ವಿಟಮಿನ್ ಸಿ ಧಾರಾಳವಾಗಿರುವ ಬ್ರೊಕೋಲಿ ಮಲಬದ್ಧತೆಗೆ ಮದ್ದು…!

ಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ ಸೇವನೆಯಿಂದ ಈ ಸಮಸ್ಯೆ ಬಗೆಹರಿಸಬಹುದು.

ಹೆಚ್ಚಿನ ಸಮಯ ಕುಳಿತಲ್ಲೇ ಕಳೆಯುವುದು, ವ್ಯಾಯಾಮದ ಕೊರತೆ, ಜಂಕ್ ಫುಡ್ ತಿನ್ನುವುದು ಮತ್ತಿತರ ಕಾರಣಗಳಿಂದ ಮಲಬದ್ಧತೆ ಸಮಸ್ಯೆ ಬರುತ್ತದೆ. ಬ್ರೊಕೋಲಿಯಲ್ಲಿ ಅನೇಕ ಪೋಷಕಾಂಶಗಳಿದ್ದು, ಅವು ಆರೋಗ್ಯಕರವಾಗಿವೆ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ.

ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಫೈಟೊಕೆಮಿಕಲ್ ಗುಣವಿದ್ದು, ಎಲ್ಲ ರೀತಿಯ ಸೋಂಕು ಮತ್ತು ರೋಗಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಕಡಿಮೆ ಕ್ಯಾಲೊರಿ ಇರುವ ಈ ತರಕಾರಿ ಅತ್ಯಧಿಕ ಅಂಟಿ ಆಕ್ಸಿಡೆಂಟ್ ಗಳು ಮತ್ತು ಅಗತ್ಯ ಖನಿಜಗಳಿಂದ ತುಂಬಿದೆ.ವಿಟಮಿನ್ ಸಿ ಧಾರಾಳವಾಗಿರುವ ಬ್ರೊಕೋಲಿಯನ್ನು ಸ್ಯಾಂಡ್ ವಿಚ್, ಸೂಪ್, ಸಲಾಡ್ ರೂಪದಲ್ಲಿ ಸೇವಿಸಿ ನಿಮ್ಮ ಮಲಬದ್ಧತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಂಪು, ಹಸಿರು, ಕಪ್ಪು ದ್ರಾಕ್ಷಿಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ?

Fri Mar 3 , 2023
ಸಿಹಿ-ಹುಳಿ ಮಿಶ್ರಿತ ದ್ರಾಕ್ಷಿ ಕಂಡರೆ ಯಾರಿಗೆ ತಾನೆ ಇಷ್ಟವಾಗಲ್ಲ, ಅದರಲ್ಲೂ ತರಾವರಿ ದ್ರಾಕ್ಷಿಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಕಪ್ಪು ದ್ರಾಕ್ಷಿ, ಹಸಿರು ದ್ರಾಕ್ಷಿ, ಕೆಂಪು ದ್ರಾಕ್ಷಿ, ಸ್ವಲ್ಪ ನೇರಳೆ ಬಣ್ಣದ ದ್ರಾಕ್ಷಿ ಹೀಗೆ ಅನೇಕ ಬಗೆಯ ದ್ರಾಕ್ಷಿಗಳು ಸಿಗುತ್ತವೆ.ಕೆಲವೊಂದು ದ್ರಾಕ್ಷಿಗಳಂತೂ ದುಬಾರಿ ಬೆಲೆ ಗಳಿರುತ್ತದೆ. ದ್ರಾಕ್ಷಿಯ ಬಣ್ಣ ಬದಲಾದರೆ ಅದರಲ್ಲಿರುವ ಪೋಷಕಾಂಶಗಳೂ ಭಿನ್ನವಾಗಿರುವುದೇ, ಯಾವ ಬಗೆಯ ದ್ರಾಕ್ಷಿ ಹೆಚ್ಚು ಆರೋಗ್ಯಕರ ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:ಇದನ್ನು ಅತೀ ಹೆಚ್ಚಾಗಿ ಬಳಸುತ್ತೇವೆ. ಇದರಲ್ಲೂ […]

Advertisement

Wordpress Social Share Plugin powered by Ultimatelysocial