇಕ ಪೋಷಕಾಂಶಗಳಿದ್ದು, ಅವು ಆರೋಗ್ಯಕರವಾಗಿವೆ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು […]

Advertisement

Wordpress Social Share Plugin powered by Ultimatelysocial