ಆಫ್ಘಾನ್ ಸೇನೆ ವಾಪಸ್ ಬ್ರಿಟನ್‌ಗೆ ಕರಾಳ ಅಧ್ಯಾಯ.

ಅಮೆರಿಕಾ ಸೇನಾಪಡೆ ಹಿಂದಕ್ಕೆ ಸರಿದ ಬಳಿಕ ಸದ್ಯ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಪಡೆ ನಾಗರಿಕರ ಮೇಲೆ ಯಾವ ರೀತಿ ದೌರ್ಜನ್ಯ ನಡೆಸುತ್ತಿದೆ ಎಂದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಇಂಗ್ಲೆಂಡ್‌ನ ಕನ್ಸರ್ವೇಟಿವ್ ಪಕ್ಷದ ಹಿರಿಯ ಸಂಸದರೊಬ್ಬರು ಕೂಡ ಆಫ್ಘಾನ್ ನೆಲದಿಂದ ಬ್ರಿಟನ್ ಸೇನೆ ಹಿಂದಕ್ಕೆ ಸರಿದಿದ್ದು, ನಮ್ಮ ದೇಶದ ಪಾಲಿಗೆ ಕರಾಳ ಅಧ್ಯಾಯ ಎಂದು ತಿಳಿಸಿದ್ದಾರೆ.ಕನ್ಸರ್ವೇಟಿವ್ ಪಕ್ಷದ ಹಿರಿಯ ಸಂಸದ, ರಕ್ಷಣಾ ಸಮಿತಿಯ ನೇತೃತ್ವ ಹೊಂದಿರುವ ಟೊಬಿಯಾಸ್ ಎಲ್‌ವುಡ್ ಅವರು, ತಾಲಿಬಾನ್ ಅಧಿಕಾರಕ್ಕೆ ಮರಳಲು ಕಾರಣವಾದ ಆಫ್ಘಾನಿಸ್ತಾನದಿಂದ ಯುಕೆ ನಿರ್ಗಮನದ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆಫ್ಘಾನ್ ಇದೀಗ ಮತ್ತೊಮ್ಮೆ ಭಯೋತ್ಪಾದಕರ ಪಾಲಿಗೆ ಸ್ವರ್ಗವಾಗುತ್ತಿದೆ. ಯುಕೆಗೆ ಸ್ಥಳಾಂತರವಾಗುವ ಅರ್ಹತೆ ಹೊಂದಿರುವ ಸಾವಿರಾರು ಜನರು ಇನ್ನೂ ಆಫ್ಘಾನಿಸ್ತಾನದಲ್ಲಿ ಅಪಾಯದಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಟೊಬಿಯಾಸ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಕ್ಷಣಾ ಸಚಿವಾಲಯದ ವಕ್ತಾರರು, ಆಫ್ಘಾನಿಸ್ತಾನದಿಂದ ಸಾಧ್ಯವಾದಷ್ಟು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ನಾವು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ. ಆಫ್ಘಾನಿಸ್ತಾನದಲ್ಲಿ ಬ್ರಿಟನ್‌ನ ಸಶಸ್ತ್ರ ಪಡೆಗಳ ಪರ ಕೆಲಸ ಮಾಡಿದ ಆಫ್ಘಾನ್ ನಾಗರಿಕರಿಗೆ ನಾವು ಋಣಿಯಾಗಿದ್ದೇವೆ. ಅಲ್ಲದೆ ಇಲ್ಲಿಯವರೆಗೆ ನಾವು ಯೋಜನೆಯ ಅಡಿಯಲ್ಲಿ ೧೨,೧೦೦ ಕ್ಕೂ ಹೆಚ್ಚು ಅಲ್ಲಿನ ನಾಗರಿಕರನ್ನು ಸ್ಥಳಾಂತರಿಸಿದ್ದೇವೆ. ಸುಮಾರು ೩೦೦ ಅರ್ಹ ಆಫ್ಘನ್ನರು ಮತ್ತು ಅವರ ಕುಟುಂಬಗಳು ಬ್ರಿಟನ್‌ಗೆ ಮರಳಿ ಕರೆತರಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯಾಯಾಧೀಶರ ವರ್ಗಾವಣೆಗೆ ಕಾಲಮಿತಿ ಇಲ್ಲ ರಿಜಿಜು ತಿರುಗೇಟು.

Sun Feb 12 , 2023
ಹೈಕೋರ್ಟ್‌ಗಳ ನ್ಯಾಯಾಧೀಶರ ವರ್ಗಾವಣೆ ಮತ್ತು ಪದೋನ್ನತಿ ವಿಚಾರ ವಿಳಂಬ ಮಾಡಿದರೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಒಂದು ವಾರದ ನಂತರ ಪ್ರತಿಕ್ರಿಯಿಸಿರುವ ಕಾನುನು ಸಚಿವ ಕಿರಣ್ ರಿಜಿಜು ಯಾವುದೇ ಕಾಲಮಿತಿ ಇಲ್ಲ ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.೧೦ ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಯ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ತಿಳಿಸಿದ್ದಾರೆ. ನ್ಯಾಯಾಧೀಶರ ವರ್ಗಾವಣೆ ಮತ್ತು ಪದೋನ್ನತಿ ಪ್ರಕ್ರಿಯೆಯ ವಿವಿಧ […]

Advertisement

Wordpress Social Share Plugin powered by Ultimatelysocial