ಕೆಂಪು, ಹಸಿರು, ಕಪ್ಪು ದ್ರಾಕ್ಷಿಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ?

ಸಿಹಿ-ಹುಳಿ ಮಿಶ್ರಿತ ದ್ರಾಕ್ಷಿ ಕಂಡರೆ ಯಾರಿಗೆ ತಾನೆ ಇಷ್ಟವಾಗಲ್ಲ, ಅದರಲ್ಲೂ ತರಾವರಿ ದ್ರಾಕ್ಷಿಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಕಪ್ಪು ದ್ರಾಕ್ಷಿ, ಹಸಿರು ದ್ರಾಕ್ಷಿ, ಕೆಂಪು ದ್ರಾಕ್ಷಿ, ಸ್ವಲ್ಪ ನೇರಳೆ ಬಣ್ಣದ ದ್ರಾಕ್ಷಿ ಹೀಗೆ ಅನೇಕ ಬಗೆಯ ದ್ರಾಕ್ಷಿಗಳು ಸಿಗುತ್ತವೆ.ಕೆಲವೊಂದು ದ್ರಾಕ್ಷಿಗಳಂತೂ ದುಬಾರಿ ಬೆಲೆ ಗಳಿರುತ್ತದೆ.

ದ್ರಾಕ್ಷಿಯ ಬಣ್ಣ ಬದಲಾದರೆ ಅದರಲ್ಲಿರುವ ಪೋಷಕಾಂಶಗಳೂ ಭಿನ್ನವಾಗಿರುವುದೇ, ಯಾವ ಬಗೆಯ ದ್ರಾಕ್ಷಿ ಹೆಚ್ಚು ಆರೋಗ್ಯಕರ ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:ಇದನ್ನು ಅತೀ ಹೆಚ್ಚಾಗಿ ಬಳಸುತ್ತೇವೆ. ಇದರಲ್ಲೂ ಅನೇಕ ಬಗೆಯ ದ್ರಾಕ್ಷಿಗಳು ಸಿಗುತ್ತದೆ. ಕೆಲವೊಂದು ತುಂಬಾ ಸಿಹಿಯಾಗಿದ್ದರೆ, ಇನ್ನು ಕೆಲವು ತುಂಬಾನೇ ಹುಳಿ ಇರುತ್ತದೆ. ಇನ್ನು ಫ್ರೂಟ್‌ ಸಲಾಡ್‌, ಮೊಸರನ್ನ ಇವುಗಳಿಗೆ ಹಸಿರು ಬಣ್ಣದ ದ್ರಾಕ್ಷಿ ಹಾಕಲಾಗುವುದು.
ಅಧ್ಯಯನದ ಪ್ರಕಾರ 1 ಕಪ್‌ ಹಸಿರು ದ್ರಾಕ್ಷಿಯಲ್ಲಿ ಇಷ್ಟೆಲ್ಲಾ ಪೋಷಕಾಂಶಗಳಿವೆ:
ಸರಿಸುಮಾರು 104 ಕ್ಯಾಲೋರಿ
1.4 ಗ್ರಾಂ ಪ್ರೊಟೀನ್
0.2 ಗ್ರಾಂ ಕೊಬ್ಬಿನಂಶ
27ಗ್ರಾಂ ಕಾರ್ಬ್ಸ್
ವಿಟಮಿನ್‌ ಸಿ, ವಿಟಮಿನ್‌ ಕೆ ತುಂಬಾನೇ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವುದು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಕಪ್ಪು ದ್ರಾಕ್ಷಿಕಪ್ಪು ದ್ರಾಕ್ಷಿಯಲ್ಲೂ ಹಲವು ಬಗೆಗಳಿವೆ. ಹುಳಿ ಹಾಗೂ ಸಿಹಿ ಮಿಶ್ರಿತ ಅದರ ಸಿಪ್ಪೆ ತುಂಬಾ ಹುಳಿ ಇರುವ ದ್ರಾಕ್ಷಿಯನ್ನು ಜ್ಯೂಸ್‌ ತಯಾರಿಸುವಾಗ ಹೆಚ್ಚಾಗಿ ಬಳಸಲಾಗುವುದು. ಇನ್ನು ವೈನ್‌ ತಯಾರಿಯಲ್ಲಿಯೂ ಬಳಸಲಾಗುವುದು. ಇನ್ನು ಕಪ್ಪು ಬಣ್ಣದ ಬೀಜ ಕಡಿಮೆ ಇರುವ ಅಥವಾ ಇಲ್ಲದಿರುವ ದ್ರಾಕ್ಷಿ ಸಿಗುವುದು, ಇದು ತಿನ್ನಲು ತುಂಬಾನೇ ರುಚಿಯಾಗಿರುತ್ತದೆ.ಕಪ್ಪು ದ್ರಾಕ್ಷಿಯಲ್ಲಿರುವ ಪೋಷಕಾಂಶಗಳು1 ಕಪ್‌ ದ್ರಾಕ್ಷಿಯಲ್ಲಿ ಸರಿಸುಮಾರು ಇಷ್ಟೆಲ್ಲಾ ಪೋಷಕಾಂಶಗಳಿರುತ್ತದೆ’
104 ಕ್ಯಾಲೋರಿ1.1 ಗ್ರಾಂ ಪ್ರೊಟೀನ್‌0.2 ಗ್ರಾಂ ಕೊಬ್ಬಿನಂಶವಿದೆ.ಇದರಲ್ಲೂ ವಿಟಮಿನ್ ಕೆ ಮತ್ತು ಸಿ ಇದೆ, ಈ ದ್ರಾಕ್ಷಿ ಕ್ಯಾನ್ಸರ್‌ ಕಣಗಳನ್ನು ತಡೆಗಟ್ಟುತ್ತದೆ.

ಕೆಂಪು ದ್ರಾಕ್ಷಿಇದು ತಿನ್ನಲು ರುಚಿಯಾಗಿರುತ್ತದೆ ಹಾಗೂ ದುಬಾರಿ ಕೂಡ. ಇದನ್ನು ಜಾಮ್, ಜೆಲ್ಲಿ ಮಾಡಲು ಬಳಸಲಾಗುವುದು.
ಒಂದು ಕೆಂಪು ದ್ರಾಕ್ಷಿಯಲ್ಲೂ 104 ಕ್ಯಾಲೋರಿ, 1.1 ಗ್ರಾಂ ಪ್ರೊಟೀನ್, 0.2 ಗ್ರಾಂ ಕೊಬ್ಬಿನಂಶ, 27.3 ಗ್ರಾಂ ಕಾರ್ಬ್ಸ್, ವಿಟಮಿನ್‌ ಸಿ ಮತ್ತು ವಿಟಮಿನ್ ಕೆ ಇರುತ್ತದೆ.ಯಾವ ದ್ರಾಕ್ಷಿಯಲ್ಲಿ ಅತ್ಯಧಿಕ ಪೋಷಕಾಂಶಗಳಿವೆ?ಎಲ್ಲಾ ಬಗೆಯ ದ್ರಾಕ್ಷಿಯಲ್ಲೂ ಅತ್ಯುತ್ತಮವಾದ ಪೋಷಕಾಂಶಗಳಿವೆ, ಆದರೆ ಕಪ್ಪು ಹಾಗೂ ಕೆಂಪು ದ್ರಾಕ್ಷಿಯಲ್ಲಿ 3 ಬಗೆಯ ಪಾಲಿಫೀನೋಲ್ಸ್ ಆದ ಫೀನೋಲಿಕ್ ಆಮ್ಲ, ಫ್ಲೇವೋನಾಯ್ಡ್, resveratrol ಇರುತ್ತದೆ. ಇವುಗಳು ಉರಿಯೂತ ತಡೆಗಟ್ಟಲು, ಕ್ಯಾನ್ಸರ್ ತಡೆಗಟ್ಟಲು, ಹೃದಯ ಆರೋಗ್ಯಕ್ಕೆ ಅನುಕೂಲಕರವಾಗಿದೆ. ಆದ್ದರಿಂದ ಹಸಿರು ದ್ರಾಕ್ಷಿಗಿಂತ ಕೆಂಪು ಹಾಗೂ ಕಪ್ಪು ದ್ರಾಕ್ಷಿಸ್ವಲ್ಪ ಅಧಿಕ ಪೋಷಕಾಂಶಗಳನ್ನು ಹೊಂದಿದೆ.

ಒಟ್ಟಾರೆಯಾಗಿ ನೋಡುವುದಾದರೆ ಎಲ್ಲಾ ಬಗೆಯ ದ್ರಾಕ್ಷಿಯಲ್ಲಿ ಪ್ರಮುಖ ಪೋಷಕಾಂಶಗಳು ದೊರೆಗುವುದರಿಂದ ನಿಮಗೆ ಇಷ್ಟವಾದ ದ್ರಾಕ್ಷಿಯನ್ನು ಸವಿಯಿರಿ.ಪ್ರತಿದಿನ ದ್ರಾಕ್ಷಿ ತಿಂದರೆ ಈ ಪ್ರಮುಖ ಪ್ರಯೋಜನಗಳಿವೆ

* ಕ್ಯಾನ್ಸರ್ ಕಣಗಳನ್ನು ತಡೆಗಟ್ಟುತ್ತದೆ
* ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ, ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ
* ಹೃದಯದ ಆರೋಗ್ಯಕ್ಕೆ ಒಳ್ಳೆಯದು
*ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
* ನೆನಪಿನ ಶಕ್ತಿಗೆ ಒಳ್ಳೆಯದು
* ಕಣ್ಣಿನ ದೃಷ್ಟಿಗೆ ಒಳ್ಳೆಯದು
* ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
* ಉರಿಯೂತ ಕಡಿಮೆ ಮಾಡುತ್ತದೆ
* ತ್ವಚೆ ಹೊಳಪು ಹೆಚ್ಚಿಸುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಶಾಸಕ ಶರತ್ ಬಚ್ಚೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್.

Fri Mar 3 , 2023
  ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೆ ತಡೆಯೊಡ್ಡಿರುವ ಸಚಿವ ಎಂ ಟಿ ಬಿ ನಾಗರಾಜ್ ಅವರ ಸೇಡಿನ ಕ್ರಮ ಪ್ರತಿಭಟಿಸಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಗುರುವಾರ ರಾತ್ರಿ ಧರಣಿ ನಡೆಸಿದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial